Special Train: ಉತ್ತರ ಕರ್ನಾಟಕ ಮಂದಿಗೆ ಗುಡ್‌ನ್ಯೂಸ್‌! ಬೆಂಗಳೂರಿನಿಂದ ವಿಶೇಷ ರೈಲು ಸೇವೆ, ವೇಳಾಪಟ್ಟಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ನಿತ್ಯ ಅತೀ ಹೆಚ್ಚು ಪ್ರಯಾಣಿಕರು ಈ ಬೆಂಗಳೂರು-ಹುಬ್ಬಳ್ಳಿ-ಧಾರವಾಡ ಮತ್ತು ಮುಂಬೈ ಮಾರ್ಗದಲ್ಲಿ ಓಡಾಡುತ್ತಾರೆ. ಈ ಕಾರಣದಿಂದ ನೈಋತ್ಯ ರೈಲ್ವೆ ಹಬ್ಬದ ಸಂದರ್ಭಗಳು ಇನ್ನಿತರ ವಿಶೇಷ ದಿನಗಳಲ್ಲಿ ಹೆಚ್ಚುವರಿ ರೈಲು, ವಿಶೇಷ ರೈಲಗಳನ್ನು ಬಿಡುಗಡೆ ಮಾಡುತ್ತದೆ. ಅದೇ ರೀತಿ ಈಗ 'ಬೆಳಗಾವಿ - ಬೆಂಗಳೂರು' ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ಮಾಡಲು ಮುಂದಾಗಿದೆ.

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಣೆ ಮಾಡಲು ನೈಋತ್ಯ ರೈಲ್ವೆ ವತಿಯಿಂದ ಆಗಸ್ಟ್ 20ರಿಂದ ನಗರದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ಎಕ್ಸ್'ಪ್ರೆಸ್ (ರೈಲು ಸಂಖ್ಯೆ 06551/06552) ರೈಲುಗಳ ಕಾರ್ಯಾಚರಣೆ ಮಾಡಲಾಗುತ್ತಿದೆ.

Belagavi-Bengaluru SMVT

ಎಸ್ಎಂವಿಟಿ ಬೆಂಗಳೂರು- ಬೆಳಗಾವಿ ವಿಶೇಷ ರೈಲು (06551) 2026 ಆಗಸ್ಟ್ 20 ಮತ್ತು 22 ರಂದು ರಾತ್ರಿ 19 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಡುತ್ತದೆ. ಮಾರನೇ ದಿನ ಬೆಳಗ್ಗೆ 08:25 ಗಂಟೆಗೆ ಬೆಳಗಾವಿ ನಿಲ್ದಾಣ ತಲುಪುತ್ತದೆ.

ಮರಳಿ ಅದೇ ದಿನಕ್ಕಿನಲ್ಲಿ ಬೆಳಗಾವಿ- ಎಸ್ಎಂವಿಟಿ ಬೆಂಗಳೂರು ವಿಶೇಷ ರೈಲು (06552) 2026ರ ಆಗಸ್ಟ್ 21 ಮತ್ತು 23ರಂದು 17:30 ಗಂಟೆಗೆ ಬೆಳಗಾವಿ ನಿಲ್ದಾಣದಿಂದ ಬಿಡುತ್ತದೆ. ಮಾರನೇ ದಿನ ಬೆಳಗ್ಗೆ ಬೆಳಗ್ಗೆ 05 ಗಂಟೆಗೆ ಎಸ್ಎಂವಿಟಿ ಬೆಂಗಳೂರಿಗೆ ಬರಲಿದೆ.

ಸಂಚಾರ ಮಾರ್ಗ, ನಿಲುಗಡೆ ನಿಲ್ದಾಣ

ಇನ್ನೂ ಈ ವಿಶೇಷ ರೈಲು ಮಾರ್ಗಮಧ್ಯೆ ಎರಡೂ ದಿಕ್ಕುಗಳಲ್ಲಿ ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೊಂಡಾ ಮತ್ತು ಖಾನಾಪುರ ಮಾರ್ಗವಾಗಿ ಸಂಚರಿಸಲಿದ್ದು, ಆಯಾ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

19 ಬೋಗಿಗಳ ರೈಲು

ಬೆಂಗಳೂರು-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್‌ ರೈಲು 10 ಸ್ಲೀಪರ್ ಕ್ಲಾಸ್, 07 ಸಾಮಾನ್ಯ ದ್ವಿತೀಯ ದರ್ಜೆ ಹಾಗೂ 02 ದ್ವಿತೀಯ ದರ್ಜೆ ಕಮ್ ಲಗೇಜ್/ದಿವ್ಯಾಂಗ ಬೋಗಿಗಳು ಸೇರಿದಂತೆ ಒಟ್ಟು ರೈಲಿನಲ್ಲಿ 19 ಬೋಗಿಗಳು ಇವೆ.

ತುರ್ತು ಕಾಮಗಾರಿ: ಈ ಮಾರ್ಗದ ರೈಲುಗಳ ಸಂಚಾರ ರದ್ದು

ಹಾಸನ ಮತ್ತು ಹೊಳೆನರಸೀಪುರ ನಿಲ್ದಾಣದ ನಡುವೆ ನಿರ್ವಹಣಾ ಕೆಲಸ ನಡೆಸಲಾಗುತ್ತಿದೆ. ಪರಿಣಾಮ ವಿವಿಧ ರೈಲುಗಳ ಸೇವೆಯಲ್ಲಿ ಅಡಚಣೆ, ಸಂಚಾರ ಸ್ಥಗಿತವಾಗಿದೆ. ಕೆಲವು ರೈಲು ಭಾಗಶಃ ರದ್ದಾಗಿವೆ. ಅವುಗಳ ಮಾಹಿತಿ ಇಲ್ಲಿದೆ.

ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ ರೈಲು (56267) ಆ.19ರಂದು ಮತ್ತು ಮೈಸೂರು-ಅರಸೀಕೆರೆ ಡೈಲಿ ಪ್ಯಾಸೆಂಜರ್ ರೈಲು (56268) ಆ.25ರಂದು ಸಂಪೂರ್ಣ ರದ್ದಾಗಿದೆ.

ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್'ಪ್ರೆಸ್ ರೈಲು (16225) ಆ.19ರಂದು ಮೈಸೂರು ಮತ್ತು ಅರಸೀಕೆರೆ ನಡುವೆ ಸಂಚರಿಸುವುದಿಲ್ಲ. ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್'ಪ್ರೆಸ್ ರೈಲು (16226) ಆ.25 ಮತ್ತು ಸೆ.1ರಂದು ಅರಸೀಕೆರೆ-ಮೈಸೂರು ನಡುವೆ ಸಂಚಾರಿಸುವುದಿಲ್ಲ. ಈ ಎರಡು ರೈಲುಗಳ ಭಾಗಶಃ ರದ್ದುಗೊಂಡಿವೆ.

ಇನ್ನೂ ಇಂದು ಆ. 19ರಂದು ತಾಳಗುಪ್ಪ-ಮೈಸೂರು ಕುವೆಂಪು ಎಕ್ಸ್'ಪ್ರೆಸ್ ರೈಲನ್ನು ಮಾರ್ಗಮಧ್ಯೆ 90 ನಿಮಿಷಗಳ ನಿಲ್ಲಿಸಲಾಗತ್ತದೆ. ಒಂದೂವರೆಗೆ ಗಂಟೆ ತಡವಾಗಿ ನಿಗದಿತ ನಿಲ್ದಾಣ ತಲುಪಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+