ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ವಿರುದ್ಧ ಘೋಷಣೆ; ವರದಿ ಕೇಳಿದ ಡಿ. ಕೆ. ಶಿವಕುಮಾರ್

|
Google Oneindia Kannada News

ಬೆಂಗಳೂರು, ಮಾರ್ಚ್ 15; ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವರದಿಯನ್ನು ಕೇಳಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಬಳಿಕ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ನಿವಾಸದ ಮುಂದೆ ಬೃಹತ್ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಲಾಗಿತ್ತು.

ಮೈಸೂರು; ಸಿದ್ದರಾಮಯ್ಯ ಧಿಕ್ಕಾರ ಕೂಗಿದ 'ಕೈ' ಕಾರ್ಯಕರ್ತರು!ಮೈಸೂರು; ಸಿದ್ದರಾಮಯ್ಯ ಧಿಕ್ಕಾರ ಕೂಗಿದ 'ಕೈ' ಕಾರ್ಯಕರ್ತರು!

ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ಪ್ರಕರಣದ ಬಗ್ಗೆ ವರದಿ ನೀಡುವಂತೆ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಡಿ. ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ. ಘೋಷಣೆ ಕೂಗಿದ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.

ಮೈಸೂರು ಮೇಯರ್ ಚುನಾವಣೆ: ದೋಸ್ತಿಗೆ 'ಕೈ' ನಾಯಕರ ಭಿನ್ನರಾಗ! ಮೈಸೂರು ಮೇಯರ್ ಚುನಾವಣೆ: ದೋಸ್ತಿಗೆ 'ಕೈ' ನಾಯಕರ ಭಿನ್ನರಾಗ!

ಶಾಸಕ ತನ್ವೀರ್ ಸೇಠ್ ಸಿದ್ದರಾಮಯ್ಯ ಸೂಚನೆ ವಿರೋಧಿಸಿ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ ಎಂಬುದು ಆರೋಪ. ಈ ಬೆಳವಣಿಗೆ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಮೈಸೂರು ಮೇಯರ್ ಚುನಾವಣೆ ಕುರಿತು ಡಿ.ಕೆ.ಶಿವಕುಮಾರ್ ಅಚ್ಚರಿಯ ಹೇಳಿಕೆ!ಮೈಸೂರು ಮೇಯರ್ ಚುನಾವಣೆ ಕುರಿತು ಡಿ.ಕೆ.ಶಿವಕುಮಾರ್ ಅಚ್ಚರಿಯ ಹೇಳಿಕೆ!

ಮೈತ್ರಿ ಬಳಿಕ ಪ್ರತಿಭಟನೆ

ಮೈತ್ರಿ ಬಳಿಕ ಪ್ರತಿಭಟನೆ

ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಬಳಿಕ ತನ್ವೀರ್‌ ಸೇಠ್‌ಗೆ ನೋಟಿಸ್ ನೀಡಬೇಕು ಎಂಬ ಚರ್ಚೆಗಳು ಜೋರಾಗಿತ್ತು. ಆಗ ಅವರ ಬೆಂಬಲಿಗರು ಸಿದ್ದರಾಮಯ್ಯಗೆ ಸ್ಥಳೀಯವಾಗಿ ಅಷ್ಟೊಂದು ಮಾಹಿತಿ ಇಲ್ಲ, ಕೆಳಮಟ್ಟದ ನಾಯಕರನ್ನು ಅವರು ಬೆಳೆಯಲು ಬಿಡುತ್ತಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದರು. ಅಲ್ಲದೇ ನೋಟಿಸ್ ಕೊಟ್ಟರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಕೊಟ್ಟಿದ್ದರು.

ಫೆಬ್ರವರಿ 26ರಂದು ಪ್ರತಿಭಟನೆ

ಫೆಬ್ರವರಿ 26ರಂದು ಪ್ರತಿಭಟನೆ

ಫೆಬ್ರವರಿ 26ರಂದು ಮೈಸೂರಿನಲ್ಲಿರುವ ಶಾಸಕ ತನ್ವೀರ್ ಸೇಠ್ ನಿವಾಸದ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆಗ ಸಿದ್ದರಾಮಯ್ಯ ವಿರುದ್ಧ ಘೋಷಣೆಯನ್ನು ಸಹ ಕೂಗಲಾಗಿತ್ತು.

ಉಸ್ತುವಾರಿಯಾಗಿದ್ದ ತನ್ವೀರ್ ಸೇಠ್

ಉಸ್ತುವಾರಿಯಾಗಿದ್ದ ತನ್ವೀರ್ ಸೇಠ್

ಮೈಸೂರು ಮಹಾನಗರ ಪಾಲಿಕೆ ಚುನಾವಣೆಯ ಉಸ್ತುವಾರಿಯನ್ನು ಶಾಸಕ ತನ್ವೀರ್ ಸೇಠ್‌ಗೆ ನೀಡಲಾಗಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಡೆದಿತ್ತು. ಸಿದ್ದರಾಮಯ್ಯ ವಿರುದ್ಧವಾಗಿ ಶಾಸಕರು ಕಾರ್ಯ ನಿರ್ವಹಣೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದು ಪಕ್ಷದಲ್ಲಿ ಗೊಂದಲಕ್ಕೆ ಕಾರಣವಾಗಿತ್ತು.

ಜೆಡಿಎಸ್ ಜೊತೆ ಮೈತ್ರಿ ಇಲ್ಲ

ಜೆಡಿಎಸ್ ಜೊತೆ ಮೈತ್ರಿ ಇಲ್ಲ

ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಬಳಿಕ ಜೆಡಿಎಸ್ ಜೊತೆ ಇನ್ನು ಮುಂದೆ ಮೈತ್ರಿ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಭಾನುವಾರ ಮೈಸೂರಿನಲ್ಲಿ ಮಾತನಾಡಿದ ಅವರು, "ಪಾಲಿಕೆ ಅಥವಾ ಇನ್ನಾವುದೇ ಚುನಾವಣೆ ಆದರೂ ಇನ್ನು ಮುಂದೆ ಯಾವುದೇ ಕಾರಣಕ್ಕೂ ಜೆಡಿಎಸ್ ಜೊತೆ ಮೈತ್ರಿ ಇಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

English summary
KPCC president D. K. Shivakumar directed Mysuru district Congress president to submit report on slogan raised against former chief minister and leader of opposition Siddaramaiah in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X