ಬೆಳಗಾವಿ ಮತ್ತು ಮನುಗೂರು ನಡುವೆ ವಿಶೇಷ ಹಬ್ಬದ ರೈಲು ಸೇವೆ

ಹುಬ್ಬಳ್ಳಿ, ಅಕ್ಟೋಬರ್‌ 11: ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರ ಪ್ರಸ್ತಾವನೆಯ ಮೇರೆಗೆ, ದಸರಾ, ದೀಪಾವಳಿ, ಛತ್, ಕ್ರಿಸ್ಮಸ್ ಮತ್ತು ಪೊಂಗಲ್ ಹಬ್ಬದ ಋತುಗಳಲ್ಲಿ ಹೆಚ್ಚುವರಿ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ಬೆಳಗಾವಿ ಮತ್ತು ಮನುಗುರು ನಿಲ್ದಾಣಗಳ ನಡುವೆ (ರೈಲು ಸಂಖ್ಯೆ 07335/07336) ವಿಶೇಷ ರೈಲು ಕಾರ್ಯಾಚರಣೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

ಈ ರೈಲುಗಳು ಅಕ್ಟೋಬರ್ 2024 ರಿಂದ ಮಾರ್ಚ್ 2025 ರವರೆಗೆ ಟ್ರೈನ್ ಆನ್ ಡಿಮ್ಯಾಂಡ್ (ಟಿಒಡಿ) ಆಧಾರದ ಮೇಲೆ ಕಾರ್ಯನಿರ್ವಹಿಸುತ್ತವೆ, ಈ ಬಿಡುವಿಲ್ಲದ ಋತುವಿನಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುತ್ತದೆ. ವಿವರಗಳು ಈ ಕೆಳಗಿನಂತಿವೆ.

Special Festival Train Service Between Belagavi And Manuguru

ರೈಲು ಸಂಖ್ಯೆ 07335 ಬೆಳಗಾವಿ-ಮನುಗೂರು ವಿಶೇಷ ಎಕ್ಸ್ ಪ್ರೆಸ್ ರೈಲು ಅಕ್ಟೋಬರ್ 16, 2024 ರಿಂದ ಮಾರ್ಚ್ 30, 2025 ರವರೆಗೆ ಒಟ್ಟು 95 ಟ್ರಿಪ್ಗಳನ್ನು ಚಲಿಸಲಿದೆ. ಈ ರೈಲು (07335) ಪ್ರತಿ ಭಾನುವಾರ, ಬುಧವಾರ, ಶನಿವಾರ ಮತ್ತು ಮಂಗಳವಾರ ಬೆಳಗಾವಿಯಿಂದ ಮಧ್ಯಾಹ್ನ 12:30 ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ 12:50 ಕ್ಕೆ ಮನುಗೂರು ನಿಲ್ದಾಣಕ್ಕೆ ತಲುಪಲಿದೆ.

ರೈಲು ಸಂಖ್ಯೆ 07336 ಮನುಗೂರು-ಬೆಳಗಾವಿ ವಿಶೇಷ ಎಕ್ಸ್ ಪ್ರೆಸ್ ರೈಲು ಅಕ್ಟೋಬರ್ 17, 2024 ರಿಂದ ಮಾರ್ಚ್ 31, 2025 ರವರೆಗೆ 95 ಟ್ರಿಪ್ಗಳನ್ನು ಚಲಿಸಲಿದೆ. ಈ ರೈಲು (07336) ಪ್ರತಿ ಸೋಮವಾರ, ಗುರುವಾರ, ಭಾನುವಾರ ಮತ್ತು ಬುಧವಾರ ಮನುಗೂರು ನಿಲ್ದಾಣದಿಂದ ಮಧ್ಯಾಹ್ನ 3:40 ಕ್ಕೆ ಹೊರಟು, ಮರುದಿನ ಸಂಜೆ 4:00 ಗಂಟೆಗೆ ಬೆಳಗಾವಿ ನಿಲ್ದಾಣಕ್ಕೆ ಆಗಮಿಸಲಿದೆ.

ಈ ರೈಲು ಖಾನಾಪುರ, ಲೋಂಡಾ, ಅಳ್ನಾವರ, ಧಾರವಾಡ, ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ, ತೋರಣಗಲ್ಲು, ದರೋಜಿ, ಬಳ್ಳಾರಿ, ಗುಂತಕಲ್, ಆದೋನಿ, ಕೋಸ್ಗಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣಾ, ಯಾದಗಿರಿ, ಚಿತ್ತಾಪುರ, ಮಳಖೇಡ ರೋಡ್, ಸೇಡಂ, ತಾಂಡೂರು, ವಿಕಾರಾಬಾದ್, ಲಿಂಗಂಪಲ್ಲಿ, ಬೇಗಂಪೇಟ್, ಸಿಕಂದರಾಬಾದ್, ಭೋಂಗೀರ್, ಜನಾಂವ್, ಕಾಜಿಪೇಟ್, ವಾರಂಗಲ್, ಕೇಸಮುದ್ರಂ, ಮಹಬೂಬಾಬಾದ್, ದೊರಣಕಲ್, ಗಾಂಧಿಪುರಂ ಹಾಲ್ಟ್, ಮತ್ತು ಭದ್ರಾಚಲಂ ರೋಡ್ ನಿಲ್ದಾಣಗಳಲ್ಲಿ ನಿಲುಗಡೆ ಇರಲಿವೆ.

ಈ ವಿಶೇಷ ರೈಲಿನಲ್ಲಿ 1 ಎಸಿ ಟು ಟೈಯರ್, 2 ಎಸಿ ತ್ರಿ ಟೈಯರ್, 9 ಸ್ಲೀಪರ್ ಕ್ಲಾಸ್, 4 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ಎಸ್ಎಲ್ಆರ್ ಡಿ ಬೋಗಿಗಳು ಸೇರಿದಂತೆ ಒಟ್ಟು 18 ಬೋಗಿಗಳು ಇರಲಿವೆ. ಪ್ರಯಾಣಿಕರು ಅಧಿಕೃತ ವೆಬ್ಸೈಟ್ (www.enquiry.indianrail.gov.in) ಗೆ ಭೇಟಿ ನೀಡಿ ಅಥವಾ NTES ಅಪ್ಲಿಕೇಶನ್ ಬಳಸಿ ಅಥವಾ 139 ಸಹಾಯವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+