Karnataka CM Oath: ಜೋಡೆತ್ತುಗಳ ಪ್ರಮಾಣವಚನಕ್ಕೆ ಘಟಾನುಘಟಿ ನಾಯಕರು ಆಗಮನ!
ಬೆಂಗಳೂರು, ಮೇ 20: ಐತಿಹಾಸಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಸರ್ಕಾರ ರಚನೆಗೆ ಸಿದ್ದತೆಯನ್ನ ನಡೆಸಿದ್ದು, ಕೆಲವೇ ಕ್ಷಣಗಳಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ
ಮುಂಬರುವ ಲೋಕಸಭಾ ಚುನಾವಣಾ ಹಿನ್ನಲೆ ಹಲವು ರಾಜ್ಯದ ಘಟಾನುಘಟಿ ನಾಯಕರಿಗೆ ಆಹ್ವಾನವನ್ನ ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಪ್ರಮುಖ ನಾಯಕರು ಆಗಮಿಸಲಿದ್ದಾರೆ. ಈಗಾಗಲೇ ಕಾರ್ಯಕ್ರಮದಲ್ಲಿ ಭಾಗಿಯಾಗಲು ತಮಿಳು ನಾಡು ಸಿಎಂ ಎಂಕೆ ಸ್ಟಾಲಿನ್ ಆಗಮಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬೆಂಗಳೂರಿಗೆ ಆಗಮಿಸಿದ್ದು, ಹಲವು ರಾಜ್ಯದ ಮುಖ್ಯಮಂತ್ರಿಗಳಿಗೆ ಆಹ್ವಾನವನ್ನ ನೀಡಲಾಗಿದೆ. ಇನ್ನೂ ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನವನ್ನ ನೀಡಲಾಗಿದೆ.

ಯಾರೆಲ್ಲಾ ಪ್ರಮುಖರಿಗೆ ಆಹ್ವಾನ?
ಎಂಕೆ ಸ್ಟಾಲಿನ್ ( ತಮಿಳುನಾಡು ಸಿಎಂ)
ನಿತೀಶ್ ಕುಮಾರ್ ( ಬಿಹಾರ ಸಿಎಂ)
ಮಮತಾ ಬ್ಯಾನರ್ಜಿ ( ಪಶ್ಚಿಮ ಬಂಗಾಳ ಸಿಎಂ)
ಹೇಮಂತ್ ಸೊರೇನ್ ( ಜಾರ್ಖಂಡ್ ಸಿಎಂ)
ತೇಜಸ್ವಿ ಯಾದವ್ ( ಉಪ ಮುಖ್ಯಮಂತ್ರಿ, ಬಿಹಾರ)
ಶರದ್ ಪವಾರ್ ( ಎನ್ ಸಿ ಪಿ)
ಉದ್ಧವ್ ಠಾಕ್ರೆ ( ಮಾಜಿ ಸಿಎಂ ಮಹಾರಾಷ್ಟ್ರ)
ಫಾಕೂರ್ ಅಬ್ದುಲ್ಲಾ ( ಮಾಜಿ ಸಿಎಂ ಜಮ್ಮು ಕಾಶ್ಮೀರ)
ಮೆಹಬೂಬಾ ಮುಫ್ತಿ ( ಮಾಜಿ ಸಿಎಂ ಜಮ್ಮು ಕಾಶ್ಮೀರ)
ಸೀತಾರಾಮ್ ಯಚೂರಿ( ಸಿಪಿಎ, ಎಂ)
ಅಖಿಲೇಶ್ ಯಾದವ್ ( ಮಾಜಿ ಸಿಎಂ ಉತ್ತರ ಪ್ರದೇಶ)
ಡಿ ರಾಜಾ ( ಸಿಪಿಐ)
ಲಲ್ಲನ್ ಸಿಂಗ್ ( ಜೆಡಿಯು)
ವೈಕೋ ( ಎಂಡಿಎಂಕೆ)
ಎನ್ ಕೆ ಪ್ರೇಮಚಂದ್ರನ್ ( ಆರ್ ಎಸ್ ಪಿ)
ದೀಪಾಂಕರ್ ಭಟ್ಟಾಚಾರ್ಯ ( ಸಿಪಿಐ, ಎಂ.ಎಲ್)
ಜಯಂತ್ ಚೌಧುರಿ ( ಆರ್ ಎಲ್ ಡಿ)
ಜೋಸ್ ಕೆ ಮಣಿ ( ಕೇರಳ ಕಾಂಗ್ರೆಸ್ )
ಸಾದಿಕ್ ಅಲಿ ತಂಞಲ್ ( ಐಯುಎಂಎಲ್)












Click it and Unblock the Notifications