Karnataka Railways: ದೀಪಾವಳಿಗೆ ಬೆಂಗಳೂರು-ಕಲಬುರಗಿಗೆ ವಿಶೇಷ ರೈಲು ಸಂಚಾರ, ವೇಳಾಪಟ್ಟಿ ನಿಲ್ದಾಣಗಳು

ಬೆಂಗಳೂರು, ಅಕ್ಟೋಬರ್ 15: ದೀಪಾವಳಿ ಹಬ್ಬಕ್ಕೆ ದಿನಗಣನೇ ಆರಂಭವಾಗಿದೆ. ಬೆಂಗಳೂರಿನಂತರ ಪಟ್ಟಣಗಳಿಂದ ಊರುಗಳಿಗೆ ತೆರಳುವಾಗ ಹಬ್ಬದ ಸಂದರ್ಭದಲ್ಲಿ ಬಸ್‌ಗಳಿಗೆ ಹೆಚ್ಚಿನ ಟಿಕೆಟ್ ದರ ಇರುತ್ತದೆ. ಹೀಗಾಗಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲೆಂದೆ ನೈಋತ್ಯ ರೈಲ್ವೆ ವಲಯವು (SWR) ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕದ ಭಾಗಕ್ಕೆ ವಿಶೇಷ ರೈಲು ವ್ಯವಸ್ಥೆ ಮಾಡಿದೆ.

ಮಂಗಳವಾರ ನೈಋತ್ಯ ರೈಲ್ವೆಯು ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ದೀಪಾವಳಿ ಪ್ರಯುಕ್ತ ಬೆಂಗಳೂರಿನಿಂದ ಕಲಬುರಗಿಗೆ ಎರಡು ದಿನ ಈ ವಿಶೇಷ ರೈಲು ಸಂಚಾರ ಸೇವೆ ನೀಡಲಿದೆ. ಈ ರೈಲಿನ ವೇಳಾಪಟ್ಟಿ, ಸಮಯ, ದಿನಾಂಕಗಳು ಹಾಗೂ ನಿಲುಗಡೆ ನಿಲ್ದಾಣದ ಮಾಹಿತಿ ಇಲ್ಲಿದೆ.

SWR Will Run Bengaluru to Kalaburagi Special Trains for Deepavali Festival 2024

ಬೆಂಗಳೂರಿನ SMVT ರೈಲು ನಿಲ್ದಾಣದಿಂದ ಕಲಬುರಗಿದೆ ಈ ಎಕ್ಸ್‌ಪ್ರೆಸ್ ವಿಶೇಷ ಅಕ್ಟೋಬರ್ 30 ಮತ್ತು ನವೆಂಬರ್ 2ರಂದು ಎರಡು ಕಡೆಗೂ ಎರಡು ಟ್ರಿಪ್ ಹೊಡೆಯಲಿದೆ.

ನಿಲುಗಡೆ ನಿಲ್ದಾಣ ಮತ್ತು ಸಮಯದ ವಿವರ

ಬೆಂಗಳೂರಿನಿಂದ ಅಕ್ಟೋಬರ್ 30 ಮತ್ತು 31ರ ರಾತ್ರಿ 9:15 ಕ್ಕೆ ಪ್ರಯಾಣ ಆರಂಭಿಸುವ ಈ ರೈಲು ಮಾರನೇಯ ದಿನ ಬೆಳಗ್ಗೆ 7:40 ಕ್ಕೆ ಕಲಬುರಗಿ ನಿಲ್ದಾಣ ತಲುಪುತ್ತದೆ. ಈ ರೈಲು ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರಸ್ತೆ, ರಾಯಚೂರು, ಕೃಷ್ಣ, ಯಾದಗಿರಿ, ಮತ್ತು ಶಹಾಬಾದ್ ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತದೆ. ಅಂದು ಈ ಮಾರ್ಗದ ಪ್ರಯಾಣೀಕರಿಗೆ ಈ ರೈಲು ಸೇವೆ ಲಭ್ಯವಾಗಲಿದೆ.

ಮರಳಿ ಅಕ್ಟೋಬರ್ 31 ರಂದು ಮತ್ತು ನವೆಂಬರ್ 3ರಂದು ಕಲಬುರಗಿ ನಿಲ್ದಾಣದಿಂದ ಈ ವಿಶೇಷ ರೈಲು ಬೆಳಗ್ಗೆ 9:35 ಕ್ಕೆ ಪ್ರಯಾಣ ಆರಂಭಿಸುತ್ತದೆ. ಅದೇ ದಿನ ರಾತ್ರಿ 8:00 ಗಂಟೆಗೆ ಬೆಂಗಳೂರಿನ SMVT ನಿಲ್ದಾಣಕ್ಕೆ ಬಂದು ಸೇರುತ್ತದೆ. ಮರಳಿ ಅದೇ ಮಾರ್ಗದ ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತ ಸಾಗಿ ಬರಲಿದೆ ಎಂದು ನೈಋತ್ಯ ರೈಲ್ವೆಯು ಮಾಹಿತಿ ನೀಡಿದೆ.

ಈ ರೈಲಿಗೆ ಒಟ್ಟು 19 ಕೋಚ್‌ಗಳು

ಈ ಬೆಂಗಳೂರು-ಕಲಬುರಗಿ ವಿಶೇಷ ರೈಲು 12 ಜನರಲ್ ಸೆಕೆಂಡ್ ಕ್ಲಾಸ್ ಬೋಗಿ, 3 ಸ್ಲೀಪರ್ ಕ್ಲಾಸ್ ಬೋಗಿಗಳು, 2 ಎಸಿ ತ್ರೀ-ಟೈರ್ ಕೋಚ್, ಒಂದು ಲಗೇಜ್/ಬ್ರೇಕ್ ವ್ಯಾನ್ ಕಮ್ ಜನರೇಟರ್ ಕಾರ್ ಸೇರಿದಂತೆ ಒಟ್ಟು 19 ಕೋಚ್‌ಗಳನ್ನು ಹೊಂದಿರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+