• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಂಜನಗೂಡಿನ ಜುಬಿಲೆಂಟ್ ಕಂಪನಿಯೂ, ಕೇಂದ್ರ ಸರ್ಕಾರದ ರಾಜಕಾರಣವೂ!

|

ಬೆಂಗಳೂರು, ಮೇ 22: ಕೊರೊನಾ ವೈರಸ್ ಲಾಕ್‌ಡೌನ್ ಬಳಿಕ ಇಡೀ ದೇಶದ ಚಿತ್ರಣವೇ ಬದಲಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ಸರ್ಕಾರಗಳು ನಡೆದುಕೊಂಡ ಬಗೆ, ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರನ್ನು ಇಡೀ ದೇಶಾದ್ಯಂತ ನಡೆಸಿಕೊಂಡಿದ್ದು, ಉದ್ಯಮಿಗಳಿಗೆ ಅನಕೂಲ ಮಾಡಿಕೊಡಲು ಕಾರ್ಮಿಕ ಕಾಯಿದೆಯನ್ನು ಅಮಾನ್ಯ ಮಾಡಲು ಮುಂದಾಗಿರುವುದು, ಎಲ್ಲವೂ ಒಂದೊಂದಾಗಿ ಬಟಾ ಬಯಲಾಗುತ್ತಿವೆ.

   ಕೊರೊನಾ ಸೋಂಕು ಹಬ್ಬಲು ಕಾರಣವಾದ ಜ್ಯುಬಿಲಿಯೆಂಟ್ ಕಾರ್ಖಾನೆ ವಿರುದ್ಧ ಕ್ರಮ ಇಲ್ವಾ?| Sri Ramulu | Harshavardhan

   ಇನ್ನು ರಾಜ್ಯದ ವಿಚಾರಕ್ಕೆ ಬಂದರೆ ಆರಂಭಿಕ ಹಂತದಲ್ಲಿ ಕೊರೊನಾ ವೈರಸ್ ಹರಡಲು ಕಾರಣವಾಗಿದ್ದರಲ್ಲಿ ನಂಜನಗೂಡಿನ ಜುಬಿಲೆಂಟ್ ಕಂಪನಿಯೂ ಒಂದು. ಆದರೆ ಅದ್ಯಾಕೊ ದೆಹಲಿಯ ತಬ್ಲಿಘಿ ಜಮಾತ್‌ನಲ್ಲಿ ಭಾಗವಹಿಸಿ ಬಂದು ಸೋಂಕು ಹರಡಿದ್ರು ಎಂಬ ಆರೋಪ ಕೇಳಿ ಬಂದಷ್ಟು ಜೋರಾಗಿ ನಂಜನಗೂಡುನಲ್ಲಿ ನಂಜು ಹರಡಿದ್ದ ಕಂಪನಿಯ ಬಗ್ಗೆ ಗಟ್ಟಿಯಾಗಿ ಯಾರೂ ಮಾತನಾಡಲೇ ಇಲ್ಲ.

   ವಾಣಿಜ್ಯ, ಕೈಗಾರಿಕಾ ಇಲಾಖೆಯ ಸಭೆ: ಜುಬಿಲಿಯೆಂಟ್ ಕಾರ್ಖಾನೆ ತೆರೆಯಲು ಅನುಮತಿವಾಣಿಜ್ಯ, ಕೈಗಾರಿಕಾ ಇಲಾಖೆಯ ಸಭೆ: ಜುಬಿಲಿಯೆಂಟ್ ಕಾರ್ಖಾನೆ ತೆರೆಯಲು ಅನುಮತಿ

   ಇಡೀ ಮೈಸೂರು ಜಿಲ್ಲೆ ಕೊರೊನಾ ವೈರಸ್ ಹಾಟ್‌ಸ್ಪಾಟ್‌ ಆಗಲು ಕಾರಣವಾಗಿದ್ದು ಇದೇ ಜುಬಿಲೆಂಟ್ ಕಂಪನಿ. ಆದರೆ ಇದೀಗ ಏನೂ ಆಗೇ ಇಲ್ಲ ಎಂಬಂತೆ ಜ್ಯುಬಿಲಿಯಂಟ್ ಕಾರ್ಖಾನೆ ಆರಂಭಿಸಲು ರಾಜ್ಯ ಸರ್ಕಾರ ಒಪ್ಪಿಗೆ ಕೊಟ್ಟಿದೆ.

