Karnataka Rail: ಹುಬ್ಬಳ್ಳಿಯಿಂದ ಇಲ್ಲಿಗೆ ಹೊಸ ರೈಲು ಸೇವೆಗೆ ಚಾಲನೆ: ವೇಳಾಪಟ್ಟಿ ವಿವರ
SSS Hubballi-Kushtagi Train: ಉತ್ತರ ಕರ್ನಾಟಕದ ಧಾರವಾಡ, ಗದಗ, ಕೊಪ್ಪಳ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಹೊಸ ರೈಲ್ವೆ ಮಾರ್ಗವೊಂದು ಲೋಕಾರ್ಪಣೆ ಆಗಿದೆ. ಇಂದಿನಿಂದ ಹೊಸ ಮಾರ್ಗದಲ್ಲಿ ನೂತನ ರೈಲಿನ ಸಂಚಾರ ಆರಂಭವಾಗಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಹಸಿರು ನಿಶಾನೆ ತೋರಿಸಿದ್ದಾರೆ. ಹಾಗಾದರೆ ಹೊಸ ರೈಲಿನ ಸಂಚಾರ ಮಾರ್ಗ, ನಿಲ್ದಾಣಗಳು, ಸಮಯ ಹಾಗೂ ವೇಳಾಪಟ್ಟಿ ಮಾಹಿತಿ ಇಲ್ಲಿ ತಿಳಿಯಿರಿ.
ಹುಬ್ಬಳ್ಳಿ-ಕುಷ್ಟಗಿ ನಡುವೆ ಹೊಸ ದೈನಂದಿನ ಎಕ್ಸ್‌ಪ್ರೆಸ್ ರೈಲು ಸೇವೆ ಉತ್ತರ ಕರ್ನಾಟಕದ ರೈಲು ಸಂಪರ್ಕವನ್ನು ಹೆಚ್ಚಿಸುತ್ತದೆ. ನೈರುತ ರೈಲ್ವೆಯು ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬಳ್ಳಿ ಜಂಕ್ಷನ್ ಮತ್ತು ಕುಷ್ಟಗಿ ನಿಲ್ದಾಣಗಳ ನಡುವೆ ನಿತ್ಯ ಸಂಚರಿಸಲಿದೆ.

ಕುಷ್ಟಗಿ-ಎಸ್‌ಎಸ್‌ಎಸ್ ಹುಬ್ಬಳ್ಳಿ ಉದ್ಘಾಟನಾ ವಿಶೇಷ ಎಕ್ಸ್‌ಪ್ರೆಸ್ (ಒನ್ ವೇ) ರೈಲು ಗದಗ ಮಾರ್ಗವಾಗಿ ಸಂಚರಿಸಲಿದೆ. ಮೇ 15ರಿಂದ ಸಾರ್ವಜನಿಕ ಸೇವೆಗೆ ಮುಕ್ತವಾಗಿದೆ. ಈ ವಿಶೇಷ ರೈಲು 2 ಎಸ್‌ಎಲ್‌ಆರ್/ಡಿ ಮತ್ತು 6 ಸಾಮಾನ ದಿತೀಯ ದರ್ಜೆ/ಸೀಪರ್ ದರ್ಜೆಯ ಬೋಗಿಗಳನ್ನು ಹೊಂದಿದೆ.
ಕುಷ್ಟಗಿಯಿಂದ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳಿಗೆ ಚಲಿಸಲಿದೆ. ಮಾರ್ಗ ಮಧ್ಯೆ ಈ ರೈಲು ಲಿಂಗನಬಂಡಿ, ಹನಮಾಪೂರ, ಯಲಬುರ್ಗಾ, ಸಂಗನಾಳ, ಕುಕನೂರು, ತಳಕಲ್, ಬನ್ನಿಕೊಪ್ಪ, ಸೋಂಪುರ ರೋಡ್, ಹಳ್ಳಿಗುಡಿ ಹಾಲ್, ಹರ್ಲಾಪುರ, ಕಣಗಿನಹಾಳ, ಗದಗ, ಹುಲಕೋಟಿ, ಅಣ್ಣಿಗೇರಿ, ಶಿಶಿವಿನಹಳ್ಳಿ, ಹೆಬಸೂರ ಮತ್ತು ಕುಸುಗಲ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ನಿಯಮಿತ ರೈಲು ಕಾರ್ಯಾಚರಣೆ
* ಎಸ್‌ಎಸ್‌ಎಸ್ ಹುಬ್ಬಳ್ಳಿ - ಕುಷ್ಟಗಿ ದೈನಂದಿನ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17327 ) ಮೇ 16 ರಿಂದ ನಿಯಮಿತ ಸೇವೆ ಆರಂಭಿಸಲಿದೆ.
