10 ಹೊಸ ಮಾರ್ಗದಲ್ಲಿ ರೈಲು ಓಡಿಸಲಿದೆ ನೈಋತ್ಯ ರೈಲ್ವೆ
ಬೆಂಗಳೂರು, ಆಗಸ್ಟ್ 11 : ಕರ್ನಾಟಕದಿಂದ ದೇಶದ ಬೇರೆ-ಬೇರೆ ನಗರಗಳಿಗೆ ರೈಲು ಸಂಪರ್ಕ ಕಲ್ಪಿಸಲು ನೈಋತ್ಯ ರೈಲ್ವೆ ಹೊಸ ರೈಲು ಓಡಿಸಲಿದೆ. ದೂರದ ರೈಲುಗಳ ಸಂಚಾರ ಆರಂಭಿಸಲು ರೈಲ್ವೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
Recommended Video
ದೂರದ ನಗರ ಮತ್ತು ರಾಜ್ಯಗಳಿಗೆ ಹೊಸ ರೈಲು ಓಡಿಸಲು ನೈಋತ್ಯ ರೈಲ್ವೆ ಪ್ರಸ್ತಾವನೆ ಸಿದ್ಧಗೊಳಿಸಿದೆ. ರೈಲ್ವೆ ಇಲಾಖೆ ಒಪ್ಪಿಗೆ ಸಿಕ್ಕಿದ ಬಳಿಕ ರೈಲುಗಳ ಸಂಚಾರ ಆರಂಭವಾಗಲಿದೆ.
ಕರ್ನಾಟಕದ ವಿವಿಧ ಪ್ರದೇಶದಿಂದ ಹೊರಡುವ ರೈಲುಗಳು ಪುನಃ ಇಲ್ಲಿಗೆ ಬಂದು ತಲುಪಲಿವೆ. ಬೆಂಗಳೂರು ವಿಭಾಗದಿಂದಲೂ ಅನೇಕ ಹೊಸ ರೈಲುಗಳು ಸಂಚಾರ ನಡೆಸಲಿವೆ.

ಬೆಂಗಳೂರು ಕಂಟೈನ್ಮೆಂಟ್-ಗೌಹಾತಿ, ಯಶವಂತಪುರ-ಹೌರಾ, ಕೆಎಸ್ಆರ್ ಬೆಂಗಳೂರು-ಸೊಲ್ಲಾಪುರ, ಕೆಎಸ್‌ಆರ್-ಮಂಗಳೂರು, ಯಶವಂತಪುರ-ಕಾರವಾರ ಈ ಮಾರ್ಗದಲ್ಲಿ ರೈಲುಗಳ ಸಂಚಾರ ಆರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಹುಬ್ಬಳ್ಳಿ-ಸಿಕಂದರಾಬಾದ್, ಹುಬ್ಬಳ್ಳಿ-ಮೈಸೂರು, ಹುಬ್ಬಳ್ಳಿ-ವಾರಣಾಸಿ, ಹುಬ್ಬಳ್ಳಿ-ಮುಂಬೈ, ವಾಸ್ಕೋಡಾಗಾಮ- ಹೌರಾ ಮಾರ್ಗದಲ್ಲಿಯೂ ರೈಲು ಓಡಿಸುವುದಾಗಿ ನೈಋತ್ಯ ರೈಲ್ವೆ ಹೇಳಿದೆ.
ಈ ಮಾರ್ಗಗಳ ಪೈಕಿ ಕೆಲವು ಮಾರ್ಗದಲ್ಲಿ ವಾರಕ್ಕೆ 2 ಅಥವ 3 ಬಾರಿ ರೈಲು ಸಂಚಾರ ನಡೆಸುತ್ತಿದೆ. ಅದನ್ನು ಪ್ರತಿ ದಿನಕ್ಕೆ ಪರಿವರ್ತನೆ ಮಾಡುವಂತೆ ಮನವಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರೈಲ್ವೆ ಇಲಾಖೆ ಒಪ್ಪಿಗೆ ನೀಡಿದ ಬಳಿಕ ಈ ಮಾರ್ಗಗಳಲ್ಲಿ ರೈಲುಗಳ ಸಂಚಾರ ಆರಂಭವಾಗಲಿದೆ. ಈ ಮಾರ್ಗದಲ್ಲಿ ಈಗ ರೈಲುಗಳು ಸಂಚಾರ ನಡೆಸುತ್ತಿದ್ದರೂ ಬೇರೆ ಸಮಯದಲ್ಲಿ ರೈಲುಗಳನ್ನು ಓಡಿಸಲಾಗುತ್ತದೆ.












Click it and Unblock the Notifications