ಬಿಜೆಪಿ ಸರ್ಕಾರ ರಚಿಸಲು ಕಾಂಗ್ರೆಸ್‌ ಶಾಸಕರನ್ನು ಕಳಿಸಿದ್ದೇ ಸಿದ್ದರಾಮಯ್ಯ: ಪ್ರಹ್ಲಾದ ಜೋಶಿ ಸ್ಫೋಟಕ ಹೇಳಿಕೆ!

ಕರ್ನಾಟಕ ಕಾಂಗ್ರೆಸ್‌ ಸರ್ಕಾರವನ್ನು ಬೀಳಿಸುವುದಕ್ಕೆ ಬಿಜೆಪಿ ಪ್ರಯತ್ನಿಸುತ್ತಿದೆ. ಬಿಜೆಪಿಯು ಕಾಂಗ್ರೆಸ್‌ನ ಪ್ರತಿ ಶಾಸಕರಿಗೂ 50 ಕೋಟಿ ರೂಪಾಯಿ ಆಫರ್‌ ಕೊಟ್ಟಿದೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸುತ್ತಿದ್ದಾರೆ. ಈ ನಡುವೆ ಮಹಾರಾಷ್ಟ್ರ ಚುನಾವಣೆಗೆ ಇನ್ನು ಎರಡು ದಿನ ಬಾಕಿ ಉಳಿದಿರುವಾಗಲೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸ್ಫೋಟಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಇದರಿಂದ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಹೌದು ಇದೇ 20ಕ್ಕೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಿರುವಾಗಲೇ ಜೋಶಿ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಮಹಾಯುತಿ (ಬಿಜೆಪಿ) ಹಾಗೂ ಮಹಾ ವಿಕಾಸ್ ಅಘಾಡಿ (ಕಾಂಗ್ರೆಸ್‌) ಮೈತ್ರಿ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದೆ. ಕರ್ನಾಟಕದ ನೆರೆಯ ರಾಜ್ಯವಾಗಿರುವ ಮಹಾರಾಷ್ಟ್ರದ ಚುನಾವಣೆಯು ಕರ್ನಾಟಕಕ್ಕೂ ಗಡಿ ವಿಷಯದಿಂದ ಪ್ರಮುಖವಾಗಿದೆ. ಈಗ ಇರುವ ಏಕನಾಥ್‌ ಶಿಂಧೆ ಬಣ ಮತ್ತೆ ಅಧಿಕಾರಕ್ಕೆ ಬಂದರೆ ಕರ್ನಾಟಕಕ್ಕೆ ತಲೆನೋವು ತಪ್ಪಿದ್ದಲ್ಲ ಅಂತಲೇ ಹೇಳಲಾಗುತ್ತಿದೆ. ಇನ್ನು ಮಹಾರಾಷ್ಟ್ರ ಚುನಾವಣೆಗೆ 48 ಗಂಟೆ ಬಾಕಿ ಇರುವಾಗಲೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸ್ಫೋಟಕ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ.

Siddaramaiah sent Congress MLAs to form BJP government Pralhad Joshi s explosive statement