   ಜುಬಿಲಿಯಂಟ್ ಕಾರ್ಖಾನೆಯಿಂದ ಕೊರೊನಾಗೆ ಲಸಿಕೆ ತಯಾರಿಕೆಜುಬಿಲಿಯಂಟ್ ಕಾರ್ಖಾನೆಯಿಂದ ಕೊರೊನಾಗೆ ಲಸಿಕೆ ತಯಾರಿಕೆ

   ಜುಬಿಲೆಂಟ್ ಕಂಪನಿ ನಿರ್ಲಕ್ಷದ ಬಗ್ಗೆ ಆರಂಭದಲ್ಲಿ ಧ್ವನಿ ಎತ್ತಿದ್ದ ನಂಜನಗೂಡು ಬಿಜೆಪಿ ಶಾಸಕ
   ಹರ್ಷವರ್ಧನ್ ಕೂಡ ನಂತರ ಸುಮ್ಮನಾದರು. ಈ ವಿಚಾರವಾಗಿ ಖುದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸಮ್ಮುಖದಲ್ಲಿ ಮೊನ್ನೆಯಷ್ಟೇ
   ಮಾತುಕತೆ ಆಗಿದೆ. ಅವರ ಸೂಚನೆಯಂತೆ ನಾನು ಸುಮ್ಮನಾಗಿದ್ದೇನೆ ಎಂದಿದ್ದಾರೆ.

   ಜುಬಿಲೆಂಟ್ ಕಂಪನಿ ಎಂಬ ಚಿದಂಬರ ರಹಸ್ಯ

   ಜುಬಿಲೆಂಟ್ ಕಂಪನಿ ಎಂಬ ಚಿದಂಬರ ರಹಸ್ಯ

   ಮೈಸೂರು ಜಿಲ್ಲೆಯಲ್ಲಿ ಇಂದಿನವರೆಗೆ (ಮೇ 21) 92 ಕೋವಿಡ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಅವುಗಳಲ್ಲಿ ಬರೋಬರಿ 74 ಪ್ರಕರಣಗಳು ಜುಬಿಲೆಂಟ್‍ಗೆ ಸಂಬಂಧಿಸಿದ್ದಾಗಿದೆ. ಮೈಸೂರು ಜಿಲ್ಲೆಯಲ್ಲಿ ಕೊರೊನಾವೈರಸ್ ಸೋಂಕು ಹರಡಲು ಆ ಕಾರ್ಖಾನೆಯ ಕಾಣಿಕೆ ದೊಡ್ಡದು. ಆದರೂ, ಸೋಂಕು ಹೇಗೆ? ಯಾರಿಂದ ಹರಡಿತು ಎಂಬುದು ಈಗಲೂ ಚಿದಂಬರ ರಹಸ್ಯವಾಗಿಯೇ ಉಳಿದಿದೆ.

   ಆ ರಹಸ್ಯವನ್ನು ಬೇಧಿಸಲು ನಿಯೋಜನೆಗೊಂಡಿದ್ದ ಹಿರಿಯ ಐಎಎಸ್ ಅಧಿಕಾರಿ ಹರ್ಷ ಗುಪ್ತ ಕೂಡ ವಿಫಲರಾಗಿದ್ದಾರೆ. ಕಂಟೇನರ್‌ನ್ನು ಪುಣೆ ಲ್ಯಾಬ್‌ಗೆ ಕಳಿಸಿ ಪರೀಕ್ಷೆ ಮಾಡಲಾಯಿತು. ಪೊಲೀಸ್‌ ಇಲಾಖೆ ತನಿಖೆಯಿಂದಲೂ ಸೋಂಕಿನ ಮೂಲ ಪತ್ತೆ ಮಾಡಲು ಆಗಲಿಲ್ಲ. ಆದರೆ, ಸೋಂಕಿನ ಕಾರಣಕ್ಕೆ ಇಡೀ ನಂಜನಗೂಡು ಸೀಲ್‍ಡೌನ್ ಮಾಡಲಾಯಿತು.

