SSLC Result: ಮೆಘಾಲಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ನಾಳೆ ಪ್ರಕಟ, ನೋಡುವುದು ಹೇಗೆ?
ಎಸ್‌ಎಸ್‌ಎಲ್‌ಸಿ ಪರೀಕ್ಷೆ & ಎಸ್‌ಎಸ್‌ಎಲ್‌ಸಿ ಫಲಿತಾಂಶ ಎಂಬುದು ಪ್ರತಿಯೊಬ್ಬರ ಜೀವನ ಬದಲಾಯಿಸುವ ಹಂತವಾಗಿದೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂದ್ರೆ 10ನೇ ತರಗತಿ ಮುಗಿದ ನಂತರ ನಾವು ಆಯ್ಕೆ ಮಾಡಿಕೊಳ್ಳುವ ವಿಷಯದ ಮೇಲೆ ನಮ್ಮ ಭವಿಷ್ಯ ಕೂಡ ನಿಂತಿರುತ್ತಿದೆ. ಹೀಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು, ಫಲಿತಾಂಶಕ್ಕೆ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಸುದ್ದಿ ಸಿಕ್ಕಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ನಾಳೆ ಪ್ರಕಟವಾಗಲಿದೆ, ನೋಡುವುದು ಹೇಗೆ?
ಎಸ್‌ಎಸ್‌ಎಲ್‌ಸಿ ಫಲಿತಾಂಶದ ಬಗ್ಗೆ ಮಹತ್ವದ ಸೂಚನೆ ಸಿಕ್ಕದೆ, ಅದರಲ್ಲೂ ಇಡೀ ದೇಶದಲ್ಲಿ ಇದೀಗ ಪರೀಕ್ಷೆಯ ಫಲಿತಾಂಶವು ಹೊರ ಬೀಳುತ್ತಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಕಾತುರರಾಗಿದ್ದಾರೆ. ಎಸ್‌ಎಸ್‌ಎಲ್‌ಸಿ ಫಲಿತಾಂಶದ ನಂತರ ಯಾವ ಕಾಲೇಜು ಸೇರಬೇಕು? ಎಂಬ ಚಿಂತೆ ಕೂಡ ಮಾಡುತ್ತಿದ್ದಾರೆ. ದೇಶದಲ್ಲಿ ಈ ವರ್ಷ ಕೂಡ ಕೋಟ್ಯಂತರ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂದ್ರೆ 10ನೇ ತರಗತಿ ಪರೀಕ್ಷೆ ಮುಗಿಸಿದ್ದರು. ಹೀಗೆ ಪರೀಕ್ಷೆ ಬರೆದಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ನಾಳೆಯೇ ಹೊರ ಬೀಳಲಿದೆ.

ನಾಳೆಯೇ ಎಸ್‌ಎಸ್‌ಎಲ್‌ಸಿ ಫಲಿತಾಂಶ!
ಎಸ್‌ಎಸ್‌ಎಲ್‌ಸಿ ಆದ ನಂತರ ಏನು ಓದಬೇಕು? ಯಾವ ಕೋರ್ಸ್ ಸೇರಿದರೆ ಒಳ್ಳೆಯದು? ಎಂಬ ಪ್ರಶ್ನೆ ಅನೇಕರಿಗೆ ಮೂಡಿರುತ್ತದೆ. ಯಾಕಂದ್ರೆ ಈ ಹಂತ ದಾಟಿದ ನಂತರ ಪ್ರತಿಯೊಬ್ಬರು ಅವರ ಜೀವನ ಅವರೇ ರೂಪಸಿಕೊಳ್ಳಬೇಕು. ಇದೇ ಕಾರಣಕ್ಕೆ SSLC ಪರೀಕ್ಷೆ ಪ್ರತಿಯೊಬ್ಬರ ಜೀವನಕ್ಕೆ ಕೂಡ ಮರೆಯಲಾಗದ ಸಿಹಿ & ಕಹಿ ಅನುಭವ ನೀಡುತ್ತೆ. ಹಾಗಾದ್ರೆ ಈಗ SSLC ಫಲಿತಾಂಶದ ಬಗ್ಗೆ ನೀಡಿರುವ ಸೂಚನೆ ಏನು? ಯಾವ ವೆಬ್‌ಸೈಟ್‌ನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನ ನೋಡಬಹುದು?
10ನೇ ತರಗತಿ ಫಲಿತಾಂಶ ನೋಡಲು...
