ನೈಋತ್ಯ ರೈಲ್ವೆಯಿಂದ ಹಬ್ಬದ ವಿಶೇಷ ರೈಲು ಸೇವೆ ವಿಸ್ತರಣೆ; ಪಟ್ಟಿ

ಬೆಂಗಳೂರು, ನವೆಂಬರ್ 27 : ನೈಋತ್ಯ ರೈಲ್ವೆ ನವೆಂಬರ್‌ನಲ್ಲಿ ದಸರಾ ಮತ್ತು ದೀಪಾವಳಿ ಹಬ್ಬದ ಅಂಗವಾಗಿ ವಿವಿಧ ಸ್ಥಳಗಳಿಗೆ ಹಬ್ಬದ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆರಂಭಿಸಿತ್ತು.

ಈ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರದ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಡಿಸೆಂಬರ್ ತಿಂಗಳ ಕೊನೆಯ ತನಕ ಹಬ್ಬದ ವಿಶೇಷ ರೈಲುಗಳು ನಿಗದಿತ ವೇಳಾಪಟ್ಟಿ ಅನ್ವಯ ಸಂಚಾರ ನಡೆಸಲಿವೆ.

ಕೆಎಸ್ಆರ್ ಬೆಂಗಳೂರು-ಜೋಧಪುರ ನಡುವೆ ವಾರಕ್ಕೆ 2 ಬಾರಿ ಸಂಚಾರ ನಡೆಸುವ ರೈಲನ್ನು ಡಿಸೆಂಬರ್ 30ರ ತನಕ ವಿಸ್ತರಣೆ ಮಾಡಲಾಗಿದೆ. ಜೋಧಪುರ-ಕೆಎಸ್ಆರ್ ಬೆಂಗಳೂರು ರೈಲನ್ನು 2021ರ ಜನವರಿ 2ರ ತನಕ ವಿಸ್ತರಿಸಲಾಗಿದೆ.

SWR Extended Festival Special Trains List Of Trains

ಮೈಸೂರು-ಅಜ್ಮೀರ್ ನಡುವೆ ವಾರಕ್ಕೆ ಎರಡು ಬಾರಿ ಸಂಚಾರ ನಡೆಸುವ ಹಬ್ಬದ ವಿಶೇಷ ರೈಲನ್ನು ಡಿಸೆಂಬರ್ 31ರ ತನಕ ವಿಸ್ತರಣೆ ಮಾಡಲಾಗಿದೆ. ಅಜ್ಮೀರ್-ಮೈಸೂರು ನಡುವಿನ ರೈಲನ್ನು ಜನವರಿ 3ರ ತನಕ ವಿಸ್ತರಣೆ ಮಾಡಲಾಗಿದೆ.

ಮೈಸೂರು-ಟ್ಯುಟಿಕಾರಿನ್ ಪ್ರತಿದಿನದ ರೈಲು, ಕೆಎಸ್ಆರ್‌ ಬೆಂಗಳೂರು-ಕನ್ಯಾಕುಮಾರಿ ಪ್ರತಿದಿನದ ರೈಲು, ಕನ್ಯಾಕುಮಾರಿ-ಕೆಎಸ್ಆರ್ ಬೆಂಗಳೂರು ಪ್ರತಿದಿನದ ರೈಲು, ಬೆಂಗಳೂರು ಕಂಟೋನ್ಮೆಂಟ್-ಭುವನೇಶ್ವರ ಮಂಗಳವಾರದ ರೈಲು, ಭುವನೇಶ್ವರ-ಬೆಂಗಳೂರು ಕಂಟೋನ್ಮೆಂಟ್ ಭಾನುವಾರದ ರೈಲನ್ನು ಸಹ ವಿಸ್ತರಣೆ ಮಾಡಲಾಗಿದೆ.

ವಿಸ್ತರಣೆ ಆಗಿರುವ ರೈಲಿನ ಪಟ್ಟಿ ಇಲ್ಲಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+