ಮತ್ತೆ ರಾಜ್ಯದ ಜನರಿಗೆ ಶಾಕ್: ಬೆಲೆ ಏರಿಕೆ ಮಧ್ಯೆ ಹಾಲಿನ ದರ ಏರಿಕೆ ಬಿಸಿ? ಇಲ್ಲಿದೆ ಮಾಹಿತಿ
ಸಮೃದ್ಧಿ ಹಾಲು ಬೆಂಗಳೂರು, ಡಿಸೆಂಬರ್ 07: ಮತ್ತೆ ರಾಜ್ಯದ ಜನರಿಗೆ ಶಾಕ್ ಕೊಡಲು KMF ಸಿದ್ಧತೆ ನಡೆಸಿದೆ. ದರ ಏರಿಕೆ ಮಾಡೋ ಬಗ್ಗೆ ಪರಿಷ್ಕರಣೆ ನಡೆಸುವ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮಧ್ಯೆಯೇ ಹಾಲಿನ ದರ ಏರಿಕೆಗೆ KMF ತಯಾರಿ ನಡೆಸುತ್ತಿರುವುದು ಸದ್ಯ ಸಾರ್ವಜನಿಕರಿಗೆ ತಲೆ ನೋವು ತರಿಸಿದೆ.
ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೆ ಹಾಲು-ಮೊಸರಿನ ದರ ಏರಿಕೆಯಾಗಿತ್ತು. ಜನರು ಅದೇ ಶಾಕ್ ನಿಂದ ಇನ್ನೂ ಹೊರಬಂದಿಲ್ಲ. ಆದರೆ ಇದರ ನಡುವೆ ಮತ್ತೆ ದರ ಏರಿಕೆ ಚರ್ಚೆ ಶುರುವಾಗಿದೆ. ರೇಟ್ ಹೆಚ್ಚು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕೆಎಂಎಫ್ ಸಿದ್ಧತೆ ನಡೆಸಿದೆ.

ಈಗಾಗಲೇ ಕೆಎಂಎಫ್ ಅಧಿಕಾರಿಗಳ ಮಟ್ಟದಲ್ಲಿ ದರ ಏರಿಕೆ ಕುರಿತು ಚಿಂತನೆ ನಡೆದಿದೆ. ಹಾಲಿನ ದರ ಪರಿಷ್ಕರಣೆಗೆ 14 ಹಾಲು ಒಕ್ಕೂಟದಿಂದ ಕೆಎಂಎಫ್ ಗೆ ಮನವಿ ಬಂದಿದೆ. ಹೀಗಾಗಿ ಅಧಿವೇಶನದಿಂದ ಸಿಎಂ ಬಂದ ಬಳಿಕ ಸಿದ್ದರಾಮಯ್ಯರ ಭೇಟಿ ಮಾಡಿ ನಂದಿನಿ ಹಾಲಿನ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲು ಕೆಎಂಎಫ್ ಸಿದ್ಧತೆ ಮಾಡಿಕೊಂಡಿದೆ.
ಕೆಎಂಎಫ್ ಆರ್ಥಿಕ ನಷ್ಟದ ಹಿನ್ನಲೆ 5 ರೂಪಾಯಿ ಪ್ರತಿ ಲೀಟರ್ ಗೆ ದರ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆದಿದೆ. ಆಗಸ್ಟ್ ಒಂದರಿಂದ ಪ್ರತಿ ಲೀಟರ್ ಗೆ ಮೂರು ರೂಪಾಯಿ ಏರಿಕೆ ಆಗಿತ್ತು. 5 ರೂಪಾಯಿ ಹೆಚ್ಚಳಕ್ಕೆ ಮನವಿ ಮಾಡಿದ್ದಕ್ಕೆ 3 ರೂಪಾಯಿ ಏರಿಕೆ ಮಾಡಲಾಗಿತ್ತು. . ಆದರೆ ಒಕ್ಕೂಟಗಳಿಂದ ದರ ಏರಿಕೆ ಆದ್ರೂ ಒಕ್ಕೂಟಗಳ ನಷ್ಟ ಇನ್ನೂ ಸರಿದೂಗಿಲ್ಲ. ಹೀಗಾಗಿ ದರ ಪರಿಷ್ಕರಣೆ ಮಾಡಿ ಎಂದು ಒಕ್ಕೂಟಗಳು ಪಟ್ಟು ಹಿಡಿದಿವೆ.
