ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಮನಿಸಿ; ಫೆ.8ರ ತನಕ ಹುಬ್ಬಳ್ಳಿ-ಬೆಂಗಳೂರು ರೈಲು ಸೇವೆ ವ್ಯತ್ಯಯ

ನೈಋತ್ಯ ರೈಲ್ವೆಯು ಜೋಡಿ ಹಳಿ ಕಾಮಗಾರಿಗಳ ಕಾರಣಗಳಿಂದಾಗಿ 24 ರೈಲುಗಳ ಕಾರ್ಯಾಚರಣೆಯಲ್ಲಿ ಬದಲಾವಣೆ ಮಾಡಿದೆ. ರೈಲುಗಳ ವಿವರಗಳು ಹೀಗಿವೆ.

|
Google Oneindia Kannada News

ಬೆಂಗಳೂರು, ಜನವರಿ 31; ನೈಋತ್ಯ ರೈಲ್ವೆಯು ಜೋಡಿ ಹಳಿ ಕಾಮಗಾರಿಗಳ ಕಾರಣಗಳಿಂದಾಗಿ ವಿವಿಧ ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ ಅಥವಾ ಭಾಗಶಃ ಸ್ಥಗಿತಗೊಳಿಸಿದೆ. ಇದರಿಂದಾಗಿ ಬೆಂಗಳೂರು ಮೂಲಕ ಉತ್ತರ ಕರ್ನಾಟಕ ಭಾಗಕ್ಕೆ ಸಾಗುವ ರೈಲುಗಳ ಸಂಚಾರದಲ್ಲಿ ಅಡಚಣೆ ಉಂಟಾಗಲಿದೆ.

ಹುಬ್ಬಳ್ಳಿ ದಕ್ಷಿಣ ಮತ್ತು ಸಂಶಿ ನಡುವಿನ ಜೋಡಿ ಹಳಿ ಮಾರ್ಗದ ಕಾಮಗಾರಿ ಹಿನ್ನಲೆಯಲ್ಲಿ ವಿವಿಧ ರೈಲುಗಳ ವೇಳಾಪಟ್ಟಿಯಲ್ಲಿಯೂ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಕೆಲವು ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

Vande Bharat Express : ಬೆಂಗಳೂರು-ಧಾರವಾಡ ರೈಲಿಗೆ 8 ಬೋಗಿ, 5 ಗಂಟೆ ಪ್ರಯಾಣ!Vande Bharat Express : ಬೆಂಗಳೂರು-ಧಾರವಾಡ ರೈಲಿಗೆ 8 ಬೋಗಿ, 5 ಗಂಟೆ ಪ್ರಯಾಣ!

ಫೆಬ್ರವರಿ 8ರ ತನಕ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸುಮಾರು 24 ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ರೈಲು ಪ್ರಯಾಣಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ. ರೈಲು ಪ್ರಯಾಣ ಮಾಡುವ ಜನರು ಈ ಬದಲಾವಣೆಗಳ ಬಗ್ಗೆ ಮಾಹಿತಿ ಪಡೆದಿರುವುದು ಉತ್ತಮ.

Mumbai-Surathkal train; ವಿಶೇಷ ರೈಲು ವೇಳಾಪಟ್ಟಿ, ನಿಲ್ದಾಣಗಳು Mumbai-Surathkal train; ವಿಶೇಷ ರೈಲು ವೇಳಾಪಟ್ಟಿ, ನಿಲ್ದಾಣಗಳು

ಬೆಂಗಳೂರು ನಗರದಿಂದ ಉತ್ತರ ಕರ್ನಾಟಕ ಭಾಗಕ್ಕೆ ಸಾಗುವ ರೈಲುಗಳು ಮಾತ್ರವಲ್ಲ. ಬೇರೆ ರಾಜ್ಯಗಳಿಗೆ ಸಂಚಾರ ನಡೆಸುವ ರೈಲುಗಳಲ್ಲಿಯೂ ಬದಲಾವಣೆ ಮಾಡಲಾಗಿದೆ. ಫೆಬ್ರವರಿ 8ರ ಬಳಿಕ ಎಂದಿನಂತೆ ರೈಲುಗಳು ಸಂಚಾರ ನಡೆಸಲಿವೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

Union Budget; ಬೆಂಗಳೂರು-ಮಂಗಳೂರು ರೈಲು ಕಾರವಾರ ತನಕ ವಿಸ್ತರಣೆ? Union Budget; ಬೆಂಗಳೂರು-ಮಂಗಳೂರು ರೈಲು ಕಾರವಾರ ತನಕ ವಿಸ್ತರಣೆ?

ರದ್ದುಗೊಂಡಿರುವ ರೈಲುಗಳು

ರದ್ದುಗೊಂಡಿರುವ ರೈಲುಗಳು

* ರೈಲು ನಂಬರ್ 16214 ಹುಬ್ಬಳ್ಳಿ-ಅರಸೀಕೆರೆ ಎಕ್ಸ್‌ಪ್ರೆಸ್ ಜನವರಿ 31 ರಿಂದ ಫೆಬ್ರವರಿ 9ರ ತನಕ ರದ್ದಾಗಿದೆ. ರೈಲು ನಂಬರ್ 16213 ಅರಸೀಕೆರೆ-ಹುಬ್ಬಳ್ಳಿ ರೈಲು ಫೆಬ್ರವರಿ 8ರ ತನಕ ರದ್ದು.

