ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಖೋತ್ಪನ್ನ ಕೇಂದ್ರಗಳಿಗೆ ಕಲ್ಲಿದ್ದಿಲು ಪ್ರಮಾಣ ಹೆಚ್ಚಿಸಲು ಸರ್ಕಾರ ಯತ್ನ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 30:ರಾಜ್ಯದಲ್ಲಿರುವ ಶಾಖೋತ್ಪನ್ನ ಕೇಂದ್ರಗಳಿಗೆ ಕಲ್ಲಿದ್ದಲು ಪ್ರಮಾಣವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಆಲೋಚಿಸುತ್ತಿವೆ.

ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಉಷ್ಣತಾ ಪ್ರಮಾಣ ಹೆಚ್ಚುತ್ತಿದ್ದು, ವಿದ್ಯುತ್ ಬೇಡಿಕೆ ಪ್ರಮಾಣದಲ್ಲಿ ಏರಿಕೆಯಾಗಿದೆಯಾದರೂ ಉತ್ಪಾದನೆ ಹಾಗೂ ಪೂರೈಕೆ ಪ್ರಮಾಣದಲ್ಲಿ ಸುಧಾರಣೆ ಗೋಚರಿಸುತ್ತಿದೆ.

ರಾಯಚೂರು : ಕಲ್ಲಿದ್ದಲು ಕೊರತೆ, ವಿದ್ಯುತ್ ಉತ್ಪಾದನೆ ಸ್ಥಗಿತ? ರಾಯಚೂರು : ಕಲ್ಲಿದ್ದಲು ಕೊರತೆ, ವಿದ್ಯುತ್ ಉತ್ಪಾದನೆ ಸ್ಥಗಿತ?

ಆರ್‌ಟಿಪಿಎಸ್, ಬಿಟಿಪಿಎಸ್ ಸೇರಿದಂತೆ ರಾಜ್ಯ ಘಟಕಗಳಿಂದ 4,214 ರಿಂದ 6,189 ಮೆಗಾವ್ಯಾಟ್ ಉತ್ಪಾದನೆಯಾಗುತ್ತಿದ್ದು, ಅಸಂಪ್ರದಾಯಿಕ ವಿದ್ಯುತ್ ಮೂಲಗಳಿಂದ 3,366 ಮೆಗಾ ವ್ಯಾಟ್ ವರೆಗೂ ಹಗಲು ಹೊತ್ತಿನಲ್ಲಿ ಉತ್ಪಾದನೆಯಾಗಿದೆ. ಕೇಂದ್ರ ಗ್ರಿಡ್‌ನಿಂದ ಹಗಲು ಹೊತ್ತು 1560 ಹಾಗೂ ಸಂಜೆ ಸಮಯದಲ್ಲಿ 2119 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಮಾಡಲಾಗಿದೆ.

ಕಲ್ಲಿದ್ದಲು ಕೊರತೆ ಆರು ಘಟಕಗಳು ಸ್ಥಗಿತ

ಕಲ್ಲಿದ್ದಲು ಕೊರತೆ ಆರು ಘಟಕಗಳು ಸ್ಥಗಿತ

ಕಲ್ಲಿದ್ದಲು ಕೊರತೆ ಹಿನ್ನೆಲೆಯಲ್ಲಿ ಆರ್‌ಪಿಎಸ್ ಹಾಗೂ ಬಿಟಿಪಿಎಸ್‌ನ ಆರು ಘಟಕಗಳು ಸ್ಥಗಿತಗೊಂಡಿದ್ದರಿಂದ ಕಳೆದ ವಾರ ಪೂರೈಕೆ ಹಾಗೂ ಬೇಡಿಕೆ ಪ್ರಮಾಣದಲ್ಲಿ 400ರಿಂದ 500 ಮೆಗಾ ವ್ಯಾಟ್ ವ್ಯತ್ಯಾಸ ಉಂಟಾಗಿತ್ತು. ಆದರೆ ಕೊರತೆ ನೀಗಿಸಿಕೊಳ್ಳಲು ಲೋಡ್ ಶೆಡ್ಡಿಂಗ್ ಮಾಡದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೆಪಿಸಿಗೆ ಸೂಚನೆ ನೀಡಿದ್ದರು.

