10th Class Results Date 2025: 'ನನ್ನ ಪ್ರೀತಿ ನಿಮ್ಮ ಕೈಯಲ್ಲಿದೆ', ಪಾಸ್ ಮಾಡುವಂತೆ ₹500 ಲಂಚ ಕೊಟ್ಟ ವಿದ್ಯಾರ್ಥಿಗಳು
ಬೆಳಗಾವಿ, ಏಪ್ರಿಲ್ 20: ಕರ್ನಾಟಕದಲ್ಲಿ ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ (SSLC) ಪರೀಕ್ಷೆ 2025 ಪೂರ್ಣಗೊಂಡಿದೆ. ಮಾರ್ಚ್ 21ರಿಂದ ಏಪ್ರಿಲ್ 04ರವರೆಗೆ ಸುಸೂತ್ರವಾಗಿ ಪರೀಕ್ಷೆಗಳು ನಡೆದಿವೆ. ಈ ಪೈಕಿ ಕೆಲವೆಡೆ ವಿದ್ಯಾರ್ಥಿಗಳ ತಪ್ಪು ಉತ್ತರ ವೈರಲ್ ಆದರೆ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ 10 ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಲಂಚ ನೀಡಿರುವ ವಿಷಯ ಬಹಿರಂಗವಾಗಿದೆ. ಇದೀಗ ಈ ವಿಷಯ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಅಲ್ಲದೇ ಇದು ವಿದ್ಯಾರ್ಥಿಗಳ ಹತಾಶವನ್ನು ತೋರ್ಪಡಿಸುತ್ತದೆ.
ರಾಜ್ಯದ ಬೆಳಗಾವಿಯ ಚಿಕ್ಕೋಡಿಯಲ್ಲಿ ಶಾಲೆಯ ಎಸ್‌ಎಸ್‌ಎಲ್‌ಸಿ ನೇ ತರಗತಿಯ ಹಲವಾರು ವಿದ್ಯಾರ್ಥಿಗಳು SSLC ಪರೀಕ್ಷೆಯ ಮೌಲ್ಯಮಾಪಕರಿಗೆ ರೂಪಾಯಿ 500 ನೋಟುಗಳನ್ನು ಇಟ್ಟಿದ್ದಾರೆ. 'ನನ್ನನ್ನು ಉತ್ತೀರ್ಣ' ಗೊಳಿಸಿ (ಪಾಸ್ ಮಾಡಿ) ಎಂದು ಕೇಳಿಕೊಂಡಿದ್ದಾರೆ. ಈ ಮೂಲಕ ಮೌಲ್ಯಮಾಪಕರಿಗೆ ಲಂಚ ನೀಡಲು ಪ್ರಯತ್ನಿಸಿದ್ದಾರೆ. ಈ ವಿಷಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಚಿಕ್ಕೋಡಿ ಪರೀಕ್ಷೆಗಳು ರಾಜ್ಯವ್ಯಾಪಿ ಚರ್ಚೆಗೆ ಕಾರಣವಾಗಿವೆ ಎಂದು ವರದಿ ಆಗಿದೆ.

'ನನ್ನ ಪ್ರೀತಿ ನಿಮ್ಮ ಕೈಯಲ್ಲಿದೆ'
ಈ ಪೈಕಿ ವಿದ್ಯಾರ್ಥಿಯೊಬ್ಬರು 500 ರೂಪಾಯಿ ನೋಟು ಇಟ್ಟಿದ್ದಲ್ಲದೇ, 'ನನ್ನ ಪ್ರೀತಿ ನಿಮ್ಮ ಕೈಯಲ್ಲಿದೆ' ಎಂದು ಸಣ್ಣ ಟಿಪ್ಪಣಿ ಬರೆದದ್ದು ಮೌಲ್ಯಮಾಪಕರ ಆಶ್ಚರ್ಯಕ್ಕೆ ಕಾರಣವಾಗಿದೆ. ಮತ್ತೊಬ್ಬ ವಿದ್ಯಾರ್ಥಿ ಈ ರೂಪಾಯಿ ತೆಗೆದುಕೊಳ್ಳಿ. ಚಹಾ ಸೇವೆ ದಯಮಾಡಿ ನನ್ನನ್ನು ಪಾಸು ಮಾಡಿ ಎಂದು ವಿನಂತಿಸಿಕೊಂಡಿದ್ದಾರೆ. ಬೇರೆ ಬೇರೆ ಕೆಲವು ವಿದ್ಯಾರ್ಥಿಗಳು ಸಹ ಇದೇ ರೀತಿ ಹಣ (ಲಂಬ) ನೀಡಿದ್ದು, ತಮ್ಮನ್ನು ಪಾಸ್ ಮಾಡುವಂತೆ ಕೇಳಿಕೊಂಡಿದ್ದಾರೆ. ಪಾಸ್ ಆಗದಿದ್ದರೆ ಪೋಷಕರು ಮುಂದಿನ ವ್ಯಾಸಂಗಕ್ಕೆ ಕಳುಹಿಸುವುದಿಲ್ಲ ಎಂದಿದ್ದಾನೆ. ಈ ಮೂಲಕ ಮೌಲ್ಯಮಾಪಕರನ್ನು ಬ್ಲಾಕ್ ಮೇಲ್ ಮಾಡಿದ್ದಾರೆ.
ಇದೆಲ್ಲ ಘಟನೆಗಳು, ವಿದ್ಯಾರ್ಥಿಗಳ ಹತಾಶ ನೋಡಿದರೆ ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಅನುಭವಿಸುವ ಒತ್ತಡ, ಓದಲು ಆಗದ ಅವರ ನಡವಳಿಯನ್ನು ಎತ್ತಿ ತೋರಿಸುತ್ತದೆ. ಅಲ್ಲದೇ ವಿದ್ಯಾರ್ಥಿಗಳ ನೈತಿಕ ನಿಲುವ ಯಾವ ರೀತಿ ಇದೆ. ಅವರ ದೈನಂದಿನ ಕಾರ್ಯವಿಧಾನಗಳು, ಶಿಕ್ಷಣದಲ್ಲಿ ಅಶಿಸ್ತು ಹಾಗೂ ಅದರ ಸುತ್ತ ಇರುವ ಗಂಭೀರ ಸಮಸ್ಯೆಗಳ ಮೇಲೆ ಬೆಳಕಿ ಚೆಲ್ಲುತ್ತದೆ.

