ನಾಪತ್ತೆಯಾಗಿದ್ದ ನಿರ್ದೇಶಕ ರೈಲಿಗೆ ಸಿಲುಕಿ ಸತ್ತ

ಬೆಂಗಳೂರು, ಡಿ.9: ನಾನು ಡ್ಯಾಕುಮೆಂಟರಿ ಚಿತ್ರ ನಿರ್ದೇಶಕ ಎಂದು ಹೇಳಿ ಪೀಣ್ಯದ ಲೊಟ್ಟೆಗೊಲ್ಲಹಳ್ಳಿಯಲ್ಲಿ ಮನೆ ಬಾಡಿಗೆ ಹೊಂದಿದ್ದ ಯುವಕನೊಬ್ಬ ಇತ್ತೀಚೆಗೆ ನಾಪತ್ತೆಯಾಗಿದ್ದ, ಭಾನುವಾರ ಬೆಳಗ್ಗೆ ಆತನ ಮೃತ ದೇಹ ಯಶವಂತಪುರ ರೇಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.

ರೈಲಿಗೆ ಸಿಲುಕಿ ಯುವಕ ಮೃತಪಟ್ಟಿರುವ ಘಟನೆ ಯಶವಂತಪುರ ರೇಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಅಥವಾ ಭಾನುವಾರ ಮುಂಜಾನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪೀಣ್ಯದ ಲೊಟ್ಟೆಗೊಲ್ಲಹಳ್ಳಿ ನಿವಾಸಿ ಮಣಿಕಂಠ(25) ಮೃತ ಯುವಕ. ಭಾನುವಾರ ಬೆಳಗ್ಗೆ ಮೃತದೇಹ ಕಂಡ ಸಾರ್ವಜನಿಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮೊದಲು ಮೃತನ ಗುರುತು ಪತ್ತೆಯಾಗಿರಲಿಲ್ಲ. ನಂತರ ಮೃತದೇಹದ ಸಮೀಪ ಬಿದ್ದಿದ್ದ ಮೊಬೈಲ್ ನಲ್ಲಿ ಪತ್ತೆಯಾದ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಆತನ ಗುರುತು ಪತ್ತೆಯಾಗಿದೆ. ಆರು ತಿಂಗಳ ಹಿಂದೆ ಬೆಂಗಳೂರಿಗೆ ಬಂದ ತಮಿಳುನಾಡು ಮೂಲದ ಮಣಿಕಂಠ ಈ ಹಿಂದೆ ಲಿಂಗರಾಜಪುರದಲ್ಲಿ ವಾಸಿಸುತ್ತಿದ್ದ. ಮೊದಲಿಗೆ ಬ್ಯಾಂಕ್ ವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ. ಕೆಲ ತಿಂಗಳ ಹಿಂದೆ ಲೊಟ್ಟೆಗೊಲ್ಲಹಳ್ಳಿಗೆ ಬಾಡಿಗೆ ಮನೆ ಬದಲಾಯಿಸಿದ್ದ.

ಮನೆ ಮಾಲೀಕರ ಬಳಿ ತಾನು ಡಾಕ್ಯುಮೆಂಟರಿ ಚಿತ್ರ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ. ಆದರೆ, ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ಎಂದು ಮನೆ ಮಾಲೀಕರು ತಿಳಿಸಿದ್ದಾರೆ. ಮಣಿಕಂಠ ಬಗ್ಗೆ ಹೆಚ್ಚಿನ ಮಾಹಿತಿ ನಮಗೂ ಗೊತ್ತಿಲ್ಲ ಎಂದು ಮನೆ ಓನರ್ ಹೇಳಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ತುಮಕೂರು, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಕೋಲಾರ, ಚಿತ್ರದುರ್ಗ, ಶಿವಮೊಗ್ಗ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ...