* ಕುಷ್ಟಗಿ-ಎಸ್‌ಎಸ್‌ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್‌ಪ್ರೆಸ್ ರೈಲು (17328) ಮೇ 17 ರಿಂದ ನಿಯಮಿತ ಸೇವೆಯನ್ನು ಪ್ರಾರಂಭಿಸಲಿದೆ.
* ರೈಲು ಸಂಖ್ಯೆ 17327 ಎಸ್‌ಎಸ್‌ಎಸ್ ಹುಬಳಿ-ಕುಷ್ಟಗಿ ದೈನಂದಿನ ಎಕ್ಸ್‌ಪ್ರೆಸ್ ರೈಲು ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಸಂಜೆ 5:00 ಗಂಟೆಗೆ ಹೊರಟು ಅದೇ ದಿನ ರಾತ್ರಿ 8:40 ಕ್ಕೆ ಕುಷ್ಟಗಿಯನ್ನು ತಲುಪಲಿದೆ.
ಮಾರ್ಗ ಮಧ್ಯೆ, ಈ ರೈಲು ಕುಸಗಲ್ (05:14 ಗಂಟೆಗೆ ಬರಲಿದೆ) ಅಲ್ಲಿಂದ ಹನಮಾಪುರ (05:24ಗಂಟೆ), ಯಲಬುರ್ಗಾ (05:28pm), ಸಂಗನಾಳ (05:45pm), ಕುಕನೂರು (05:54, ತಲಕಲ್ (06:10), ಬನ್ನಿಕೊಪ್ಪ (06:19), ಸೋಂಪುರ ರಸ್ತೆ (06:27), ಹಳ್ಳಿಗುಡಿ ಹಾಲ್ಟ್ (06:31pm), ಹರ್ಲಾಪುರ (06:35), ಕಣಗಿನಹಾಳ (06:43pm), ಗದಗ (06:50pm), ಹುಲಕೋಟಿ (07:12pm), ಅಣ್ಣಿಗೇರಿ (07:23/07:24 pm), ಶಿಶುವಿನಹಳ್ಳಿ (07:33pm), ಹೆಬಸೂರು (07:42pm) ಮತ್ತು ಲಿಂಗನಬಂಡಿ (07:56pm) ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಮರಳಿ ಬರುವಾಗ ಇದೇ ರೈಲು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಈ ವಿಶೇಷ ದೈನಂದಿನ ಎಕ್ಸ್‌ಪ್ರೆಸ್ ರೈಲುಗಳು ಒಟ್ಟು 11 ಬೋಗಿಗಳನ್ನು ಹೊಂದಿವೆ. ಅವುಗಳಲ್ಲಿ 9 ಸಾಮಾನ್ಯ ದ್ವಿತೀಯ ದರ್ಜೆಯ ಮತ್ತು 2 ದ್ವಿತೀಯ ದರ್ಜೆಯ ಲಗೇಜ್ ಕಮ್ ಗಾರ್ಡ್ ಬ್ರೇಕ್ ವ್ಯಾನ್‌ಗಳು/ದಿವ್ಯಾಂಗರ ಬೋಗಿಗಳು ಸೇರಿವೆ ಎಂದು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹೊಸ ದೈನಂದಿನ ಎಕ್ಸ್‌ಪ್ರೆಸ್ ಸೇವೆಯು ಈ ಭಾಗದ ಪ್ರಯಾಣಿಕರು, ವಿದ್ಯಾರ್ಥಿಗಳು, ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ವೇಗವಾದ ಮತ್ತು ಅನುಕೂಲಕರ ಪ್ರಯಾಣವನ್ನು ಒದಗಿಸುವ ಮೂಲಕ ಉತ್ತರ ಕರ್ನಾಟಕದ ಪ್ರಮುಖ ಪಟಣಗಳ ನಡುವಿನ ಸಂಪರ್ಕವನು ಹೆಚಿಸುವ ನಿರೀಕ್ಷೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications