Karnataka Rails: ರಾಜ್ಯದ ಈ 08 ಮಾರ್ಗದ ರೈಲುಗಳಿಗೆ ಹೆಚ್ಚುವರಿ ಬೋಗಿ ಜೋಡಣೆ

ಬೆಂಗಳೂರು, ಮೇ 28: ಕರ್ನಾಟಕ ವ್ಯಾಪ್ತಿ ಒಳಗೊಂಡಂತೆ ನೈಋತ್ಯ ರೈಲ್ವೆ ವಲಯದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುವ ಕಾರಣ, ಅದರ ನಿರ್ವಹಣೆಗಾಗಿ ಹಾಲಿ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಕೆ ಮಾಡಲಾಗುತ್ತದೆ. ಪ್ರಯಾಣಿಕರಿಗೆ ದಟ್ಟಣೆ ಇಲ್ಲದ ಸುಗಮ, ಆರಾಮದಾಯಕ ಸಂಚಾರಕ್ಕಾಗಿ ಈ ಕೆಳಗಿನ ಮಾರ್ಗಗಳ ವಿವಿಧ ಎಂಟು ರೈಲುಗಳಿಗೆ ಹೆಚ್ಚುವರಿ ಕೋಚ್‌ಗಳನ್ನು ತಾತ್ಕಾಲಿಕ ಜೋಡಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

* ಮೈಸೂರು -ತಾಳಗುಪ್ಪ- ಮೈಸೂರು ಡೈಲಿ ಎಕ್ಸ್‌ಪ್ರೆಸ್‌ಗೆ ರೈಲಿಗೆ (ಸಂಖ್ಯೆ 16227/16228) ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ಜನರಲ್ ಸೆಕೆಂಡ್ ಕ್ಲಾಸ್ (ಜಿಎಸ್) ಕೋಚ್ ಅಳವಡಿಸಲಾಗುತ್ತದೆ. ರೈಲು (16227) ಮೈಸೂರು ನಿಂದ ತಾಳಗುಪ್ಪ ರೈಲು ಹೆಚ್ಚುವರಿ ಬೋಗಿ ಸಹಿತ ಜೂನ್ 2 ರಿಂದ ಜುಲೈ 1 ಸೇವೆ ನೀಡಲಿದೆ. ರೈಲಿಗೆ (16228) ತಾತ್ಕಾಲಿಕ ಅಳವಡಿಕೆ ಸೇವೆ ಜೂನ್ 3 ರಿಂದ ಜುಲೈ 2ರವರೆಗೆ ಅನ್ವಯವಾಗಲಿದೆ.

SWR Has Announces Temporary Coach Augmentation for 8 Key Trains from June to July 2025

* ಕೆಎಸ್‌ಆರ್ ಬೆಂಗಳೂರು - ಸಾಂಗ್ಲಿ- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್‌ಗೆ ರೈಲಿಗೆ (16589/16590) ತಾತ್ಕಾಲಿಕವಾಗಿ ಒಂದು ಎಸಿ ಫಸ್ಟ್ ಕ್ಲಾಸ್ ಬೋಗಿ ಜೋಡಿಸಲಾಗಿದೆ. ಬೆಂಗಳೂರು-ಸಾಂಗ್ಲಿ (16589) ರೈಲಿಗೆ ಜೂನ್ 2 ರಿಂದ ಜುಲೈ 1ರವರೆಗೆ ಜಾರಿಗೆ ಬರಲಿದೆ. ಮರಳಿ ಅದೇ ರೈಲು (16590) ಹೆಚ್ಚುವರಿ ಬೋಗಿ ಸಹಿತ ಜೂನ್ 3 ರಿಂದ ಜುಲೈ 2ರವರೆಗೆ ಸಂಚರಿಸಲಿದೆ.

* ಕೆಎಸ್ಆರ್ ಬೆಂಗಳೂರು - ಬೆಳಗಾವಿ - ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿಗೆ (20653/20654) ತಾತ್ಕಾಲಿಕವಾಗಿ ಒಂದು ಎಸಿ ಪ್ರಥಮ ದರ್ಜೆ ಕೋಚ್ ಜೋಡಿಸಲಾಗಿದೆ. ಈ ಎರಡು ಬದಿಯ ರೈಲುಗಳು ಹೆಚ್ಚುವರಿ ಬೋಗಿ ಸಹಿತ ಜೂನ್ 2 ಮತ್ತು 3 ರಿಂದ ಜುಲೈ 2ರವರೆಗೆ ಸೇವೆ ನೀಡಲಿವೆ.