ಕಳೆದ ಬಾರಿ ಬಿಜೆಪಿ ಸರ್ಕಾರ (ಯಡಿಯೂರಪ್ಪ ನೇತೃತ್ವದ) ರಚನೆ ಮಾಡುವಾಗ ಕಾಂಗ್ರೆಸ್‌ ಶಾಸಕರನ್ನು ಸ್ವಂತ ಕಳುಹಿಸಿದ್ದೇ ಸಿದ್ದರಾಮಯ್ಯ ಅವರು. ಕೆಲವು ಕಾಂಗ್ರೆಸ್‌ ಶಾಸಕರನ್ನು ಅವರೇ ಕಳುಹಿಸಿದ್ದರು ಎಂದು ಪ್ರಹ್ಲಾದ ಜೋಶಿ ಹೇಳಿದ್ದಾರೆ. ಕಾಂಗ್ರೆಸ್ ನವರಿಗೆ ಆಡಳಿತ ನಡೆಸುವ ನೈತಿಕತೆ ಇರಲಿಲ್ಲ. ಹೀಗಾಗಿ, ನಾವು ಸರ್ಕಾರ ರಚನೆ ಮಾಡಿದ್ವಿ. ಈ ಬಾರಿ ಅವರಿಗೆ ಬಹುಮತ ಇದೆ. ನಾವು ಈ ಬಾರಿ ವಿರೋಧ ಪಕ್ಷದಲ್ಲಿದ್ದು, ವಿರೋಧ ಪಕ್ಷದ ಕೆಲಸ ಮಾಡೋದು ನಮ್ಮ ಪಕ್ಷದ ನಿರ್ಧಾರ ಇದೆ ಎಂದಿದ್ದಾರೆ.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಮುಂದುವರಿಯಬಾರದು ಎನ್ನುವ ಕಾರಣಕ್ಕೆ ಶಾಸಕರನ್ನು ಕಳುಹಿಸಿದ್ದೇ ಕಾಂಗ್ರೆಸ್. ಇನ್ನು ಬಿಜೆಪಿಯಿಂದ ಕಾಂಗ್ರೆಸ್‌ ಶಾಸಕರಿಗೆ 100 ಕೋಟಿ ಆಫರ್ ವಿಚಾರವಾಗಿ ಮಾತನಾಡಿರುವ ಅವರು, ಕಾಂಗ್ರೆಸ್‌ ಶಾಸಕ ರವಿ ಗಾಣಿಗ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು. ಅಂತವರ ವಿರುದ್ಧ ಭಾರತ ಸರ್ಕಾರ ಕ್ರಮ ಕೈಗೊಳ್ಳತ್ತೆ. ಈಗ ವಿಷಯ ಡೈವರ್ಟ್ ಮಾಡಲು ಸುಮ್ಮನೆ ಮಾತಾಡತೀದಾರೆ ಎಂದರು.

ಕಾಂಗ್ರೆಸ್‌ನವರು ಏನಾದರೂ ಬಿಡುಗಡೆ ಮಾಡಲಿ, ಯಾರು ಬೇಡ ಅಂದವರು. ಈಗ ಡೈವರ್ಟ್ ಮಾಡೋಕೆ ಏನೇನೋ ಆರೋಪ‌ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹಗರಣದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಹೀಗಾಗಿ, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.

ಸಿದ್ದರಾಮಯ್ಯ ಸೇರಿ ಎಲ್ಲರೂ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ನಿಮ್ಮ ವಿರುದ್ಧ ಕೋರ್ಟ್ ಆರ್ಡರ್ ಇದೆ ಎಂದ ಅವರು, ಅದರ ಬಗ್ಗೆ ಯಾಕೆ ಮಾತಾಡ್ತಿಲ್ಲ ಎಂದು ಪ್ರಶ್ನೆ ಮಾಡಿದ್ದು. 100 ಕೋಟಿಯ ಬಗ್ಗೆ ಅಲ್ಲ, ಅವರು 500 ಕೋಟಿ ಬಗ್ಗೆ ಮಾತಾಡಲಿ ಎಂದು ಸವಾಲು ಹಾಕಿದ್ದಾರೆ.

ದಾಖಲೆ ಇದ್ದರೆ ಕೊಡಿ ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತೆ. ಶಾಸಕ ರವಿ ಗಾಣಿಗ ದಾಖಲೆ ಬಿಡುಗಡೆ ಮಾಡಲಿ ಎಲ್ಲವೂ ಸುಳ್ಳ ಹೇಳುವುದಲ್ಲ. ತಮ್ಮ ಹುಳುಕು ಮುಚ್ಚಲು ಆರೋಪ ಮಾಡತ್ತಿದ್ದಾರೆ. ಈಗ ಅಲ್ಲಾ ರವಿ ಗಾಣಿಗ ಹಿಂದೆ ಕೂಡ ಮಾತಾಡಿದ್ರು.ಇದೀಗ ಮತ್ತೆ ಪ್ಲೇಟ್ ಉಲ್ಟಾ ಮಾಡಿದ್ದಾರೆ. ದಾಖಲೆ ಇದ್ದರೆ ಯಾಕೆ ಬಿಡುಗಡೆ ಮಾಡಿಲ್ಲ ಎಂದು ಕೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+