ಕಾಂಗ್ರೆಸ್ ಶಾಸಕರಿಗೆ ಸಿದ್ದರಾಮಯ್ಯ ಡಿನ್ನರ್ ಪಾರ್ಟಿ!

Recommended Video

      ಕಾಂಗ್ರೆಸ್ ನ ಶಾಸಕರಿಗೆ ಸಿದ್ದರಾಮಯ್ಯನವರಿಂದ ಇಂದು ಡಿನ್ನರ್ ಪಾರ್ಟಿ | Oneindia Kannada

      ಬೆಂಗಳೂರು, ಜುಲೈ 03: ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ವಪಕ್ಷೀಯ ಶಾಸಕರಿಗೆ ಇಂದು ಔತಣಕೂಟ ಏರ್ಪಡಿಸಿದ್ದು, ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

      ಶಾಂತಿವನದಲ್ಲಿದ್ದಾಗ ವಿಡಿಯೋ ರಗಳೆಯಿಂದ ಬೇಸತ್ತಿದ್ದ ಹಾಗೂ ವಿಡಿಯೋ ವೈರಲ್ ಇಂದ ಪಕ್ಷದ ಶಾಸಕರಲ್ಲಿ ಉಂಟಾಗಿರಬಹುದಾದ ಅನುಮಾನಗಳನ್ನು ಪರಿಹರಿಸಲು ಹಾಗೂ ಬಜೆಟ್‌ಗೆ ಮುಂಚೆ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಈ ಔತಣಕೂಟ ಏರ್ಪಡಿಸಿದ್ದಾರೆ ಎನ್ನಲಾಗಿದೆ.

      ಔತಣಕೂಟವು ಇಂದು (ಜುಲೈ 03) ರಾತ್ರಿ 7:30ಕ್ಕೆ ತಾಜ್ ವೆಸ್ಟ್‌ ಎಂಡ್‌ನಲ್ಲಿ ಆಯೋಜಿಸಲಾಗಿದ್ದು ವಿಧಾನಮಂಡಲದ ಜಂಟಿ ಸದನದ ಕಾಂಗ್ರೆಸ್ ಸದ್ಯರನ್ನು ಔತಣಕೂಟಕ್ಕೆ ಆಹ್ವಾನಿಸಲಾಗಿದೆ.

      Siddaramaiah organized dinner party to congress MLAs

      ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ಅವರು ಪಕ್ಷದ ಶಾಸಕರನ್ನು ತಮ್ಮ ವಿಶ್ವಾಸದಲ್ಲಿ ಇಟ್ಟುಕೊಳ್ಳಬೇಕಾದ ಅವಶ್ಯಕತೆ ಇದ್ದು. ಅಲ್ಲದೆ ಇತ್ತೀಚಿನ ಬೆಳವಣಿಗೆಗಳಿಂದ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನ ಅತೃಪ್ತ ಬಣದ ನಾಯಕತ್ವ ವಹಿಸಿದ್ದಾರೆ ಎಂಬ ಊಹಾಪೋಹ ಹರಿದಾಡಿದ್ದರಿಂದ ಅದನ್ನು ಹೋಗಲಾಡಿಸಲೆಂದು ಈ ಔತಣಕೂಟ ಆಯೋಜಿಸಲಾಗಿದೆ ಎಂಬುದು ರಾಜಕೀಯ ತಜ್ಞರ ಲೆಕ್ಕಾಚಾರ.

      Siddaramaiah organized dinner party to congress MLAs

      ಸಿದ್ದರಾಮಯ್ಯ ಅವರ ಸೂಕ್ಷ್ಮ ರಾಜಕೀಯ ದಾಳವಾಗಿಯೂ ಈ ಔತಣಕೂಟವನ್ನು ನೋಡಲಾಗುತ್ತಿದ್ದು. ಸ್ವಪಕ್ಷೀಯರಿಗೆ ಔತಣಕೂಟ ಆಯೋಜಿಸುವ ಮೂಲಕ ಜೆಡಿಎಸ್‌ಗೆ, ಬಿಜೆಪಿಗೆ ತಾವು ಈಗಲೂ ಕಾಂಗ್ರೆಸ್‌ ಪಕ್ಷದ ಸೂಪರ್‌ ಪವರ್‌ ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ ಜೊತೆಗೆ ಕಾಂಗ್ರೆಸ್‌ ಹೈಕಮಾಂಡ್‌ಗೂ ಸಂದೇಶ ರವಾನಿಸುತ್ತಿದ್ದಾರೆ ಎಂಬ ಲೆಕ್ಕಾಚಾರವೂ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+