* ಯಶವಂತಪುರ - ಚಂಡೀಗಢ- ಯಶವಂತಪುರ ಎಕ್ಸ್‌ಪ್ರೆಸ್ ರೈಲುಗಳಿಗೆ (22685/22686) ತಾತ್ಕಾಲಿಕವಾಗಿ ಒಂದು ಎಸಿ 3-ಟೈರ್ ಕೋಚ್ ಜೋಡಿಸಲಾಗಿದ್ದು, ಹೆಚ್ಚುವರಿ ಬೋಗಿ ಸಹಿತ ರೈಲುಗಳು ಸೇವೆ ‌ಜೂನ್ 7 ಮತ್ತು ಜೂನ್ 10ರಿಂದ ಜುಲೈ 5ರವರೆಗೆ ಕಾಯಾಚರಣೆ ಮಾಡಲಿವೆ.

* ಕೆಎಸ್ಆರ್ ಬೆಂಗಳೂರು - ಎಸ್ಎಸ್ಎಸ್ ಹುಬ್ಬಳ್ಳಿ - ಕೆಎಸ್ಆರ್ ಬೆಂಗಳೂರು ಜನ ಶತಾಬ್ದಿ ಎಕ್ಸ್‌ಪ್ರೆಸ್ ರೈಲು (12079/12080) ತಾತ್ಕಾಲಿಕವಾಗಿ ಒಂದು ಎರಡನೇ ದರ್ಜೆಯ ಚೇರ್ ಕಾರ್ ಕೋಚ್‌ನೊಂದಿಗೆ ಕಾರ್ಯಾಚರಣೆ ಮಾಡಲಾಗುತ್ತದೆ. ಈ ಹೆಚ್ಚುವರಿ ಬೋಗಿಗಳೊಂದಿಗೆ ರೈಲು ಸೇವೆ ಜೂನ್ 2 ರಿಂದ ಜುಲೈ 1ರವರೆಗೆ ಜಾರಿಗೆ ಬರಲಿದೆ.

* ಕೆಎಸ್ಆರ್ ಬೆಂಗಳೂರು -ಶಿವಮೊಗ್ಗ ಪಟ್ಟಣ- ಕೆಎಸ್ಆರ್ ಬೆಂಗಳೂರು ಜನ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿಗೆ (12089/12090) ತಾತ್ಕಾಲಿಕವಾಗಿ ಎರಡನೇ ದರ್ಜೆಯ ಒಂದು ಚೇರ್ ಕಾರ್ (1-LSCZ) ಅಳವಡಿಲಾಗಿದೆ. ಈ ಮಾರ್ಗದ ಎರಡು ಬದಿಯ ರೈಲು ಸೇವೆಗಳು ಹೆಚ್ಚುವರಿ ಬೋಗಿಯೊಂದಿಗೆ ಜೂನ್ 2 ರಿಂದ ಜುಲೈ 2ವರೆಗೆ ಜಾರಿಗೆ ಬರಲಿದೆ.

* ಯಶವಂತಪುರ -ಹಜರತ್ ನಿಜಾಮುದ್ದೀನ್- ಯಶವಂತಪುರ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲುಗಳಿಗೆ (12649/12650) ತಾತ್ಕಾಲಿಕವಾಗಿ ಒಂದು ಎಸಿ 3-ಟೈರ್ ಕೋಚ್ ಜೋಡಿಸಲಾಗಿದೆ. ಈ ಮಾರ್ಗದ ಎರಡು ಬದಿಯ ರೈಲುಗಳು ಅಧಿಕ ಬೋಗಿ ಸಮೇತ ಜೂನ್ 4 ಜೂನ್ 10ರವರೆಗೆ ಸೇವೆ ನೀಡಲಿವೆ.

* ಯಶವಂತಪುರ- ಹಜರತ್ ನಿಜಾಮುದ್ದೀನ್- ಯಶವಂತಪುರ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲುಗಳಿಗೆ (ಸಂಖ್ಯೆ 12629/12630) ತಾತ್ಕಾಲಿಕವಾಗಿ ಒಂದು ಎಸಿ 3-ಟೈರ್ ಕೋಚ್ ಅಳವಡಿಸಲಾಗಿದೆ. ಜೂನ್ 5ರಿಂದ ಸೇವೆ ಆರಂಭಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+