SWR: ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್
ಬೆಂಗಳೂರು, ಜುಲೈ 01: ಕರ್ನಾಟಕ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ಒಂದಷ್ಟು ರೈಲ್ವೆ ಸೇವೆಗಳನ್ನು ವಿಸ್ತರಣೆ ಮಾಡಿದೆ. ಅಲ್ಲದೇ ಉತ್ತರ ಕರ್ನಾಟಕದ ಎರಡು ಪ್ರಮುಖ ನಿಲ್ದಾಣಗಳಲ್ಲಿ ಪ್ರಾಯೋಗಿಕ ನಿಲುಗಡೆಯನ್ನು ಮುಂದುವರಿಸಿದೆ. ಯಶವಂತಪುರ-ದಾಸನಪುರ ಎಕ್ಸ್‌ಪ್ರೆಸ್ ರೈಲು ಸೇವೆ ಇನ್ನಷ್ಟು ದಿನ ಪ್ರಯಾಣಿಕರಿಗೆ ಲಭ್ಯವಾಗಲಿದೆ. ನಿಲ್ದಾಣದ ನಿಲುಗಡೆ ಸಮಯ ಜುಲೈ 1ರಿಂದ ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
* ರೈಲು ಸಂಖ್ಯೆ 20669/20670 ಎಸ್‌ಎಸ್‌ಎಸ್ ಹುಬ್ಬಳ್ಳಿ - ಪುಣೆ ಎಸ್‌ಎಸ್‌ಎಸ್ ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ಘಟಪ್ರಭಾ ನಿಲ್ದಾಣದಲ್ಲಿ ನಿಲುಗಡೆ ಮುಂದುವರಿಸಲು ನಿರ್ಧರಿಸಲಾಗಿದೆ.
* ಯಶವಂತಪುರ -ಪಂಢರಪುರ- ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (16541/16542 ) ಘಟಪ್ರಭಾ ಮತ್ತು ರಾಯಬಾಗ್ ನಿಲ್ದಾಣಗಳಲ್ಲಿ ನಿಲುಗಡೆ ಮುಂದುವರಿಸಲಾಗುತ್ತದೆ.

ವಿಶೇಷ ರೈಲುಗಳ ಸಂಚಾರ 2026ರ ವರೆಗೆ ವಿಸ್ತರಣೆ
ಪ್ರಯಾಣಿಕರ ಅನುಕೂಲಕ್ಕಾಗಿ, ಯಶವಂತಪುರ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ (ಸಂಖ್ಯೆ 06545/06546) ಸಂಚಾರದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ.
ಈ ಹಿಂದೆ ಜೂನ್ 30, 2025 ರವರೆಗೆ ಮಾತ್ರ ಸಂಚರಿಸಲಿದೆ ಎಂದು ತಿಳಿಸಲಾಗಿದ್ದ ರೈಲು ಸಂಖ್ಯೆ 06545 ಯಶವಂತಪುರ ರೈಲು, ಅದೇ ರೀತಿ, ಜುಲೈ 1, 2025 ರವರೆಗೆ ಓಡಾಟ ನಡೆಸುವುದಾಗಿ ಈ ಹಿಂದೆ ಸೂಚಿಸಲಾಗಿದ್ದ (06546) ವಿಜಯಪುರ - ಯಶವಂತಪುರ ಎಕ್ಸ್‌ಪ್ರೆಸ್ ವಿಶೇಷ ರೈಲು, ಈಗ 2025 ರ ಜುಲೈ 2 ರಿಂದ 2026ರ ಜನವರಿ 1 ರವರೆಗೆ ವಿಸ್ತರಿಸಲಾಗಿದೆ.
ಬೆಂಗಳೂರು ವಿಶೇಷ ರೈಲುಗಳ ಸಂಚಾರ ವಿಸ್ತರಣೆ
ಪ್ರಯಾಣಿಕರ ಹೆಚ್ಚುವರಿ ಬೇಡಿಕೆ ಪೂರೈಸಲು ಪೂರ್ವ ಮಧ ರೈಲ್ವೆಯು ದಾನಾಪುರ ಮತ್ತು ಬೆಂಗಳೂರು ನಡುವೆ ಸಂಚರಿಸುವ ವಿಶೇಷ ರೈಲುಗಳ ಅವಧಿಯನ್ನು ವಿಸ್ತರಿಸಿ ಅಧಿಸೂಚನೆ ಹೊರಡಿಸಲಾಗಿದೆ. ಪ್ರಯಾಣಿಕರು ಗಮನಿಸಿ ಓಡಾಡಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.
ದಾನಾಪುರ - ಎಸ್‌ಎಂವಿಟಿ ಬೆಂಗಳೂರು ದಿ-ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (03251) ಈ ಹಿಂದೆ ಜೂನ್ 29, 2025 ರವರೆಗೆ ಸಂಚರಿಸಲಿದೆ ಎಂದು ಹೇಳಲಾಗಿತ್ತು. ಇದೀಗ ಅದನ್ನು ಜುಲೈ 28 ರವರೆಗೆ ವಿಸ್ತರಿಸಲಾಗಿದೆ. ಎಸ್‌ಎಂವಿಟಿ ಬೆಂಗಳೂರು - ದಾನಾಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (03252) ಜುಲೈ 01 ರವರೆಗೆ ಮಾತ್ರವಲ್ಲದೇ ಜುಲೈ 02 ರಿಂದ ಜುಲೈ 30 ರವರೆಗೆ ವಿಸ್ತರಿಸಲಾಗಿದೆ. ಈ ಎರಡೂ ರೈಲುಗಳು ವಿಸ್ತ್ರತ ಅವಧಿಯಲ್ಲಿ ಪ್ರತಿ ದಿಕ್ಕಿನಲ್ಲಿ ಒಟ್ಟು 9 ಟ್ರಿಪ್ ಸೇವೆ ನೀಡಲಿವೆ.
ದಾನಾಪುರ ಎಸ್‌ಎಂವಿಟಿ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 03259) ಜೂನ್ 24 ರವರೆಗೆ ಸಂಚರಿಸಲಿದೆ ಎಂದು ತಿಳಿಸಲಾಗಿತ್ತು. ಆ ರೈಲನ್ನು ಜುಲೈ 01 ರಿಂದ ಜುಲೈ 29 ರವರೆಗೆ ವಿಸ್ತರಣೆ ಮಾಡಲಾಗಿದೆ. ಇನ್ನು ಎಸ್‌ಎಂವಿಟಿ ಬೆಂಗಳೂರು - ದಾನಾಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ (03260) ರೈಲು ಜುಲೈ 03 ರಿಂದ ಜುಲೈ 31, 2025 ರವರೆಗೆ ಸೇವೆ ನೀಡಲಿದೆ. ಈ ವಿಸ್ತೃತ ಎರಡು ರೈಲುಗಳು ಪ್ರತಿ ದಿಕ್ಕಿನಲ್ಲಿ ಒಟ್ಟು 5 ಟ್ರಿಪ್ ಸೇವೆ ನೀಡಲಿವೆ ಎಂದು ಪ್ರಕಟಣೆಯಲ್ಲಿ ನೈಋತ್ಯ ರೈಲ್ವೆ ತಿಳಿಸಿದೆ.












Click it and Unblock the Notifications