   ಇದರಿಂದ ಮೈಸೂರು ನಗರಕ್ಕೆ, ಮಂಡ್ಯ ಜಿಲ್ಲೆಗೂ ಸೋಂಕು ಹರಡಿದಿದ್ದು, ಸಾರ್ವಜನಿಕರು ತೀವ್ರ ತೊಂದರೆ, ಆತಂಕವನ್ನು ಈಗಲೂ ಅನುಭವಿಸುತ್ತಿದ್ದಾರೆ. ಆದರೆ ಕಂಪನಿ ಮೇಲೆ ಮಾತ್ರ ಯಾವುದೇ ಕ್ರಮವಾಗಲೇ ಇಲ್ಲ.

   ಕೇಂದ್ರ ಸರ್ಕಾರದ ಒತ್ತಡವಿದೆ ಎಂದಿದ್ದ ಶಾಸಕರು

   ಕೇಂದ್ರ ಸರ್ಕಾರದ ಒತ್ತಡವಿದೆ ಎಂದಿದ್ದ ಶಾಸಕರು

   ಜುಬಿಲೆಂಟ್ ಕಂಪನಿ ವಿರುದ್ಧ ಮೈಸೂರು ಜಿಲ್ಲೆಯ ಶಾಸಕರು, ಸಂಸದರು ಗಟ್ಟಿಯಾಗಿ ಧ್ವನಿ ಎತ್ತಲೇ ಇಲ್ಲ. ಕಂಪನಿ ನಿರ್ಲಕ್ಷ ಕಾಣುತ್ತಿದೆ. ಅದು ಕ್ರಿಮಿನಲ್ ಅಪರಾಧ ಎಂದು ಮಾತನಾಡಿದ್ದ ನಂಜನಗೂಡು ಶಾಸಕ ಹರ್ಷವರ್ಧನ್ ಅವರೂ ಕೂಡ ಅಂತಿಮವಾಗಿ ಅವರು ಕೂಡ ಸುಮ್ಮನಾದರು.

   ಆದರಿಂದ ಜುಬಿಲೆಂಟ್ ಸಂಸ್ಥೆಯ ಪರ ದೊಡ್ಡಮಟ್ಟ ಲಾಬಿ ನಡೆದಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ಆ ವಿಷಯವಾಗಿ ನನ್ನ ಮೇಲೆ ರಾಜಕೀಯ ಒತ್ತಡ, ದೆಹಲಿಯಿಂದ ಪ್ರಭಾವ ಬೀರಲಾಗುತ್ತಿದೆ ಎಂದು ಸ್ವತಃ ಶಾಸಕ ಹರ್ಷವರ್ಧನ್ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದಾರೆ. ಅಮೆರಿಕಾ ಮೂಲದ ಕಂಪನಿಯೊಂದಿಗೆ ಜುಬಿಲೆಂಟ್ ಒಪ್ಪಂದ ಮಾಡಿಕೊಂಡಿದೆ.

   ಅದರ ಪ್ರಕಾರ ಈ ಕಾರ್ಖಾನೆಯಲ್ಲಿ ಕರೊನಾ ವೈರಸ್‌ ತಡೆಯುವ ಔಷಧ ಉತ್ಪಾದನೆ ಆಗಬೇಕಿದೆ. ಇದೊಂದೇ ಕಾರಣಕ್ಕೆ ನಾನು ಸುಮ್ಮನಾಗಲೇ ಬೇಕಿದೆ ಎಂದಿದ್ದಾರೆ. ಅದ್ಯಾವ ಕೊರೊನಾ ವೈರಸ್‌ಗೆ ಆ ಕಂಪನಿ ಔಷಧಿ ಕಂಡುಹಿಡಿದಿಯೊ ಕೋವಿಡ್‌ 19ಗೆ ಗೊತ್ತು.