ಬೆಂಗಳೂರು

ಬೆಂಗಳೂರು

ಹೊಸೂರು ರಸ್ತೆ ಬಳಿಯ ಕಿತ್ತಿಗಾನಹಳ್ಳಿಯಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರು ಮಂದಿಯನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅವಿನಾಶ್ ನಾಯಕ್(22), ಆಸಿಸ್ ದಾಸ್ (24), ರವಿ (25), ದತ್ತಾತ್ರೆಯ(30) ಎಂದು ಗುರುತಿಸಲಾಗಿದೆ. ಮತ್ತು ಮುಂಬೈ ಮೂಲದ ಒಬ್ಬ ಹಾಗೂ ಬೆಂಗಳೂರು ಮೂಲದ ಒಬ್ಬ ಮಹಿಳೆ ಬಂಧಿಸಲಾಗಿದೆ. ಬಂಧಿತರಿಂದ ರು. 2000 ನಗದು ವಶಪಡಿಸಿಕೊಳ್ಳಲಾಗಿದೆ.

ಸರ್ಕಾರಿ ಕೆಲಸಕ್ಕೆ ಅಡ್ಡಿ ಪ್ರಕರಣ

ಸರ್ಕಾರಿ ಕೆಲಸಕ್ಕೆ ಅಡ್ಡಿ ಪ್ರಕರಣ

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿ ಪ್ರಕರಣಕ್ಕೆ ಸಂಭಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.

ಕೋಲಾರ ನಗರ ಸಭಾ ಆಯುಕ್ತ ಜಗದೀಶ್ ರವರು ಕೋಲಾರ ನಗರ ಪಲ್ಲವಿ ವೃತ್ತ, ಅಂತರಗಂಗೆ ರಸ್ತೆಯಲ್ಲಿ ಅಳವಡಿಸಿದ್ದ ಬಂಟಿಂಗ್ಸ್ ಗಳನ್ನು ಕಾರ್ಯಕ್ರಮಗಳು ಮುಗಿದರು ಸಹ ಅನಧಿಕೃತವಾಗಿ ಅಳವಡಿಸಿದ್ದ ಬಂಟಿಂಗ್ಸ್ ಗಳನ್ನು ತೆರವುಗೊಳಿಸುತ್ತಿದ್ದು. ಈ ಸಮಯದಲ್ಲಿ ಭಜರಂಗ ದಳ ಎಂತ ಹೆಸರು ಹೇಳಿಕೊಂಡು ಅಲ್ಲಿಗೆ ಬಂದ ಹುಡುಗರು ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿ, ಜೆ.ಸಿ.ಬಿ ವಾಹನ ನಂ-ಕೆಎ-07, ಜಿ-496 ವಾಹನವನ್ನು ಜಖಂಗೊಳಿಸಿ, ವಾಹನಗಳಿಗೆ ಗಾಳಿ ಬಿಟ್ಟಿರುತ್ತಾರೆ.

ಶಿವಮೊಗ್ಗ

ಶಿವಮೊಗ್ಗ

ಶಿವಮೊಗ್ಗ ಗ್ರಾಮಾಂತರ ಠಾಣೆ ಅಪಘಾತದಿಂದ ಸಾವು ಪ್ರಕರಣ ; ಪಿರ್ಯಾದಿದಾರ ಬಸವರಾಜಪ್ಪ ವಾಸ ರವೀಂದ್ರ ರವರ ತಮ್ಮ ನಾಗರಾಜ 49 ವರ್ಷ ಈತನಿ ತನ್ನ ಬಾಬ್ತು ಕೆಎ 14 ವಿ 6067 ರ ಬೈಕಿನಲ್ಲಿ ಹೋಗುತ್ತಿರುವಾಗ ನಿಧಿಗೆ ಬಸ್ ನಿಲ್ದಾಣದ ಹತ್ತಿರ ಆರೋಪಿಯಾದ ಕೆಎ 18 ಎನ್ 1956 ಒಮಿನಿ ಕಾರ್ ಚಾಲಕನು ಅತೀ ವೇಗ ಮತ್ತು ಅಜಾಗೂರುಕತೆಯಿಂದ ಬಂದು ಡಿಕ್ಕಿ ಹೊಡೆಸಿದ್ದ ಪರಿಣಾಮ ನಾಗರಾಜುನು ಮೃತಪಟ್ಟಿರುತ್ತಾನೆ.

