ಸಿಎಂಗೆ ಸಾಲ ರೈಟ್-ಆಫ್‌ಗೂ ಸಾಲಮನ್ನಾಗೂ ವ್ಯತ್ಯಾಸ ಗೊತ್ತಿಲ್ಲ: ಅಶೋಕ್‌

16 ಬಜೆಟ್‌ಗಳನ್ನು ಮಂಡಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಸ್ವಯಂ-ಘೋಷಿತ ಆರ್ಥಿಕ ತಜ್ಞರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇನ್ನೂ ಸಾಲ ವಜಾ ಮತ್ತು ಸಾಲಮನ್ನಾ ನಡುವಿನ ವ್ಯತ್ಯಾಸ ತಿಳಿದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ವ್ಯಂಗ್ಯ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಎಕ್ಸ್‌ ಪೋಸ್ಟ್‌ ಹಂಚಿಕೊಂಡು ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ. ಸಾಲ ರೈಟ್-ಆಫ್‌ಗೂ "ಸಾಲ ಮನ್ನಾ"ಗೂ ವ್ಯತ್ಯಾಸ ಗೊತ್ತಿಲ್ಲದ ಮುಖ್ಯಮಂತ್ರಿಗಳ ಮತಿಗೇಡಿತನಕ್ಕೆ ಏನನ್ನಬೇಕು? ಎಂದು ವ್ಯಂಗ್ಯವಾಡಿದ್ದಾರೆ.

ಸಾಲ ವಜಾ (Write-off) ಎನ್ನುವುದು ಬ್ಯಾಂಕುಗಳು ತಮ್ಮ ಲೆಕ್ಕಪತ್ರಗಳನ್ನು ಸ್ವಚ್ಛಗೊಳಿಸಲು ತೆಗೆದುಕೊಳ್ಳುವ ಒಂದು ಸಾಮಾನ್ಯ ಲೆಕ್ಕಪತ್ರ ಪ್ರಕ್ರಿಯೆ. ಇದು ಸಾಲಗಾರರ ಹೊಣೆಗಾರಿಕೆಯನ್ನು ಅಳಿಸಿ ಹಾಕುವುದಿಲ್ಲ ಅಥವಾ ಡೀಫಾಲ್ಟರ್‌ಗಳಿಗೆ ಯಾವುದೇ ಪ್ರಯೋಜನ ಅಥವಾ ಪರಿಹಾರವನ್ನು ನೀಡುವುದಿಲ್ಲ. ಸಾಲ ವಜಾ ನಂತರವೂ ಬ್ಯಾಂಕುಗಳು ಸಂಪೂರ್ಣವಾಗಿ ಸಾಲ ವಸೂಲಾತಿ ಪ್ರಕ್ರಿಯೆಯನ್ನು ಮುಂದುವರಿಸುತ್ತವೆ ಎಂದು ಅಶೋಕ್‌ ವಿವರಿಸಿದ್ದಾರೆ. ತಾಂತ್ರಿಕ ಬ್ಯಾಂಕಿಂಗ್ ಪದಗಳನ್ನು ತಪ್ಪಾಗಿ ಅರ್ಥೈಸುವ ಬದಲು, ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪಕ್ಷವು ಬಿಟ್ಟುಹೋದ ಆರ್ಥಿಕ ಅವ್ಯವಸ್ಥೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

Siddaramaiah Dont Know Difference Between Loan Write-Off And Loan Waiver Ashoka

ಸಿಎಂ ಸಿದ್ದರಾಮಯ್ಯ ಅವರು ಈ ವಿಷಯವನ್ನು ತಿರುಚಲು ಮುಂದಾಗಿರುವುದರಿಂದ, ಕೆಲವು ವಾಸ್ತವ ಸಂಗತಿಗಳನ್ನು, ಅಂಕಿ-ಅಂಶಗಳನ್ನು ಸಾರ್ವಜನಿಕರ ಮುಂದೆ ಇಡುವುದು ಅಗತ್ಯ. ಭಾರತದ ಎನ್‌ಪಿಎ ಬಿಕ್ಕಟ್ಟಿನ ಮೂಲವು ನೇರವಾಗಿ ಯುಪಿಎ ಅವಧಿಯಲ್ಲಿದೆ. 2008ರಿಂದ 2014ರ ನಡುವೆ, ಅನಿಯಂತ್ರಿತ ಸಾಲ ನೀಡುವಿಕೆ, ರಾಜಕೀಯ ಹಸ್ತಕ್ಷೇಪ ಮತ್ತು ಒತ್ತಡಕ್ಕೊಳಗಾದ ಖಾತೆಗಳ ಎವರ್‌ಗ್ರೀನಿಂಗ್‌ನಿಂದಾಗಿ ಗುಪ್ತ ಎನ್‌ಪಿಎಗಳ ದೊಡ್ಡ ಹೊರೆ ಸೃಷ್ಟಿಯಾಯಿತು. ಸಮಸ್ಯೆಯನ್ನು ಎದುರಿಸುವ ಬದಲು, ಯುಪಿಎ ಸರ್ಕಾರವು ಕೆಟ್ಟ ಸಾಲಗಳ ಗುರುತಿಸುವಿಕೆಯನ್ನು ಪದೇ ಪದೇ ಮುಂದೂಡಿತು. ಇದರಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ನಿಧಾನವಾಗಿ ಎನ್‌ಪಿಎ ದೈತ್ಯವಾಗಿ ಬೆಳೆಯಲು ಅವಕಾಶ ನೀಡಿತು ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ 2014ರಲ್ಲಿ ಅಧಿಕಾರ ವಹಿಸಿಕೊಂಡಾಗ, ಈ ಭಾರೀ ಎನ್‌ಪಿಎ ಹೊರೆ ಬಳುವಳಿಯಾಗಿ ದೊರೆಯಿತು. ಸಮಸ್ಯೆಯ ನಿಜವಾದ ಪ್ರಮಾಣವನ್ನು ಬಯಲಿಗೆ ತರಲು ಆರ್‌ಬಿಐಗೆ ಕಟ್ಟುನಿಟ್ಟಾದ ಆಸ್ತಿ ಗುಣಮಟ್ಟ ಪರಿಶೀಲನೆ ನಡೆಸಲು ನಿರ್ದೇಶಿಸಲಾಯಿತು. ಈ ಸ್ವಚ್ಛತಾ ಕಾರ್ಯದ ನಂತರವೇ ನಿಜವಾದ ಅಂಕಿಅಂಶಗಳು ಬೆಳಕಿಗೆ ಬಂದವು. ವಾಸ್ತವವಾಗಿ ಎನ್‌ಡಿಎ ಸರ್ಕಾರ ಯಾವುದೇ ಎನ್‌ಪಿಎ ಸೃಷ್ಟಿಸಿಲ್ಲ. ಬದಲಾಗಿ ಯುಪಿಎ ಅವಧಿಯಲ್ಲಿ ಮುಚ್ಚಿಟ್ಟಿದ್ದನ್ನು ಬಹಿರಂಗಪಡಿಸಿತು ಅಷ್ಟೇ ಎಂದು ತಿರುಗೇಟು ನೀಡಿದ್ದಾರೆ.