ಹಲವು ತಿಂಗಳಿಂದ ವಿದ್ಯಾರ್ಥಿಗಳು SSLC ಪರೀಕ್ಷೆಗಾಗಿ ಓದಿ, ಬರೆದು ಪಕ್ಕಾ ಪ್ರಾಕ್ಟಿಸ್ ಮಾಡಿ ಕಾಯುತ್ತಿದ್ದರು. ಹೀಗಿದ್ದಾಗ ಮೆಘಾಲಯ ರಾಜ್ಯದ SSLC ಪರೀಕ್ಷೆ ಫಲಿತಾಂಶ ನಾಳೆ ಹೊರ ಬೀಳಲಿದೆ. ಮೆಘಾಲಯ ರಾಜ್ಯದಲ್ಲಿ ಕೂಡ 10ನೇ ತರಗತಿಯನ್ನು SSLC ಎಂದು ಪರಿಗಣಿಸಿ ಶಿಕ್ಷಣ ನೀಡಲಾಗುತ್ತದೆ. ಹೀಗಿದ್ದಾಗ ಮೆಘಾಲಯ ರಾಜ್ಯದಲ್ಲಿ ಫೆಬ್ರವರಿ 10 ರಿಂದ ಫೆಬ್ರವರಿ 25ರ ತನಕ SSLC ಪರೀಕ್ಷೆ ನಡೆಸಲಾಗಿತ್ತು. ಇದೀಗ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನ ನಾಳೆಯೇ ಪ್ರಕಟಿಸಲು ತೀರ್ಮಾನಿಸಲಾಗಿದೆ. ಹಾಗಾದ್ರೆ ಯಾವ ವೆಬ್‌ಸೈಟ್ ಮೂಲಕ ಈ ಫಲಿತಾಂಶ ನೋಡಬಹುದು? ಮುಂದೆ ಓದಿ.
ಮೆಘಾಲಯ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಲಕ್ಷಾಂತರ ವಿದ್ಯಾರ್ಥಿಗಳು ಈಗ ರಿಸಲ್ಟ್ ನೋಡೋದಕ್ಕೆ ಕಾಯುತ್ತಾ ಕುಳಿತಿದ್ದರು. ನಾಳೆಯೇ ಬಹು ನಿರೀಕ್ಷಿತ ಈ ಫಲಿತಾಂಶವು ಹೊರ ಬೀಳಲಿದ್ದು, ಮೊದಲಿಗೆ ಅಧಿಕೃತ ವೆಬ್‌ಸೈಟ್ ಆಗಿರುವ mbose.in. ಗೆ ಭೇಟಿಯನ್ನ ನೀಡಬೇಕು. ಆ ನಂತರ ಹೋಂ ಪೇಜ್‌ನಲ್ಲಿ ಕಂಡುಬರುವ MBOSE SSLC ಅಥವಾ Class 10 Results 2025 ಮೇಲೆ ಕ್ಲಿಕ್ ಮಾಡಿ ರಿಸಲ್ಟ್ ನೋಡಬಹುದು ಎಂದು ಮಾಹಿತಿಯನ್ನು ನೀಡಲಾಗಿದೆ.
ಕರ್ನಾಟಕದ ಫಲಿತಾಂಶ ಯಾವಾಗ?
ಶೈಕ್ಷಣಿಕ ಗುಣಮಟ್ಟ ವಿಚಾರದಲ್ಲಿ ಕರ್ನಾಟಕ ದೇಶದಲ್ಲಿ ದೊಡ್ಡ ಹೆಸರು ಪಡೆದಿದೆ. ಹೀಗಾಗಿ ಕರ್ನಾಟಕದ ಎಸ್‌ಎಸ್‌ಎಲ್ ಫಲಿತಾಂಶವು, ಇಡೀ ದೇಶದ ಗಮನವನ್ನ ಸೆಳೆದಿದೆ. ಯಾಕಂದ್ರೆ ಕರ್ನಾಟಕದಲ್ಲಿ ಅದ್ರಲ್ಲೂ ನಮ್ಮ ಬೆಂಗಳೂರಿನಲ್ಲಿ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ಕೂಡ ಓದುತ್ತಿದ್ದಾರೆ. ಇದೀಗ 2024 & 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ ಆಗಲಿದೆ. ಹಾಗಾದ್ರೆ ಯಾವ ವೆಬ್‌ಸೈಟ್ ಮೂಲಕ ಫಲಿತಾಂಶ ಪರಿಶೀಲನೆ ಮಾಡಬಹುದು? ರಿಸಲ್ಟ್ ಚೆಕ್ ಮಾಡಲು ಯಾವ ದಿನಾಂಕದ ತನಕ ಕಾಯಬೇಕು? ಎಸ್‌ಎಸ್‌ಎಲ್‌ಸಿ ರಿಸಲ್ಟ್ ಪ್ರಕಟ ಆಗುವ ದಿನಾಂಕ ಯಾವುದು? ಎಂಬ ವಿಚಾರ ಇನ್ನು ಕೆಲವೇ ದಿನಗಳಲ್ಲಿ ತಿಳಿಯಲಿದೆ.












Click it and Unblock the Notifications