   ಮೂಲ ಪತ್ತೆ ಆಗಿಲ್ಲ ಎಂದು ಷರಾ ಬರೆದ ಸಮಿತಿ

   ಮೂಲ ಪತ್ತೆ ಆಗಿಲ್ಲ ಎಂದು ಷರಾ ಬರೆದ ಸಮಿತಿ

   ಸೋಂಕಿನ ಮೂಲ ಪತ್ತೆಗೆ ಸಾಧ್ಯವಾಗಿಲ್ಲ ಎಂಬ ತನಿಖಾ ವರದಿಯನ್ನು ಸರ್ಕಾರಕ್ಕೆ ಹಿರಿಯ ಐಎಎಸ್ ಅಧಿಕಾರಿ ಹರ್ಷ ಗುಪ್ತ ಸಲ್ಲಿಸಿದ್ದಾರೆ ಎನ್ನಲಾಗಿದೆ. ನಂಜನಗೂಡಿಗೆ ನಂಜು ಹರಡಿದ್ದ ಜುಬಿಲೆಂಟ್ ಕಾರ್ಖಾನೆಯ ನೌಕರ (ಪಿ-52)ಗೆ ಕೋವಿಡ್ ಸೋಂಕು ತಗುಲಿದ್ದನ್ನು ಕಂಡು ಹಿಡಿಯಲು ಹರ್ಷ ಗುಪ್ತ ಅವರನ್ನು ನೇಮಕ ಮಾಡಲಾಗಿತ್ತು.

   ಆದರೆ ಜ್ಯಬಿಲಿಯಂಟ್ ಕಂಪನಿ ಮುಚ್ಚಿದ್ದರಿಂದ ಅದರ ವ್ಯವಸ್ಥಾಪಕರು ವಿಚಾರಣೆಗೆ ಸಿಕ್ಕಿಲ್ಲ ಎಂಬ ಖಚಿತ ಮಾಹಿತಿ 'ಒನ್‌ಇಂಡಿಯಾ'ಕ್ಕೆ ಸಿಕ್ಕಿದೆ.

   ಇನ್ನು ಕ್ವಾರಂಟೈನ್‌ನಲ್ಲಿದ್ದ ಕಾರ್ಖಾನೆ ನೌಕರರನ್ನು ಭೇಟಿ ಮಾಡಿ ವಿಚಾರಣೆ ನಡೆಸಲು ಅವಕಾಶ ಇರಲಿಲ್ಲ. ಸರ್ಕಾರಕ್ಕೆ ಸಲ್ಲಿಸಿರುವ 5 ಪುಟಗಳ ತನಿಖಾ ವರದಿಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ. ಹೀಗಾಗಿ ಸರ್ಕಾರಕ್ಕೆ ಅಪೂರ್ಣ ವರದಿಯನ್ನು ಹರ್ಷ ಗುಪ್ತ ಅವರು ಸರ್ಕಾರಕ್ಕೆ ಸಲ್ಲಿಸಿದ್ದಾರೆ.

   3 ಷರತ್ತು ವಿಧಿಸಲಾಗಿದೆ

   3 ಷರತ್ತು ವಿಧಿಸಲಾಗಿದೆ

   ಮೇ 25ರಂದು ಜುಬಿಲೆಂಟ್ ಕಾರ್ಖಾನೆ ಪುನರಾರಂಭವಾಗಲಿದೆ. ಇದಕ್ಕಾಗಿ 3 ಷರತ್ತು ವಿಧಿಸಲಾಗಿದೆ. 50,000 ಆಹಾರ ಕಿಟ್, 10 ಗ್ರಾಮಗಳ ದತ್ತು, ಮುಂದೆ ಅನಾಹುತ ಆಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ರಾಜ್ಯದ ಸಚಿವರೊಬ್ಬರ ಸಮ್ಮುಖದಲ್ಲೇ ಈ ಒಪ್ಪಂದ ನಡೆದಿದೆ.