Siddaramaiah Dont Know Difference Between Loan Write-Off And Loan Waiver Ashoka

ಈ ಸುಧಾರಣೆಗಳು ಸ್ಪಷ್ಟ ಫಲಿತಾಂಶಗಳನ್ನು ನೀಡಿರುವುದು ನಮ್ಮ ಮುಂದಿದೆ. ಯುಪಿಎ ಅವಧಿಯ ಕೆಟ್ಟ ಸಾಲಗಳನ್ನು ಗುರುತಿಸಿದ ನಂತರ ಹೆಚ್ಚಾಗಿದ್ದ ಭಾರತದ ಒಟ್ಟು ಎನ್‌ಪಿಎ ಅನುಪಾತವು ಅಂದಿನಿಂದ ಸ್ಥಿರವಾಗಿ ಕಡಿಮೆಯಾಗಿ ಈಗ ಸುಮಾರು ಶೇ 2.5ಕ್ಕೆ ತಲುಪಿದೆ. ಇದು ಒಂದು ದಶಕದಲ್ಲೇ ಅತ್ಯಂತ ಕಡಿಮೆಯಾಗಿದೆ. ಈ ಗಣನೀಯ ಸುಧಾರಣೆಯು ವಸೂಲಾತಿ, ಸುಧಾರಿತ ಕ್ರೆಡಿಟ್ ಶಿಸ್ತು, ಕಟ್ಟುನಿಟ್ಟಿನ ಮೇಲ್ವಿಚಾರಣೆ ಮತ್ತು ಯುಪಿಎ ಅವಧಿಯ ಎವರ್‌ಗ್ರೀನಿಂಗ್ ಸಂಸ್ಕೃತಿಗೆ ಕಡಿವಾಣ ಹಾಕಿದ ಫಲಿತಾಂಶ ಎಂದು ಟಾಂಗ್‌ ನೀಡಿದ್ದಾರೆ.

ಸಾರ್ವಜನಿಕರ ದಿಕ್ಕು ತಪ್ಪಿಸುವ ಹುನ್ನಾರ!

ಲಜ್ಜೆಗೆಟ್ಟ ಕಾಂಗ್ರೆಸ್ ಪಕ್ಷವು ಈಗ ಸಾರ್ವಜನಿಕರ ದಿಕ್ಕು ತಪ್ಪಿಸಲು ಬ್ಯಾಂಕ್‌ಗಳ ಸಾಲ ವಜಾ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಸಾಲ ವಜಾ ಅಂದರೆ ಸಾಲ ಮನ್ನಾ ಅಲ್ಲ ಮತ್ತು ಅವು ಡೀಫಾಲ್ಟರ್‌ಗಳಿಗೆ ಉಡುಗೊರೆಗಳಲ್ಲ. ಅವು ಕೇವಲ ಯುಪಿಎ ಅವಧಿಯಲ್ಲಿ ಇರದಿದ್ದ ಪಾರದರ್ಶಕತೆ ಮತ್ತು ಸರಿಯಾದ ಲೆಕ್ಕಪತ್ರ ಅಭ್ಯಾಸಗಳನ್ನು ಪ್ರತಿಬಿಂಬಿಸುತ್ತವೆ. Write-off ಅಂದರೆ, ಸಾಲ ಮನ್ನಾ ಅಲ್ಲ. ಕಾರ್ಪೊರೇಟ್ ಸಾಲಗಾರರ ಹೊಣೆಗಾರಿಕೆ ಹಾಗೆಯೇ ಉಳಿಯುತ್ತದೆ, ಮತ್ತು ವಸೂಲಾತಿ ಮುಂದುವರಿಯುತ್ತದೆ. ತಪ್ಪು ಮಾಹಿತಿಯನ್ನು ಹರಡುವ ಮೊದಲು, ಸಿಎಂ ಸಿದ್ದರಾಮಯ್ಯ ಅವರು ರಿಮೋಟ್ ಕಂಟ್ರೋಲ್ ಮೂಲಕ ಯುಪಿಎ ಸರ್ಕಾರವನ್ನು ನಡೆಸಿದ ತಮ್ಮ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಕೆಲ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಅಶೋಕ್‌ ಸವಾಲ್‌ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+