ಅಲ್ಲದೆ ಕ್ಷೀರ ಭಾಗ್ಯ ಯೋಜನೆಯಡಿ ಕೆಎಂಎಫ್ ಪೂರೈಸುತ್ತಿರುವ ಹಾಲಿನ ಪುಡಿ ದರ ಪ್ರತಿ ಕೆಜಿಗೆ 400 + ಜಿಎಸ್ಟಿ ನೀಡಲು ಮನವಿ ಮಾಡಲಾಗಿದೆ...ಈಗ 300+ಜಿಎಸ್ಟಿ ನೀಡ್ತಿದ್ದೀರ ಅದರಿಂದ ನಷ್ಟವಾಗ್ತಿದೆ ಎನ್ನುತ್ತಿರುವ ಕೆಎಂಎಫ್. ಅತ್ತ ಹಾಲಿನ ದರ ಏರಿಕೆಗೆ ರೈತರು ಹಾಗೂ ಹಾಲು ಒಕ್ಕೂಟದಿಂದ ಒತ್ತಡವಿದೆ ಅಂತಿದ್ದಾರೆ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಉತ್ಪಾದನ ವೆಚ್ಚ ಹೆಚ್ಚಳದಿಂದ ಹೊರೆ ಆಗ್ತಿರುವ ಬಗ್ಗೆ ಹಾಲು ಉತ್ಪಾದಕರ ಒಕ್ಕೂಟ ಸಭೆಯಲ್ಲಿ ಅಹವಾಲು ಸಲ್ಲಿಸಿದೆ. ಇತರ ರಾಜ್ಯಕ್ಕೆ ಹೊಲಿಕೆ ಮಾಡಿದ್ರೆ ನಮ್ಮಲ್ಲಿ ಕಮ್ಮಿಯಿದೆ, ಹಾಗೆಯೇ ಅಮೂಲ್ 10 ತಿಂಗಳಿನಲ್ಲಿ 12 ರೂಪಾಯಿ ಹೆಚ್ಚಿಸಿದೆ, ನಾವು 3 ರೂಪಾಯಿ ಮಾತ್ರ ಹೆಚ್ಚಿಸರೋದು ಎಂದಿದ್ದಾರೆ.

ಯಾವ್ಯಾವ ಹಾಲಿಗೆ ಎಷ್ಟಿದೆ?
| 1 | ಟೋನ್ಡ್ ಹಾಲು (ಬ್ಲೂ ಪ್ಯಾಕೆಟ್) | 42 ರೂಪಾಯಿ |
| 2 | ಹೋಮೋಜಿನೈಸ್ಡ್ ಹಾಲು | 43 ರೂಪಾಯಿ |
| 3 | ಹೋಮೋಜಿನೈಸ್ಡ್ ಹಾಲು | 47 ರೂಪಾಯಿ |
| 4 | ಸ್ಪೆಷಲ್ ಹಾಲು | 48 ರೂಪಾಯಿ |
| 5 | ಶುಭಂ ಹಾಲು | 48 ರೂಪಾಯಿ |
| 6 | ಹೋಮೋಜಿನೈಸ್ಡ್ ಸ್ಟ್ಯಾಂಡಡೈಸ್ಡ್ ಹಾಲು | 49 ರೂಪಾಯಿ |
| 7 | ಸಮೃದ್ಧಿ ಹಾಲು | 53 ರೂಪಾಯಿ |
| 8 | ಸಂತೃಪ್ತಿ ಹಾಲು | 55 ರೂಪಾಯಿ |
| 9 | ಡಬಲ್ಡ್ ಟೋನ್ಡ್ ಹಾಲು | 41 ರೂಪಾಯಿ |
| 10 | ಮೊಸರು ಪ್ರತಿ ಲೀಟರ್‌ಗೆ | 50 ರೂಪಾಯಿ |
| 11 | ಮಚ್ಚಿಗೆ 200 ಗ್ರಾಂ | 9 ರೂಪಾಯಿ |
ಆ ಭಾಗ್ಯ ಈ ಭಾಗ್ಯ ಅಂತ ಸರ್ಕಾರ ಜನರಿಗೆ ಅನುಕೂಲ ಮಾಡ್ತೇವೆ ಅಂತಾರೆ. ಆದ್ರೆ ಅದ್ರ ಮಧ್ಯೆಯೇ ಈ ತರ ಬೆಲೆ ಏರಿಕೆಯ ಬಿಸಿ ತಟ್ಟಿಸುತ್ತಿರುವುದು ಎಷ್ಟು ಸರಿ? ಪದೇ ಪದೇ ಹಾಲು ಏರಿಕೆ ಮಾಡ್ತಾ ಇರುವುದು ಸಮಂಜಸವೇ ಅಂತ ಪ್ರಶ್ನೆ ಮಾಡ್ತಾ ಇದ್ದಾರೆ. ಸರ್ಕಾರ ಏನು ನಿರ್ಧಾರ ಕೈ ಗೊಳ್ಳುತ್ತೋ ಕಾದು ನೋಡಬೇಕು.