ಸಿಂಗರೇಣಿ ನಿಕ್ಷೇಪದಿಂದ ಕಲ್ಲಿದ್ದಿಲು

ಸಿಂಗರೇಣಿ ನಿಕ್ಷೇಪದಿಂದ ಕಲ್ಲಿದ್ದಿಲು

ಸಿಂಗರೇಣಿ ಕಲ್ಲಿದ್ದಲು ನಿಕ್ಷೇಪದಿಂದ ರಾಜ್ಯಕ್ಕೆ ಪೈರೈಕೆಯಾಗುವ ಕಲ್ಲಿದ್ದಿಲು ಪ್ರಮಾಣದಲ್ಲೂ ಹೆಚ್ಚಳ ಕಂಡುಬಂದಿದೆ.ಸಿಂಗರೇಣಿ ನಿಕ್ಷೇಪದಿಂದ ಭರವಸೆ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ 7ರಿಂದ 8 ರೇಕ್‌ ವರೆಗೂ ಕಲ್ಲಿದ್ದಿಲು ಪೂರೈಕೆ ಮಾಡುವ ಭರವಸೆ ಸಿಕ್ಕಿದೆ.

ಅಕ್ಟೋಬರ್‌ ಟು ಡಿಸೆಂಬರ್ ಹೆಚ್ಚುವರಿ ವಿದ್ಯುತ್ ಬಿಲ್ ಏಕೆ ಕಟ್ಟಬೇಕು? ಅಕ್ಟೋಬರ್‌ ಟು ಡಿಸೆಂಬರ್ ಹೆಚ್ಚುವರಿ ವಿದ್ಯುತ್ ಬಿಲ್ ಏಕೆ ಕಟ್ಟಬೇಕು?

ಕಲ್ಲಿದ್ದಲು ಸಾಗಣೆಗೆ ಕಾರ್ಯವ್ಯೂಹ

ಕಲ್ಲಿದ್ದಲು ಸಾಗಣೆಗೆ ಕಾರ್ಯವ್ಯೂಹ

ಕಲ್ಲಿದ್ದಲು ಕೊರತೆಯಿಂದ ರಾಜ್ಯದ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಕಲ್ಲಿದ್ದಲನ್ನು ಹೊತ್ತು ಕೇಂದ್ರಗಳಿಗೆ ತಲುಪುವ ರೈಲುಗಳ ಓಡಾಟದ ವೇಗ ಹೆಚ್ಚಿಸಲು ಕೆಪಿಸಿ ಮುಂದಾಗಿದೆ.

ದೇಶಾದ್ಯಂತ ಕಲ್ಲಿದ್ದಲು ಕೊರತೆ: ಥರ್ಮಲ್ ಘಟಕಗಳು ಸ್ತಬ್ಧ ಸಾಧ್ಯತೆ ದೇಶಾದ್ಯಂತ ಕಲ್ಲಿದ್ದಲು ಕೊರತೆ: ಥರ್ಮಲ್ ಘಟಕಗಳು ಸ್ತಬ್ಧ ಸಾಧ್ಯತೆ

ಸಮಯದ ಉಳಿತಾಯ

ಸಮಯದ ಉಳಿತಾಯ

ರಾಜ್ಯದ ಆರ್‌ಪಿಪಿಎಸ್ ಹಾಗೂ ಬಿಟಿಪಿಎಸ್ ವಿದ್ಯುತ್ ಕೇಂದ್ರಗಳಿಗೆ ಸಿಂಗರೇಣಿ ಮಹಾನದಿ ಕೋಲ್ ಫೀಲ್ಡ್ ಮತ್ತು ವೆಸ್ಟರ್ನ್ ಕೋಲ್ ಫೀಲ್ಡ್ ಗಳಿಂದ ದಿನವೂ ರೈಲುಗಳ ಮೂಲಕ ಕಲ್ಲಿದ್ದಿಲು ರವಾನೆಯಾಗುತ್ತದೆ.

ಶಾಖೋತ್ಪನ್ನ ವಿದ್ಯುತ್ ಜೇಂದ್ರವನ್ನು ತಲುಪಿದ ಕಲ್ಲಿದ್ದಲನ್ನು ರೈಲಿನಿಂದ ಇಳಿಸಿ ಸಂಗ್ರಹಣೆ ಯಾರ್ಡ್ ಗೆ ಸಾಗಿಸಲು ಎಂಟು ತಾಸು ಬೇಕಾಗುತ್ತದೆ. ಈ ಸಮಯವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಕೆಪಿಸಿ ಹೆಜ್ಜೆ ಇಟ್ಟಿದೆ.

ರಾಯಚೂರಿನ ಶಾಖೋತ್ಪನ್ನ ಸ್ಥಾವರದ ಐದನೇ ಘಟಕವೂ ಬಂದ್ರಾಯಚೂರಿನ ಶಾಖೋತ್ಪನ್ನ ಸ್ಥಾವರದ ಐದನೇ ಘಟಕವೂ ಬಂದ್

English summary
State government has concentrated on improve the coal supply to all the thermal power stations (TPS) in the state by increasing 5 to 8 rakes per day through railway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X