ಕರ್ನಾಟಕದ ಕರಾವಳಿಯಲ್ಲಿ ನೈಋತ್ಯ ಮುಂಗಾರು ಚುರುಕು: ಯೆಲ್ಲೋ ಅಲರ್ಟ್
ಬೆಂಗಳೂರು, ಜುಲೈ 4: ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ನೈಋತ್ಯ ಮುಂಗಾರು ಚುರುಕಾಗಿದೆ.
ಹೊನ್ನಾವರ, ಮಂಗಳೂರು ಏರ್‌ಪೋರ್ಟ್, ಪಣಂಬೂರ್, ಅಂಕೋಲಾ, ಕಾರ್ಕಳ, ಶಿರಾಲಿ, ಚಿಂಚೋಳಿಯಲ್ಲಿ ಭಾರಿ ಮಳೆಯಾಗಿದೆ.
ಭಟ್ಕಳ, ಮುಲ್ಕಿ, ಉಪ್ಪಿನಂಗಡಿ, ಗೋಕರ್ಣ, ಕಾರವಾರ, ಕುಮಟಾ, ಸುಬ್ರಹ್ಮಣ್ಯ, ಸುಳ್ಯ, ಮಂಕಿ, ಪುತ್ತೂರು, ತಾಳಗುಪ್ಪ, ಕೊಟ್ಟಿಗೆಹಾರ, ಭಾಗಮಂಡಲದಲ್ಲಿ ಅತಿ ಹೆಚ್ಚು ಮಳೆಯಾಗಿದೆ.

ಉತ್ತರ ಒಳನಾಡಿನಲ್ಲಿ ಮೋಡಕವಿದ ವಾತಾವರಣ ಮುಂದುವರೆಯಲಿದೆ. ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ,ಹಾಸನದಲ್ಲಿ ಅಲ್ಪ ಪ್ರಮಾಣದ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ರಾಯಚೂರು, ಯಾದಗಿರಿಯಲ್ಲಿ ಸಾಧಾರಣ ಮಳೆಯಾಗಲಿದೆ.
ಹವಾಮಾನ ಇಲಾಖೆಯು ಕರಾವಳಿಗೆ ಜು.5ರವರೆಗೆ ಆರೆಂಜ್ ಅಲರ್ಟ್ ಹಾಗೂ ನಂತರ 2 ದಿನ ಯೆಲ್ಲೊ ಅಲರ್ಟ್ ಘೋಷಣೆ ಮಾಡಿದೆ. ಕೊಲ್ಲೂರಿನಲ್ಲಿ 80 ಮಿ.ಮೀ., ಗೋಕರ್ಣ, ಔರಾದ್‌ನಲ್ಲಿ 60 ಮಿ.ಮೀ., ಮಂಗಳೂರು, ಉಡುಪಿ, ಪಣಂಬೂರು, ಕಮಲಾಪುರದಲ್ಲಿ 50 ಮಿ.ಮೀ., ಶಿರಾಲಿ, ಕೋಟ, ಚಿಂಚೋಳಿ, ಭಾಗಮಂಡಲದಲ್ಲಿ 30 ಮಿ.ಮೀ., ಮಂಗಳೂರು, ಕಾರ್ಕಳ, ಕುಂದಾಪುರ, ಮಸ್ಕಿ, ಕೊಟ್ಟಿಗೆಹಾರ, ಶೃಂಗೇರಿ, ಮಾಣಿ, ಧರ್ಮಸ್ಥಳದಲ್ಲಿ 20 ಮಿ.ಮೀ., ತ್ಯಾಗರ್ತಿ, ಮಡಿಕೇರಿ, ಚಿಂತಾಮಣಿ, ಸಂಡೂರಿನಲ್ಲಿ 10 ಮಿ.ಮೀ. ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ 149 ಮಿ.ಮೀ., ಉತ್ತರ ಒಳನಾಡಿನಲ್ಲಿ 144 ಮಿ.ಮೀ. ಮಳೆಯಾಗಿದೆ.
ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಜು.5ರವರೆಗೆ ಯೆಲ್ಲೋ ಅಲರ್ಟ್ ಇದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳಿಗೆ ಜು.5ರವರೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.












Click it and Unblock the Notifications