ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ಕ್ಷಣಗಣನೆ
ಮೇ 11ರಂದೇ ದ್ವಿತೀಯ ಪಿಯುಸಿ ಫಲಿತಾಂಶ ಎಂದು ಪಿಯು ಬೋರ್ಡ್ ನಿರ್ದೇಶಕಿ ಸಿ. ಶಿಖಾ ಹೇಳಿದ್ದಾರೆ. ಮೇ 12 ರಂದು ಎಸ್ಎಸ್ಎಲ್ಸಿ ಫಲಿತಾಂಶ ಹೊರಬೀಳಲಿದೆ.
ಬೆಂಗಳೂರು, ಮೇ 9: ಮೇ 11ರಂದೇ ದ್ವಿತೀಯ ಪಿಯುಸಿ ಫಲಿತಾಂಶ ಎಂಬುದು ಖಚಿತವಾಗಿದೆ. ಅಂದು ಮಧ್ಯಾಹ್ನ 3 ಗಂಟೆಗೆ ವೆಬ್ ಸೈಟ್ ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಮರುದಿನ ಆಯಾ ಕಾಲೇಜುಗಳಲ್ಲಿ ಫಲಿತಾಂಶ ದೊರೆಯಲಿದೆ. ಈ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ ಮಾಹಿತಿ ನೀಡಿದ್ದಾರೆ.
ಈ ಕೆಳಗಿನ ಅಧಿಕೃತ ವೆಬ್ ತಾಣಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ
http://results.gov.in/
http://karresults.nic.in/
http://www.pue.kar.nic.in/
****
ಈ ಹಿಂದೆ ಫಲಿತಾಂಶದ ಬಗ್ಗೆ ಪ್ರಕಟವಾಗಿದ್ದ ಸುದ್ದಿ ಹೀಗಿತ್ತು: ಅಂದುಕೊಂಡಂತೆ ನಡೆದರೆ ಇದೇ ಮೇ 10 ಅಥವಾ 11ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸಜ್ಜಾಗಿದೆ.[ಸಿಬಿಎಸ್ಇ: 12, 10ನೇ ತರಗತಿ ಫಲಿತಾಂಶ ನೋಡುವುದು ಹೇಗೆ?]
ಪಿಯು ಅಧಿಕಾರಿಗಳು ದತ್ತಾಂಶಗಳ ಕ್ರೋಢೀಕರಣ ನಡೆಸುತ್ತಿದ್ದಾರೆ. ಇಂದು ಅಂದರೆ ಮಂಗಳವಾರ ಮಧ್ಯಾಹ್ನಕ್ಕೆ ದತ್ತಾಂಶ ಕ್ರೋಢೀಕರಣ ಮುಗಿದರೆ ನಾಳೆ ಅಂದರೆ ಬುಧವಾರ ಫಲಿತಾಂಶ ಪ್ರಕಟವಾಗಲಿದೆ. ಒಂದೊಮ್ಮೆ ಸರ್ವರ್ ಸ್ಲೋ ಆದರೆ ಒಂದು ದಿನ ತಡವಾಗಿ ಗುರುವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ.

'ಒನ್ ಇಂಡಿಯಾ ಕನ್ನಡ' ಜತೆ ಮಾತನಾಡಿರುವ ಪಿಯು ಬೋರ್ಡ್ ನಿರ್ದೇಶಕಿ ಸಿ. ಶಿಖಾ, "ಮಂಗಳವಾರ ಸಂಜೆ ವೇಳೆಗೆ ಫಲಿತಾಂಶ ದಿನಾಂಕ ನಿರ್ಧರಿಸುವುದಾಗಿ ಹೇಳಿದ್ದಾರೆ. ಫಲಿತಾಂಶಕ್ಕೆ ಸಂಬಂಧಿಸಿದಂತೆ ಕೆಲಸ ನಡೆಯುತ್ತಿದೆ. ಸಂಜೆ ವೇಳೆಗೆ ಖಚಿತ ಪಡಿಸಲಾಗುವುದು," ಎಂದಿದ್ದಾರೆ.
12ರಂದು ಎಸ್ಎಸ್ಎಲ್ಸಿ ಫಲಿತಾಂಶ
ಇನ್ನು ಮೇ 10ರಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಲಿದೆ ಎನ್ನಲಾಗಿತ್ತು. ಆದರೆ ಸೋಮವಾರ ಟ್ಟೀಟ್ ಮಾಡಿರುವ ಸಚಿವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ತನ್ವೀರ್ ಸೇಠ್ ಮೇ 12ರಂದು ಫಲಿತಾಂಶ ಪ್ರಕಟವಾಗಲಿದೆ ಎಂದಿದ್ದಾರೆ.
ಈಗಾಗಲೇ ಫಲಿತಾಂಶಕ್ಕೆ ಬೇಕಾದ ಕೆಲಸಗಳು ಮುಗಿದಿದ್ದು ದ್ವಿತೀಯ ಪಿಯುಸಿ ಫಲಿತಾಂಶದ ಬೆನ್ನಿಗೆ ಪ್ರಕಟವಾಗಲಿದೆ.
@tantry_b SSLC fixed for 12th may
— Tanveer sait (@Tannsworld) May 8, 2017












Click it and Unblock the Notifications