-
Siddaramaiah: ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆ ಪೊಲೀಸ್ ಸೇವೆಯ ಆಧಾರ: ಸಿದ್ದರಾಮಯ್ಯ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
ಸಕಲೇಶಪುರದಲ್ಲಿ ಫೋಟೋಗ್ರಾಫರ್ಗಳ ಮೇಲೆ ಹಲ್ಲೆ ಪ್ರಕರಣ: ದುಬಾರಿ ಕ್ಯಾಮೆರಾಗೆ ಹಾನಿ, ಆರೋಪಿಗಳ ಬಂಧನ -
Price Hike: ಕೇಂದ್ರದಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಹೇಳಿಕೆ, ದರ ಹೆಚ್ಚಿಸಿದ್ದೇ ಕಾಂಗ್ರೆಸ್; ಡಿಕೆಶಿಗೆ ತಿರುಗೇಟು -
ಹಿಂದಿ ಹೆಚ್ಚು ಜನ ಮಾತನಾಡುವ ಭಾಷೆ, ವಿದ್ಯಾರ್ಥಿಗಳು ಎಲ್ಲ ಭಾಷೆ ಕಲಿಯಬೇಕು: ಶ್ರೀರಾಮುಲು -
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ತಮಿಳುನಾಡು ಚುನಾವಣೆ 2026: ಟಿವಿಎಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಎರಡು ಕ್ಷೇತ್ರಗಳಿಂದ ನಟ ದಳಪತಿ ವಿಜಯ್ ಸ್ಪರ್ಧೆ -
12 ಕೋಟಿ ರೂ ಡ್ರಗ್ಸ್ ಜಪ್ತಿ: ಗಂಧದ ನಾಡು 'ಗಾಂಜಾ ಬೀಡು' ಮಾಡಿದ ಕಾಂಗ್ರೆಸ್ ಸರ್ಕಾರ; R ಅಶೋಕ -
ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಕಾಂಗ್ರೆಸ್ ಉಗ್ರರಿಗೆ 'ಗ್ಯಾರಂಟಿ ಭಾಗ್ಯ' ನೀಡಿದರೂ ಅಚ್ಚರಿಯಿಲ್ಲ; ವಿಜಯೇಂದ್ರ -
Gen Z ಪ್ರತಿಭಟನೆಯಲ್ಲಿ 'ಪಾತ್ರ': ಬಲೆನ್ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೇಪಾಳ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ -
ಸೋಷಿಯಲ್ ಮೀಡಿಯಾಗೆ ವಯೋಮಿತಿ ಫಿಕ್ಸ್?: ಕಠಿಣ 'ಎಐ' ಕಾನೂನು ಜಾರಿಗೆ ಸಂಸದೀಯ ಸಮಿತಿ ಶಿಫಾರಸು












Click it and Unblock the Notifications