Suryakumar Yadav: ಸೂರ್ಯಕುಮಾರ್ ಯಾದವ್ ಪತ್ನಿ ಜೊತೆಗೆ ತುಳುನಾಡಲ್ಲಿ ದೇವರ ಮುಂದೆ ಮಹತ್ವದ ಪ್ರಾರ್ಥನೆ!

ಸೂರ್ಯಕುಮಾರ್ ಯಾದವ್ ಈಗ ಶತಕೋಟಿ ಭಾರತೀಯರ ಪಾಲಿಗೆ ಹೀರೋ ಆಗಿದ್ದಾರೆ. ಭಾರತ ತಂಡ 2024ರ ಟಿ20 ವಿಶ್ವಕಪ್ ಗೆಲ್ಲಲು ಇದೇ ಸೂರ್ಯಕುಮಾರ್ ಯಾದವ್ ಕಾರಣ ಎನ್ನಬಹುದು. ಯಾಕಂದ್ರೆ ಕೊನೇ ಓವರ್‌ನಲ್ಲಿ ಸಿಕ್ಸ್ ಹೋಗುತ್ತಿದ್ದ ಬಾಲ್‌ ತಡೆದು, ಬೌಂಡರಿ ಲೈನ್ ಬಳಿ ಎಗರಿ ದೇಶಕ್ಕಾಗಿ ಕಷ್ಟಪಟ್ಟು ಟಿ20 ವಿಶ್ವಕಪ್ ಗೆಲ್ಲಿಸಿ ಕೊಟ್ಟರು. ಇದೇ ಹೀರೋ ಈಗ ಕರ್ನಾಟಕಕ್ಕೆ ಬಂದಿದ್ದು, ತುಳುನಾಡಲ್ಲಿ ಹೆಂಡತಿ ಜೊತೆಯಲ್ಲಿ ಭರ್ಜರಿ ರೌಂಡಿಂಗ್ಸ್ ಹಾಕುತ್ತಿದ್ದಾರೆ.

ಸೂರ್ಯಕುಮಾರ್ ಯಾದವ್ ಮದುವೆ ಆಗಿರುವುದು ತುಳುನಾಡು ಹುಡುಗಿಯನ್ನು. ಇವರು ಬೇರೆ ಯಾರೂ ಅಲ್ಲ, ದೇವಿಷಾ ಶೆಟ್ಟಿ ಅಂತಾ ಇವರ ಹೆಸರು. ಅಂದಹಾಗೆ ದೇವಿಷಾ ಶೆಟ್ಟಿ ಅವರು ಮುಂಬೈ ಮಹಾನಗರದಲ್ಲಿ ಹುಟ್ಟಿದ್ದು 1993 ರಲ್ಲಿ. ದೇವಿಷಾ ಶೆಟ್ಟಿ ಅವರ ತಂದೆ & ತಾಯಿ ಕರ್ನಾಟಕದ ಮಂಗಳೂರು ಮೂಲದವರು. ಈ ಕುಟುಂಬ ಬಹು ವರ್ಷಗಳ ಹಿಂದೆಯೇ ಮುಂಬೈಗೆ ಹೋಗಿ ನೆಲೆಸಿತ್ತು. ಹೀಗಿದ್ದಾಗ ಸೂರ್ಯಕುಮಾರ್ ಮತ್ತು ದೇವಿಷಾ ಶೆಟ್ಟಿ ಇಬ್ಬರೂ ಪ್ರೀತಿ ಮಾಡಿ ಮದುವೆ ಕೂಡ ಆಗಿದ್ದರು. ಈಗ ಯಾಕೆ ದಿಢೀರ್ ಮಂಗಳೂರಿಗೆ ಬಂದ್ರು ಅಂತಾ ಕೇಳಿದ್ರಾ? ಆ ಮಾಹಿತಿಗಾಗಿ ಮುಂದೆ ಓದಿ.