* ರೈಲು ಸಂಖ್ಯೆ 17347 ಹುಬ್ಬಳ್ಳಿ-ಚಿತ್ರದುರ್ಗ ಎಕ್ಸ್‌ಪ್ರೆಸ್ ಫೆಬ್ರವರಿ 7ರ ತನಕ ರದ್ದಾಗಿದೆ. ರೈಲು ನಂಬರ್ 17348 ಚಿತ್ರದುರ್ಗ-ಹುಬ್ಬಳ್ಳಿ ಎಕ್ಸ್‌ಪ್ರೆಸ್ ಫೆಬ್ರವರಿ 7ರ ತನಕ ರದ್ದಾಗಿದೆ.

* ರೈಲು ನಂಬರ್ 17325 ಬೆಳಗಾವಿ-ಮೈಸೂರು ವಿಶ್ವಮಾನವ ಎಕ್ಸ್‌ಪ್ರೆಸ್ ಮತ್ತು 17326 ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲು ಫೆಬ್ರವರಿ 7ರಂದು ಮಾತ್ರ ರದ್ದು.

* ಜೋಧ್‌ಪುರ-ಬೆಂಗಳೂರು ರೈಲು ನಂಬರ್ 16507 ಹುಬ್ಬಳ್ಳಿ, ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗವಾಗಿ ಫೆಬ್ರವರಿ 2 ಮತ್ತು 4ರಂದು ಬದಲಾವಣೆ ಮಾಡಲಾಗಿದೆ. ಹುಬ್ಬಳ್ಳಿ-ಹರಿಹರ ನಿಲ್ದಾಣ ಇರುವುದಿಲ್ಲ.

* ದಾದರ್-ತಿರುನಲ್ವೇಲಿ ರೈಲು ನಂಬರ್ 11021 ರೈಲನ್ನು ಹುಬ್ಬಳ್ಳಿ, ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗವಾಗಿ 31ನೇ ಜನವರಿ 1, 4, 7ನೇ ಫೆಬ್ರವರಿ ತನಕ ಬದಲಾಯಿಸಲಾಗಿದೆ. ಹುಬ್ಬಳ್ಳಿ, ಹರಿಹರ ನಿಲ್ದಾಣ ಇರುವುದಿಲ್ಲ.

ಭಾಗಶಃ ರದ್ದುಗೊಂಡಿರುವ ರೈಲುಗಳು

ಭಾಗಶಃ ರದ್ದುಗೊಂಡಿರುವ ರೈಲುಗಳು

* ರೈಲು ನಂಬರ್ 12079 ಬೆಂಗಳೂರು-ಹುಬ್ಬಳ್ಳಿ ಜನ ಶತಾಬ್ದಿ ಎಕ್ಸ್‌ಪ್ರೆಸ್ ಹರಿಹರ-ಹುಬ್ಬಳ್ಳಿ ನಡುವೆ ಫೆಬ್ರವರಿ 7ರ ತನಕ ಭಾಗಶಃ ರದ್ದು. ಹರಿಹರದಲ್ಲಿಯೇ ರೈಲು ನಿಲುಗಡೆಗೊಳ್ಳಲಿದೆ.

* ರೈಲು ನಂಬರ್ 12080 ಹುಬ್ಬಳ್ಳಿ-ಬೆಂಗಳೂರು ಜನ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ -ಹರಿಹರ ನಡುವೆ ಫೆಬ್ರವರಿ 7ರ ತನಕ ಭಾಗಶಃ ರದ್ದು. ಹುಬ್ಬಳ್ಳಿ ಬದಲು ಹರಿಹರದಿಂದ ರೈಲು ಹೊರಡಲಿದೆ.

* ರೈಲು ನಂಬರ್ 12778 ಕೊಚುವೇಲಿ-ಹುಬ್ಬಳ್ಳಿ ಹಾವೇರಿ-ಹುಬ್ಬಳ್ಳಿ ನಡುವೆ ಫೆಬ್ರವರಿ 2ರಂದು ಭಾಗಶಃ ರದ್ದು. ಖಾಲಿ ಬೋಗಿಯನ್ನು ಹುಬ್ಬಳ್ಳಿಗೆ ಸಾಗಿಸಲಾಗುತ್ತದೆ.

* ರೈಲು ನಂಬರ್ 11035 ದಾದರ್-ಮೈಸೂರು ಎಕ್ಸ್‌ಪ್ರೆಸ್ ರೈಲನ್ನು ಹುಬ್ಬಳ್ಳಿ, ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗಕ್ಕೆ ಫೆಬ್ರವರಿ 2ರಂದು ಬದಲಾಯಿಸಲಾಗಿದ್ದು, ಹುಬ್ಬಳ್ಳಿ, ಹರಿಹರ ನಿಲ್ದಾಣ ಇರುವುದಿಲ್ಲ.

