ಜೆಡಿಎಸ್ ಮಹಿಳೆಯಂತೆ ಕಂಡಿರಬೇಕು: ಸಿದ್ದರಾಮಯ್ಯಗೆ ಗೌಡರ ಲೇವಡಿ

Recommended Video

      ಜೆಡಿಎಸ್ ಮಹಿಳೆಯಂತೆ ಕಂಡಿರಬೇಕು: ಸಿದ್ದರಾಮಯ್ಯಗೆ ಗೌಡರ ಲೇವಡಿ | Oneindia Kannada

      ಬೆಂಗಳೂರು, ಜನವರಿ 29: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಲ್ಲಿ ಮಹಿಳೆಯೊಂದಿಗೆ ವರ್ತಿಸಿದ ರೀತಿ ವಿರೋಧಪಕ್ಷಗಳ ವಾಗ್ದಾಳಿಗೆ ಪ್ರಮುಖ ಅಸ್ತ್ರವಾಗಿ ದೊರಕಿದೆ.

      ಕುಮಾರಸ್ವಾಮಿ ಅವರ ಸರ್ಕಾರ ಕೌರವರದ್ದು, ಸಿದ್ದರಾಮಯ್ಯ ಅವರು ದುಶ್ಯಾಸನ ಎಂದು ಬಿಜೆಪಿ ಲೇವಡಿ ಮಾಡಿತ್ತು.

      ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಸದಾನಂದಗೌಡ, ತಮ್ಮನ್ನು ಪ್ರಶ್ನಿಸಿದ ಮಹಿಳೆ ಜೆಡಿಎಸ್ ಚುನಾವಣಾ ಚಿಹ್ನೆಯ ರೀತಿ ಕಾನಿಸಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.

      ಮಾನ್ಯ ಸಿದ್ದರಾಮಯ್ಯನವರಿಗೆ ವರುಣಾ ಕ್ಷೇತ್ರದಲ್ಲಿ ತಮ್ಮನ್ನು ಪ್ರಶ್ನೆ ಮಾಡಿದ ಹಸಿರು ಬಣ್ಣದ ಸೀರೆ ತೊಟ್ಟಿರುವ ಮಹಿಳೆ ಜೆಡಿಎಸ್ ಚುನಾವಣಾ ಚಿನ್ಹೆ ತರಹ ಕಂಡಿರಬೇಕು. ತಾವು ಅಧಿಕಾರ ಕಳಕೊಂಡು ಜೆಡಿಎಸ್ ನವರು ಮುಖ್ಯಮಂತ್ರಿಯಾದ ಮೇಲೆ ಹಸಿರು ಬಣ್ಣ ಕಂಡಾಕ್ಷಣ ಸಿಟ್ಟು ನೆತ್ತಿಗೆ ಏರುವುದು ಜಾಸ್ತಿ ಆದಂತಿದೆ.

      siddaramaiah woman dupatta sadananda gowda criticise as it looks like jds election symbol

      ಘಟನೆ ನಡೆದ ಸಂದರ್ಭದಿಂದಲೂ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟೀಕಾಪ್ರಹಾರ ಮುಂದುವರಿಸಿದೆ.

      ಮಹಿಳಾ ಪೊಲೀಸರನ್ನು ನಿಂದಿಸುವುದು, ರೈತ ಮಹಿಳೆಯ ಬಗ್ಗೆ ಕೀಳಾಗಿ ಮಾತನಾಡುವುದು, ಮಹಿಳೆಯ ದುಪ್ಪಟ್ಟಾ ಸೆಳೆಯುವುದು ಮತ್ತು ಆಕೆಯನ್ನು ನಿಂದಿಸುವುದು, ರೆಸಾರ್ಟ್‌ಗೆ ತೆರಳುವುದು ಮತ್ತು ಶಾಸಕರನ್ನು ಕೊಲ್ಲಲು ಪ್ರಯತ್ನಿಸುವುದು, ರೈತರ ಸಾಲ ಮನ್ನಾ ಮಾಡದೆ ಇರುವುದು.

      ಮರ್ಯಾದಾ ಪುರುಷೋತ್ತಮ ಸಿದ್ದರಾಮಯ್ಯ ಅವರೇ ಇದು ಲಫಂಗ ರಾಜಕಾರಣ ಅಲ್ಲದೆ ಇದ್ದರೆ ಇನ್ನೇನು? ನಿಮಗೆ ನಾಚಿಕೆಯಾಗುತ್ತಿಲ್ಲವೇ? ಎಂದು ಬಿಜೆಪಿ ಪ್ರಶ್ನಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+