Suryakumar Yadav Visited To Karnataka Coastal Area With His Wife Devisha Shetty

ದೇವಿಷಾ ಹುಟ್ಟಿದ್ದು ದೇವಿ ಕೃಪೆಯಿಂದ

ಸೂರ್ಯಕುಮಾರ್ ಯಾದವ್ ಹೆಂಡತಿ, ದೇವಿಶಾ ಶೆಟ್ಟಿ ಅವರ ತಂದೆ ಹಾಗೂ ತಾಯಿ ಕಾಪು ಮಾರಿಗುಡಿಯ ಭಕ್ತರು. ದೇವಿ ದರ್ಶನವಾದ ನಂತರ ದೇವಿಷಾ ಅವರ ಜನ್ಮವಾಯಿತು ಎಂಬ ಕಾರಣಕ್ಕೆ ಇಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಇದೀಗ ಟಿ20 ವಿಶ್ವಕಪ್ ಗೆದ್ದಿರುವ ಟೀಂ ಇಂಡಿಯಾದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಅವರನ್ನ ಅವರ ಪತ್ನಿ ದೇವಿಶಾ ಶೆಟ್ಟಿ ಅವರು ಮಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಇದರ ಜೊತೆಗೆ ಮದುವೆ ವಾರ್ಷಿಕ ಮಹೋತ್ಸವ ಕೂಡ ಆಚರಣೆ ಮಾಡಿಕೊಂಡಿದ್ದಾರೆ ಸೂರ್ಯಕುಮಾರ್ ದಂಪತಿ. ಭಾರತದ ಸ್ಟಾರ್ ಆಟಗಾರನನ್ನು ತುಳುನಾಡು ಜನ ನೋಡಿ ಈಗ ಖುಷಿಪಟ್ಟಿದ್ದಾರೆ.

ಸೂರ್ಯಕುಮಾರ್ ಪತ್ನಿ ಏನು ಮಾಡ್ತಾರೆ?

ಮೊದಲೇ ಹೇಳಿದಂತೆ ಸೂರ್ಯಕುಮಾರ್ ಯಾದವ್ & ದೇವಿಷಾ ಶೆಟ್ಟಿ ಇಬ್ಬರೂ ಲವ್ ಮಾಡಿ ಮದುವೆ ಆದವರು. ಹಿರಿಯರು ಈ ಜೋಡಿಯ ಪ್ರೀತಿಯನ್ನ ಒಪ್ಪಿ 2016 ರಲ್ಲಿ ಅದ್ಧೂರಿಯಾಗಿ ಮದುವೆ ಕೂಡ ಮಾಡಕೊಟ್ರು. ಸೂರ್ಯಕುಮಾರ್ ಪತ್ನಿ ದೇವಿಷಾ ಶೆಟ್ಟಿ, ವೃತ್ತಿಯಲ್ಲಿ ಡಾನ್ಸ್ ಕೋಚ್ ಆಗಿದ್ದಾರೆ. ಗಂಡ ಸೂರ್ಯ ಅವರ ಪ್ರತಿ ಏಳು & ಬೀಳಿನಲ್ಲಿ ಹೆಗಲು ಕೊಟ್ಟು ನಿಂತರು.

ಹೀಗಾಗಿ ಅತ್ಯುತ್ತಮ ಕ್ರಿಕೆಟ್ ಆಟಗಾರ ಎನಿಸಿಕೊಂಡಿದ್ದಾರೆ ಸೂರ್ಯಕುಮಾರ್ ಯಾದವ್. ಈ ಹಿನ್ನೆಲೆಯಲ್ಲಿ ತಮ್ಮ ಕುಟುಂಬದ ದೇವತೆ ಬಳಿ ಪತಿಯನ್ನು ಕರೆದುಕೊಂಡು ಬಂದು ಈಗ ಪೂಜೆ ಕೂಡ ಮಾಡಿಸಿದ್ದಾರೆ ದೇವಿಷಾ ಅವರು. ದಂಪತಿ ಮದುವೆ ವಾರ್ಷಿಕೋತ್ಸವ ಖುಷಿ ಜೊತೆಗೆ ಹುಟ್ಟೂರಿಗೆ ಭೇಟಿ ನೀಡಿದ ಖುಷಿಯಲ್ಲಿ ಕೂಡ ಇದ್ದಾರೆ. ಸೂರ್ಯಕುಮಾರ್ ಈಗ ಕರ್ನಾಟಕಕ್ಕೆ ಭೇಟಿ ನೀಡಿರುವ ಫೋಟೋ & ವಿಡಿಯೋ ವೈರಲ್ ಆಗುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+