SSLC ಪರೀಕ್ಷೆ ಫಲಿತಾಂಶ ಬಿಡುಗಡೆ ಯಾವಾಗ
ಸದ್ಯ ರಾಜ್ಯವ್ಯಾಪಿ 2800ಕ್ಕೂ ಅಧಿಕ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿ ಸುಮಾರು 8 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಾರೆ. ಅವರು ಮತ್ತವರ ಪೋಷಕರು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ (KSEAB) 2025 ರ (SSLC) ಪರೀಕ್ಷೆಯ ಫಲಿತಾಂಶಗಳನ್ನು ಮುಂದಿನ ತಿಂಗಳ ಮೇ ಆರಂಭದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಫಲಿತಾಂ ನೋಡುವ ಲಿಂಕ್ ಇಲ್ಲಿದೆ
ಶಿಕ್ಷಣ ಇಲಾಖೆ ಮೂಲಗಳ ಹಾಗೂ ಮಾಧ್ಯಮಗಳು ವರದಿ ಮಾಡಿದ ಪ್ರಕಾರ ಮೇ ಮೊದಲ ಅರ್ಧದಲ್ಲೆ ಹತ್ತನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಳ್ಳಲಿದೆ. ವಿದ್ಯಾರ್ತಿಗಳು ಮತ್ತು ಪೋಷಕರು ಫಲಿತಾಂಶವನ್ನು ಮಂಡಳಿಯ (KSEAB) ಅಧಿಕೃತ ವೆಬ್‌ಸೈಟ್ kseeb.kar.nic.in ಅಥವಾ karresults.nic.in ನಲ್ಲಿ ತಿಳಿಬಹುದಾಗಿದೆ.
ವಿದ್ಯಾರ್ಥಿಯ ನೋಂದಣಿ ಸಂಖ್ಯೆ, ಜನ್ಮದಿನಾಂಕ ನಮೂದಿಸಿ ಸೂಕ್ತ ವಿಧಾನ ಆಯ್ಕೆ ಮಾಡಿಕೊಂಡು ನೀವು ಫಲಿತಾಂಶ ನೋಡಬಹುದಾಗಿದೆ. ಕರ್ನಾಟಕ ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ (SSLC) ಪರೀಕ್ಷೆಗೆ ಒಟ್ಟು 8,96,447 ವಿದ್ಯಾರ್ಥಿಗಳು ಹಾಜರಾಗಿದ್ದರು. ಅದರಲ್ಲಿ ವಿದ್ಯಾರ್ಥಿಗಳು 4,61,563 ಹುಡುಗರು ಹಾಗೂ 4,34,884 ವಿದ್ಯಾರ್ಥಿನಿಯರು ಇದ್ದರು. ಕರ್ನಾಟಕದಲ್ಲಿ 2,818 ಪರೀಕ್ಷಾ ಕೇಂದ್ರಗಳಲ್ಲಿ ಸುಸೂತ್ರವಾಗಿ ಪರೀಕ್ಷೆ ನಡೆದಿವೆ.
ಕನಿಷ್ಠ 35 ಅಂಕ ಬೇಕೆ ಬೇಕು
ಎಸ್‌ಎಸ್‌ಎಲ್‌ಸಿ ಎಂಬುದು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಪ್ರಮುಖ ಘಟ್ಟವಾಗಿದೆ. ಈ ಹಂತದಲ್ಲಿ ವಿದ್ಯಾರ್ಥಿಗಳು ಉತ್ತೀಣವಾಗಲು ಕನಿಷ್ಠ 35ರಷ್ಟು ಅಂಕಗಳನ್ನು ಪಡೆದಿರಬೇಕು. ಹೆಚ್ಚಿನ ಅಂಕಗಳು ಪಡೆದಷ್ಟು ಭವಿಷ್ಯದ ಶೈಕ್ಷಣಿಕ ಹಾಗೂ ವೃತ್ತಿಪರ ಜೀವನ ಉತ್ತಮವಾಗಿರುತ್ತದೆ.












Click it and Unblock the Notifications