   ಇದಕ್ಕೆಲ್ಲ ಜ್ಯುಬಿಲೆಂಟ್ ನಂಜನಗೂಡು ಶಾಖೆ ಮುಖ್ಯಸ್ಥ ದೇಶಮುಖ್ ಒಪ್ಪಿಕೊಂಡಿದ್ದಾರೆ. ಕಾರ್ಖಾನೆ ಪುನರಾರಂಭಕ್ಕೆ ಸಮ್ಮತಿ ಸೂಚಿಸುವ ಜತೆಗೆ ನಂಜನಗೂಡಿನ ಜನರ ಹಿತ ಕಾಯುವ ಕೆಲಸವನ್ನೂ ನಾನು ಮಾಡಿದ್ದೇನೆ ಎಂದು ಕ್ಷೇತ್ರದ ಬಿಜೆಪಿ ಶಾಸಕ ಬಿ. ಹರ್ಷವರ್ಧನ್‌ ಹೇಳಿದ್ದಾರೆ.

   ಕೊನೆಗೂ FIR ಆಗಲೇ ಇಲ್ಲ!

   ಕೊನೆಗೂ FIR ಆಗಲೇ ಇಲ್ಲ!

   ಲಾಕ್‌ಡೌನ್‌ ಮುರಿದು ಅಗತ್ಯ ವಸ್ತುಗಳನ್ನು ಖರೀದಿಸಲು ಮನೆಯಿಂದ ಹೊರಗೆ ಬಂದವರ ಮೇಲೆಲ್ಲ ದೇಶಾದ್ಯಂತ ಎಫ್‌ಐಆರ್‌ಗಳನ್ನು ಹಾಕಲಾಗಿದೆ. ಕೆಲವು ಕಡೆಗಳಲ್ಲಿ ಬೀದಿಯಲ್ಲಿ ಸಿಕ್ಕಿದ್ದ ಜನರನ್ನು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಳ್ಳಲಾಗಿದೆ.

   ಆದರೆ ಜುಬಿಲೆಂಟ್ ಕಾರ್ಖಾನೆ ವಿಚಾರದಲ್ಲಿ ಮಾತ್ರ ಹಾಗೆ ಆಗಲಿಲ್ಲ. ಮೈಸೂರು ಸೇರಿದಂತೆ ಸುತ್ತಲಿನ ಜಿಲ್ಲೆಗಳಿಗೂ ಸೋಂಕು ಹರಡಿದ ಕಾರ್ಖಾನೆ ವಿರುದ್ಧ ಈ ವರೆಗೆ ಎಫ್‍ಐಆರ್ ದಾಖಲು ಮಾಡಿ ಕಾನೂನು ಕ್ರಮ ಕೈಗೊಳ್ಳಲಿಲ್ಲ ಎಂಬುದು ಅಚ್ಚರಿ.

   ಜೊತೆಗೆ ಜುಬಿಲೆಂಟ್ ಕಂಪನಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ 400 ಕಾರ್ಮಿಕರಿಗೆ ಎರಡು ತಿಂಗಳಿಂದ ಸಂಬಳನ್ನೇ ಕೊಟ್ಟಿಲ್ಲ. ಕಾರ್ಖಾನೆ ಪರವಾಗಿ ಮಾತನಾಡುತ್ತಿದ್ದವರೆಲ್ಲ ಎಲ್ಲಿದ್ದಾರೆ? ಜುಬಿಲೆಂಟ್ ಮಾಲೀಕರು ನೀಡಿದ ಭಿಕ್ಷೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಣಿದಿದ್ದು, ಇಡೀ ಪ್ರಕರಣವನ್ನೇ ಮುಚ್ಚಿಹಾಕಲಾಗಿದೆ ಎಂದು ಮಾಜಿ ಸಂಸದ ಧ್ರುವನಾರಾಯಣ್ ಆರೋಪಿಸಿದ್ದಾರೆ.

   English summary
   State govt agreed to re open Nanjangud Jubilant factory that caused spreading coronavirus in Mysore district.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X