ಚಿಕ್ಕಮಗಳೂರು ಕಳುವು ಪ್ರಕರಣ

ಚಿಕ್ಕಮಗಳೂರು ಕಳುವು ಪ್ರಕರಣ

ನಗರ ಪೊಲೀಸ್ ‌ ಠಾಣೆ ಮೊ.ಸಂ.224/2013 - ಕಲಂ: 457 380 ಐಪಿಸಿ -ಮಧುವನ ಲೇ ಔಟ್ ನಲ್ಲಿ ಸಾಯಿ ಮಂದಿರದ ಮುಂಬಾಗದ ಬಾಗಿಲ ಚಿಲಕ ಯಾವುದೋ ಆಯುಧದಿಂದ ಕಟ್ ಮಾಡಿದಂತಿದ್ದು ಒಳ ಭಾಗದಲ್ಲಿ ಇರುವ ಗಾಡ್ರೇಜ್ ಬೀರು ಹೊಡೆಯಲಾಗಿದೆ.

1) ದೇವರ ಬೆಳ್ಳಿಯ ಪಾದುಕೆ. ಸುಮಾರು 750 ಗ್ರಾಂ ತೂಕದ್ದು ಬೆಲೆ ಸುಮಾರು 15.000/- ರೂ 2) ಬೆಳ್ಳಿಯ ದೇವರ ಕಿರೀಟ ಸುಮಾರು 450 ಗ್ರಾಂ ತೂಕದ್ದು ಬೆಲೆ ಸುಮಾರು 13.000/-ರೂ 3) ಹಣ ಹಾಕುವ ಹುಂಡಿ ಅದರಲ್ಲಿ ಹಣ ಎಷ್ಟಿದೆ ಎಂಬುದು ಗೊತ್ತಿರುವುದಿಲ್ಲ.ಈ ಎಲ್ಲಾ ವಸ್ತುಗಳ .ಒಟ್ಟು ಅಂದಾಜು ಬೆಲೆ 28.000/- ರೂ ಆಗಿರುತ್ತೆ. ಭೋಜೇಗೌಡ ಅವರು ನೀಡಿದ ದೂರು.

ತುಮಕೂರು

ತುಮಕೂರು

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಯು.ಡಿ.ಆರ್ ನಂ,. 37/2013 ಕಲಂ 174 ಸಿ.ಆರ್.ಪಿ.ಸಿ

ದಿನಾಂಕ;08-12-2013 ರಂದು ಮಧ್ಯಾಹ್ನ ಸುಮಾರು 11-30 ಗಂಟೆಯ ಸಮಯದಲ್ಲಿ ಪಟ್ಟನಾಯಕನಹಳ್ಳಿ ವಾಸಿ ಪಿರ್ಯಾದಿ ರೇವಣ್ಣ ರವರ ಮಗಳಾದ ಸುಮಾರು 16 ವರ್ಷದ, ಪಿ.ಆರ್ ಪುಷ್ಪಲತಾ ತಮ್ಮ ಮನೆಯಲ್ಲಿ ಟಿ.ವಿ ನೋಡಲು ಪ್ಲಗ್ ಸ್ವಿಚ್ ಹಾಕಲು ಹೋದ ಸಮಯದಲ್ಲಿ ಆಕಸ್ಮಿಕವಾಗಿ ಕರೆಂಟ್ ಶಾಕ್ ಹೊಡೆದು ಮೃತಪಟ್ಟಿರುತ್ತಾಳೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+