National Highway: ಶಿವಮೊಗ್ಗ-ತುಮಕೂರು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಹಾಗೂ ವೆಚ್ಚ, ಪ್ರಯೋಜನಾಗಳ ವಿವರ

Shivamogga-Tumakuru National Highway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆಯಾಗುತ್ತಲಿದೆ. ಕೆಲವೆಡೆ ಕಾಮಗಾರಿಗಳು ವೇಗ ಪಡೆದುಕೊಂಡಿದ್ದರೆ, ಇನ್ನೂ ಹಲವೆಡೆ ಆಮೆಗತಿಯಲ್ಲಿ ಸಾಗಿವೆ. ಹಾಗಾದ್ರೆ ಇದೀಗ ಬಹುನಿರೀಕ್ಷಿತ ಶಿವಮೊಗ್ಗ - ತುಮಕೂರು NH 69 ನಿರ್ಮಾಣ ಕಾಮಗಾರಿಯು ಯಾವಾಗ ಪೂರ್ಣಗೊಲಿದೆ ಹಾಗೂ ಇದರ ವೆಚ್ಚ ಹಾಗೂ ಪ್ರಯೋಜನಾಗಳೇನು ಎನ್ನುವ ಮಹತ್ವದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯರಿ.

ಕರ್ನಾಟಕದ ಮಲೆನಾಡು ಹಾಗೂ ಮಧ್ಯಭಾಗವನ್ನು ಸಂಪರ್ಕಿಸುವ ಅತ್ಯಂತ ಮಹತ್ವದ ಶಿವಮೊಗ್ಗ - ತುಮಕೂರು (ರಾಷ್ಟ್ರೀಯ ಹೆದ್ದಾರಿ 69) ಚತುಷ್ಪಥ ಕಾಮಗಾರಿಯು ಅಂತಿಮ ಹಂತ ತಲುಪುತ್ತಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಜಂಟಿಯಾಗಿ 'ಹೈಬ್ರಿಡ್ ಅನ್ನುಯಿಟಿ ಮಾಡೆಲ್' (HAM) ಅಡಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡಿವೆ.

Shivamogga-Tumakuru National Highway 6 400 Crore Project Completion by March 2027 Know details

ಕಾಮಗಾರಿ ಯಾವಾಗ ಮುಕ್ತಾಯ?

ಸುಮಾರು 6,400 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ 214.43 ಕಿಲೋ ಮೀಟರ್ ಉದ್ದದ ಚತುಷ್ಪಥ ಹೆದ್ದಾರಿಯ ಬಹುತೇಕ ಭಾಗಗಳ ಕಾಮಗಾರಿ ಮುಕ್ತಾಯಗೊಂಡಿದೆ. ಬಾಕಿ ಉಳಿದಿರುವ ಅಂತಿಮ ಭಾಗವು ಮಾರ್ಚ್ 2027ರ ವೇಳೆಗೆ ಪೂರ್ಣಗೊಳ್ಳಲಿದೆ ಎನ್ನುವ ಬಿಗ್ ಅಪ್ಡೇಟ್‌ ಲಭ್ಯವಾಗಿದೆ.

ಈ ರಾಷ್ಟ್ರೀಯ ಹೆದ್ದಾರಿಯು ತುಮಕೂರು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹಾದುಹೋಗುತ್ತದೆ. ಈ ಮಾರ್ಗದಲ್ಲಿ ಬರುವ ಪ್ರಮುಖ ಪಟ್ಟಣಗಳು ಹಾಗೂ ನಗರಗಳ ಸಂಪೂರ್ಣ ಪಟ್ಟಿಯಲ್ಲಿ ಈ ಕೆಳಗೆ ನೀಡಲಾಗಿದೆ ಕಣ್ಣಾಡಿಸಿ.

ಯಾವೆಲ್ಲಾ ಮಾರ್ಗಗಳಲ್ಲಿ ಹಾದುಹೋಗಲಿದೆ?