* ರೈಲು ನಂಬರ್ 16209 ಅಜ್ಮೀರ್-ಮೈಸೂರು ಎಕ್ಸ್‌ಪ್ರೆಸ್ ರೈಲನ್ನು ಹುಬ್ಬಳ್ಳಿ, ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗವಾಗಿ ಫೆಬ್ರವರಿ 3 ಮತ್ತು 5ರಂದು ಬದಲಾವಣೆ ಮಾಡಲಾಗಿದೆ. ಹುಬ್ಬಳ್ಳಿ, ಹರಿಹರ ನಿಲುಗಡೆ ಇರುವುದಿಲ್ಲ.

ರೈಲುಗಳ ಮಾರ್ಗ ಬದಲಾವಣೆ

ರೈಲುಗಳ ಮಾರ್ಗ ಬದಲಾವಣೆ

* ದಾದರ್ ಪುದುಚೇರಿ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 11005 ಹುಬ್ಬಳ್ಳಿ, ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗವಾಗಿ ಫೆಬ್ರವರಿ 3, 5 ಮತ್ತು 6ರಂದು ಸಂಚಾರ ನಡೆಸಲಿದೆ. ಹುಬ್ಬಳ್ಳಿ, ಹರಿಹರ ನಿಲ್ದಾಣ ಇರುವುದಿಲ್ಲ.

* ರಾಮೇಶ್ವರಂ-ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 07356 ರೈಲನ್ನು ಹುಬ್ಬಳ್ಳಿ, ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗವಾಗಿ ಫೆಬ್ರವರಿ 5ರಂದು ಸಂಚಾರ ನಡೆಸಲಿದೆ.

* ರೈಲು ನಂಬರ್ 14805 ಯಶವಂತಪುರ-ಬರ್ಮಾರ್ ಎಕ್ಸ್‌ಪ್ರೆಸ್ ದಾವಣಗೆರೆ, ಹೊಸಪೇಟೆ ಬೈಪಾಸ್, ಗದಗ ಮಾರ್ಗವಾಗಿ ಫೆಬ್ರವರಿ 5ರಂದು ಸಂಚಾರ ನಡೆಸಲಿದೆ.

* ಯಶವಂತಪುರ-ಬಿಕನೇರ್ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 16587 ದಾವಣಗೆರೆ, ಹೊಸಪೇಟೆ ಬೈಪಾಸ್, ಗದಗ ಮಾರ್ಗವಾಗಿ ಫೆಬ್ರವರಿ 3 ಮತ್ತು 5ರಂದು ಸಂಚಾರ ನಡೆಸಲಿದೆ.

* ರೈಲು ನಂಬರ್ 20656 ಹುಬ್ಬಳ್ಳಿ-ಯಶವಂತಪುರ ರೈಲು ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗವಾಗಿ ಫೆಬ್ರವರಿ 4ರಂದು ಸಂಚಾರ ನಡೆಸಲಿದೆ.

ವೇಳಾಪಟ್ಟಿಯಲ್ಲಿ ಬದಲಾವಣೆಗಳು

ವೇಳಾಪಟ್ಟಿಯಲ್ಲಿ ಬದಲಾವಣೆಗಳು

* ರೈಲು ನಂಬರ್ 17392 ಹುಬ್ಬಳ್ಳಿ-ಬೆಂಗಳೂರು ಎಕ್ಸ್‌ಪ್ರೆಸ್ ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗವಾಗಿ ಫೆಬ್ರವರಿ 7ರಂದು ಸಂಚಾರ ನಡೆಸಲಿದೆ.

* ಪುದುಚೇರಿ-ದಾದರ್ ಎಕ್ಸ್‌ಪ್ರೆಸ್ 11006 ರೈಲು ದಾವಣಗೆರೆ, ಹೊಸಪೇಟೆ ಬೈಪಾಸ್, ಗದಗ ಮೂಲಕ ಫೆಬ್ರವರಿ 7ರಂದು ಸಂಚಾರ ನಡೆಸಲಿದೆ.

* ರೈಲು ನಂಬರ್ 11036 ಮೈಸೂರು-ದಾದರ್ ಎಕ್ಸ್‌ಪ್ರೆಸ್ ಫೆಬ್ರವರಿ 5ರಂದು 70 ನಿಮಿಷ ತಡವಾಗಿ ಸಂಚಾರ. 11006 ಪುರುಚೇರಿ-ದಾದರ್ ಎಕ್ಸ್‌ಪ್ರೆಸ್ ಜನವರಿ 31, ಫೆಬ್ರವರಿ 5ರಂದು 70 ನಿಮಿಷ ತಡ.

* ರೈಲು ಸಂಖ್ಯೆ 11022 ತಿರುನಲ್ವೇಲಿ-ದಾದರ್ ಫೆಬ್ರವರಿ 2, 3 ಮತ್ತು 6ರಂದು 70 ನಿಮಿಷ ತಡವಾಗಿ ಸಂಚಾರ

English summary
South Western Railway made some changes in the operation of a few trains due to works related to the doubled line between Saunshi and Hubballi South. As many as 24 trains have been affected till February 8th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X