SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಸಾಂಸ್ಕೃತಿಕನಗರಿ ಮೈಸೂರಿನ ವಿದ್ಯಾರ್ಥಿನಿ ರಾಜ್ಯಕ್ಕೆ ಎರಡನೇ ಟಾಪರ್.!
SSLC Result 2024: ಮೇ 9ರಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಿಸಿದ್ದು, ಈ ವೇಳೆ ತಮಗೆ ಕಡಿಮೆ ಅಂಕಗಳು ಬಂದಿವೆ ಎಂದು ಮೈಸೂರಿನ ವಿದ್ಯಾರ್ಥಿನಿಯೊಬ್ಬರು ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದರು. ಇದೀಗ ಮರು ಮೌಲ್ಯಮಾಪನ ಫಲಿತಾಂಶ ಪ್ರಕಟವಾಗಿದ್ದು, ಈ ವಿದ್ಯಾರ್ಥಿನಿ ರಾಜ್ಯದಲ್ಲೇ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿನಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಗಾದರೆ ಈ ವಿದ್ಯಾರ್ಥಿನಿ ಪಡೆದ ಅಂಕಗಳೆಷ್ಟು ಹಾಗೂ ಹಿನ್ನೆಲೆ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 2024ನೇ ಸಾಲಿನ ಎಸ್ಎಸ್ಎಲ್ಸಿ ಮರು ಮೌಲ್ಯಮಾಪನ ಫಲಿತಾಂಶವನ್ನು ಪ್ರಕಟ ಮಾಡಿದ್ದು, ಸಾಂಸ್ಕೃತಿಕನಗರಿ ಮೈಸೂರಿನ ವಿದ್ಯಾರ್ಥಿನಿ ಸುದೀಕ್ಷಾ ಎಂ.ಡಿ. ಅವರು 625ಕ್ಕೆ 624 ಅಂಕಗಳನ್ನು ಪಡೆಯುವ ಮೂಲಕ ರಾಜ್ಯದಲ್ಲೇ ಎರಡನೇ ಟಾಪರ್ ಎಂಬ ಪಟ್ಟಕ್ಕೆ ಪಾತ್ರರಾಗಿದ್ದಾರೆ.

ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟದಾಗ ವಿದ್ಯಾರ್ಥಿನಿ ಸುದೀಕ್ಷಾ ಎಂ.ಡಿ ಅವರಿಗೆ 625ಕ್ಕೆ 620 ಅಂಕಗಳು ಬಂದಿದ್ದವು. ಐದು ವಿಷಯಗಳಲ್ಲಿ 100ಕ್ಕೆ 100 ಅಂಕ ಪಡೆದಿದ್ದ ಸುದೀಕ್ಷ ಎಂ.ಡಿ ಅವರಿಗೆ ಗಣಿತ ವಿಷಯದಲ್ಲಿ 95 ಅಂಕಳು ಬಂದಿದ್ದವು.
ಸಂಸ್ಕೃತ 125 ಇಂಗ್ಲಿಷ್ 100 ಕನ್ನಡ 100 ವಿಜ್ಞಾನ 100 ಸಮಾಜ 100 ಗಣಿತದಲ್ಲಿ 95 ಅಂಕ ಬಂದಿತ್ತು. ನಂತರ ಸುದೀಕ್ಷಾ ಗಣೀತ ವಿಷಯವನ್ನು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದರು. ಇಂದು (ಜೂ.05) ಮರು ಮೌಲ್ಯಮಾಪನದ ಫಲಿತಾಂಶ ಪ್ರಕಟವಾಗಿದ್ದು, ಸುಧೀಕ್ಷಾ ಗಣಿತದಲ್ಲಿ 99 ಅಂಕ ಪಡೆದಿದ್ದಾರೆ. ಇದೀಗ 625ಕ್ಕೆ 624 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಎರಡನೇ ಟಾಪರ್ ಆಗಿದ್ದಾರೆ.
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ
* ಅಂಕಿತಾ ಬಸಪ್ಪ ಕೊನ್ನೂರು (ಬಾಗಲಕೋಟೆ) - 625ಕ್ಕೆ 625
* ಮೈಸೂರಿನ ಸುದೀಕ್ಷಾ ಎಂ.ಡಿ - 625ಕ್ಕೆ 624
* ಬೆಂಗಳೂರಿನ ಮೇದಾ ಪಿ ಶೆಟ್ಟಿ - 625ಕ್ಕೆ 624
* ಹರ್ಷಿತಾ ಡಿ.ಎಂ (ಮಧುಗಿರಿ) - 625ಕ್ಕೆ 624
* ಚಿನ್ಮಯ್ (ದಕ್ಷಿಣ ಕನ್ನಡ) 625ಕ್ಕೆ 624
* ಸಿದ್ದಾಂತ್ (ಚಿಕ್ಕೊಡಿ) 625ಕ್ಕೆ 624
* ದರ್ಶನ್ (ಶಿರಸಿ) 625ಕ್ಕೆ 624
* ಚಿನ್ಮಯ್ (ಶಿರಸಿ) 625ಕ್ಕೆ 624
* ಶ್ರೀರಾಮ್ (ಶಿರಸಿ) 625ಕ್ಕೆ 624
* ಸುದೀಕ್ಷಾ (ಮೈಸೂರು) 625ಕ್ಕೆ 624












Click it and Unblock the Notifications