ಸಿದ್ದರಾಮೋತ್ಸವ: ಕಾಂಗ್ರೆಸ್ಸಿಗೆ 6 ಪ್ರಶ್ನೆ ಕೇಳಿದ ಬಿಜೆಪಿ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬದ ಸಂಬಂಧ ಆಯೋಜಿಸಲಾಗಿದ್ದ ಸಿದ್ದರಾಮೋತ್ಸವ ಮತ್ತದರ ಭರ್ಜರಿ ಯಶಸ್ಸಿನಿಂದ ಬಿಜೆಪಿಯಲ್ಲಿ ನಡುಕ ಉಂಟಾಗಿದೆಯೇ?. ಕಾಂಗ್ರೆಸ್ ನಾಯಕರ ಪ್ರಕಾರ ಹೌದು.
ಕಾಂಗ್ರೆಸ್ಸಿನ ಹಲವು ನಾಯಕರು ಹೇಳುವ ಪ್ರಕಾರ, ಈ ರೀತಿಯ ಯಶಸ್ಸನ್ನು ಖುದ್ದು ಪಕ್ಷವೇ ನಿರೀಕ್ಷಿಸಿರಲಿಲ್ಲ. ಸಿದ್ದರಾಮಯ್ಯನವರು ಹೇಳುವ ಪ್ರಕಾರ, ಅವರನ್ನು ಕಂಡರೆ ಬಿಜೆಪಿಯವರಿಗೆ ಭಯವಂತೆ. ಕೋಲಾರ ಜಿಲ್ಲಾ ಪ್ರವಾಸದ ವೇಳೆ ಸಿದ್ದರಾಮಯ್ಯ ಈ ಮಾತನ್ನು ಹೇಳಿದ್ದಾರೆ.
ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿ ಕಾಂಗ್ರೆಸ್ಸಿಗೆ ಆರು ಪ್ರಶ್ನೆಗಳು ಕೇಳಿದೆ ಮತ್ತು ಉತ್ತರ ನೀಡಬೇಕಾಗಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಒತ್ತಾಯಿಸಿದೆ.
ಪ್ರಶ್ನೆ - 1: ಸಿದ್ದರಾಮೋತ್ಸವ ಸಂಬಂಧಿತ ಪ್ರಶ್ನೆಗಳು. ದೇಶದ ಆರ್ಥಿಕತೆ ಮತ್ತು ರಾಜಕೀಯ ಪಕ್ಷದ ಅರ್ಥಶಾಸ್ತ್ರದ ನಡುವೆ ಯಾವುದೇ ಸಂಬಂಧವಿಲ್ಲವೇ? ಒಂದುಕಡೆ ಬೆಲೆ ಏರಿಕೆ, ಬಡತನದ ವಿರುದ್ಧ ಪ್ರತಿಭಟನೆ ನಡೆಸುವ ಕಾಂಗ್ರೆಸ್ ಇನ್ನೊಂದು ಕಡೆ ಕೋಟಿಗಟ್ಟಲೆ ವ್ಯಯಿಸಿ ಜನ್ಮದಿನ ಆಚರಿಸಿಕೊಳ್ಳುವುದು ಎಷ್ಟು ಸರಿ? - ಇದು ಬಿಜೆಪಿ ಕೇಳಿದ ಮೊದಲ ಪ್ರಶ್ನೆ.

ಕಾಂಗ್ರೆಸ್ಸಿಗೆ ಬಿಜೆಪಿ ಕೇಳಿದ ಪ್ರಶ್ನೆಗಳು
ಪ್ರಶ್ನೆ - 2: ಕಾಂಗ್ರೆಸ್ ಪಕ್ಷದ ಸುಪ್ರೀಂಕೋರ್ಟ್ ನಾಯಕರು ಭ್ರಷ್ಟಾಚಾರ ಸಂಬಂಧಿತವಾಗಿ ಕಾನೂನು ಕ್ರಮ ಎದುರಿಸುತ್ತಿರುವಾಗ ಕರ್ನಾಟಕ ಕಾಂಗ್ರೆಸ್ಸಿಗರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಈ ಮೂಲಕ ಗಾಂಧಿ ಕುಟುಂಬವನ್ನು ಧಿಕ್ಕರಿಸಲಾಗುತ್ತಿದೆಯೇ? #ಉತ್ತರಿಸಿಕಾಂಗ್ರೆಸ್
ಪ್ರಶ್ನೆ -3: ಸಿದ್ದರಾಮಯ್ಯ ಅವರ ಜನ್ಮದಿನದ ಅಮೃತ ಮಹೋತ್ಸವ ಆಚರಿಸಿಕೊಳ್ಳುವ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿಗೂ 75 ತುಂಬಿರುವುದನ್ನು ಮರೆತದ್ದೇಕೆ?
ಸೋನಿಯಾ ಗಾಂಧಿ ಅವರನ್ನು ಕಡೆಗಣಿಸಲಾಗುತ್ತಿದೆಯೇ? #ಉತ್ತರಿಸಿಕಾಂಗ್ರೆಸ್

ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆ ಕೋಟಿ ಕೋಟಿ ಖರ್ಚು
ಪ್ರಶ್ನೆ - 4: ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ಕರಾವಳಿ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ನಮ್ಮ ಜನರು ಅನುಭವಿಸುತ್ತಿರುವ ನೋವುಗಳು ವಿರೋಧ ಪಕ್ಷದ ನಾಯಕರ ಆತ್ಮಸಾಕ್ಷಿಯನ್ನು ಚುಚ್ಚಿದಂತೆ ತೋರುತ್ತಿಲ್ಲ. ಸೂತಕದ ವಾತಾವರಣದಲ್ಲೂ ಸಂಭ್ರಮಿಸಿದ್ದೇಕೆ? #ಉತ್ತರಿಸಿಕಾಂಗ್ರೆಸ್
ಪ್ರಶ್ನೆ - 5: ರಾಜ್ಯ ಅತಿವೃಷ್ಟಿಯಿಂದ ತತ್ತರಿಸಿರುವಾಗ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆ ಕೋಟಿ ಕೋಟಿ ಖರ್ಚು ಮಾಡಲಾಯಿತು. ಈ ದುಂದುವೆಚ್ಚದ ಲೆಕ್ಕವನ್ನು ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರಾದರೂ ಕೇಳುವ ಸಮಯ ಬಂದಿದೆ. ಕಾಂಗ್ರೆಸ್ ಬಳಿ ಉತ್ತರವಿದೆಯೇ? #ಉತ್ತರಿಸಿಕಾಂಗ್ರೆಸ್

ಹುಟ್ಟಿದ ದಿನಾಂಕದ ಬಗ್ಗೆ ಗೊಂದಲ ಇಟ್ಟುಕೊಂಡ ಸಿದ್ದರಾಮಯ್ಯ
ಪ್ರಶ್ನೆ - 6: ತಮ್ಮ ಹುಟ್ಟಿದ ದಿನಾಂಕದ ಬಗ್ಗೆ ಗೊಂದಲ ಇಟ್ಟುಕೊಂಡು ಸಿದ್ದರಾಮಯ್ಯ ಅವರು 75 ನೇ ವರ್ಷದ ಜನ್ಮದಿನ ಆಚರಣೆ ಮಾಡಿಕೊಂಡಿದ್ದು ರಾಜಕೀಯ ತೆವಲಿಗಾಗಿ ಅಲ್ಲವೇ ? ಚುನಾವಣಾ ಹೊಸ್ತಿಲಲ್ಲಿಯೇ ಜನ್ಮದಿನ ಆಚರಿಸಿಕೊಂಡಿದ್ದು ಡಿಕೆಶಿ ವಿರುದ್ಧದ ರಾಜಕೀಯ ದಾಳವೇ? #ಉತ್ತರಿಸಿಕಾಂಗ್ರೆಸ್

ಬಿಜೆಪಿಯ ಟ್ವೀಟಿಗೆ ಹಲವು ಕಾಮೆಂಟುಗಳು
ಬಿಜೆಪಿಯ ಟ್ವೀಟಿಗೆ ಹಲವು ಕಾಮೆಂಟುಗಳು ಬಂದಿದ್ದು, ಕೆಲವೊಂದು ಕಾಮೆಂಟುಗಳು ಹೀಗಿವೆ:
'ನಿಮ್ಮದೇ ಎರಡು ಸರಕಾರ ಆದರೂ ಇನ್ನೂ ಮಂತ್ರಿಗಳು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡದೆ ನಿದ್ದೆ ಮಾಡುತ್ತಿರುವುದು ವಿಪರ್ಯಾಸ.. ಬೆಲೆ ಏರಿಕೆ ಮಧ್ಯೆ ಅಕ್ಕಿ ಗೋಧಿ gst ತಂದಿದ್ದು ನೀವೇ ಅಲ್ಲವೇ . ಇದನ್ನು ಪ್ರಶ್ನೆ ಮಾಡುವ ತಾಕತ್ತು ಇಲ್ವಾ... ಬಿಜೆಪಿ ಇಂದ ರಾಜ್ಯಕ್ಕೆ ಶೂನ್ಯ ಲಾಭ..'
'ಲೋ ಅಡ್ಮಿನ್ ಯಾವ ಊರ್ಲಾ ನಿಂದು , ಜನಾನೆ ಬಂದಿರಲಿಲ್ಲ ಕೇವಲ 1 ಲಕ್ಷ ಬಂದಿರಬಹುದು ಅಂತಾರೆ. ನಿಮ್ಮ ಪಕ್ಷದ ಮುಖಂಡರು ಆ ಎಳಸು ಕಾರ್ಯಕರ್ತರು &
Social media ಶೂರರು. ಇನ್ನು ಕೋಟಿ ಎಂಗಲ ಖರ್ಚಾಯ್ತದೆ ದಡ್ಡ ಮುಂಡೆದೆ, ಅಷ್ಟಕ್ಕೂ ಅದೇನೂ ಸರ್ಕಾರದ ದುಡ್ಡಲ್ವಲ್ಲ. ನಿಮ್ಮ ವಿಶ್ವಗುರು ಥರ ಯೋಗಾಸನ ಮಾಡೋಕೆಲ್ಲ ದುಂದು ವೆಚ್ಚ ಮಾಡಿಲ್ಲವಲ್ಲ'.












Click it and Unblock the Notifications