* ತುಮಕೂರು
* ಮಲ್ಲಸಂದ್ರ
* ಗುಬ್ಬಿ
* ತಿಪಟೂರು
* ಅರಸೀಕೆರೆ
* ಬಾಣಾವರ
* ಕಡೂರು
* ಬೀರೂರು
* ತರೀಕೆರೆ
* ಭದ್ರಾವತಿ
* ಶಿವಮೊಗ್ಗ

4 ಹಂತಗಳಲ್ಲಿ ಕಾಮಗಾರಿ

ಈ ಹೆದ್ದಾರಿಯು ತುಮಕೂರಿನಲ್ಲಿ NH-48 (ಬೆಂಗಳೂರು ಮಾರ್ಗ) ರಸ್ತೆಗೆ ಸಂಪರ್ಕ ಕಲ್ಪಿಸಿದರೆ, ಶಿವಮೊಗ್ಗದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗಗಳ ರಸ್ತೆಗಳಿಗೂ ಸಂಪರ್ಕ ಕಲ್ಪಿಸುತ್ತದೆ. ಇನ್ನೂ ಇದನ್ನು ತ್ವರಿತ ಅನುಷ್ಠಾನಕ್ಕಾಗಿ 4 ಪ್ಯಾಕೇಜ್‌ಗಳಾಗಿ ವಿಂಗಡಿಸಿ ಕಾಮಗಾರಿ ನಡೆಸಲಾಗುತ್ತಿದೆ.

* ಪ್ಯಾಕೇಜ್ 1 (ಮಲ್ಲಸಂದ್ರ - ಕರಡಿ - 52.89 ಕಿಲೋ ಮೀಟರ್): ಕಾಮಗಾರಿ ಶೇಕಡ 100ರಷ್ಟು ಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೆ ಮುಕ್ತವಾಗಿದೆ.

* ಪ್ಯಾಕೇಜ್ 2 (ಕರಡಿ - ಬಾಣಾವರ - 56.70 ಕಿಲೋ ಮೀಟರ್): ಶೇಕಡ 99.98ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಅಂತಿಮ ಹಂತದ ಸಣ್ಣಪುಟ್ಟ ಕೆಲಸಗಳು ನಡೆಯುತ್ತಿವೆ.

* ಪ್ಯಾಕೇಜ್ 3 (ಬಾಣಾವರ - ಬೆಟ್ಟದಹಳ್ಳಿ - 48.51 ಕಿಲೋ ಮೀಟರ್): ಶೇಕಡ 98ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಮುಕ್ತಾಯದ ಹಂತದಲ್ಲಿದೆ.

* ಪ್ಯಾಕೇಜ್ 4 (ಬೆಟ್ಟದಹಳ್ಳಿ - ಶಿವಮೊಗ್ಗ - 56.33 ಕಿಲೋ ಮೀಟರ್): ಶೇಕಡಾ 83.78ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಇದನ್ನು ಮಾರ್ಚ್ 2027ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಾಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹೆದ್ದಾರಿಯ ಪ್ರಮುಖ ವಿಶೇಷತೆಗಳು

* ಅಗಲವಾದ ವಿಭಾಜಕ (Divided Carriageway) ಹಾಗೂ ತುರ್ತು ಸಂಚಾರಕ್ಕಾಗಿ ಅಗಲವಾದ ಪಾದಚಾರಿ ಮಾರ್ಗಗಳನ್ನು ಒಳಗೊಂಡಿದೆ.

* ಸಂಚಾರ ದಟ್ಟಣೆ ಕಡಿಮೆ ಮಾಡಲು ಪ್ರಮುಖ ಜಂಕ್ಷನ್‌ಗಳಲ್ಲಿ ಫ್ಲೈಓವರ್‌ಗಳು, ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ.

* ಸ್ಥಳೀಯರ ಸುಲಭ ಸಂಚಾರಕ್ಕಾಗಿ ಪಟ್ಟಣ ಪ್ರದೇಶಗಳಲ್ಲಿ ಸರ್ವಿಸ್ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ.

* ರಾತ್ರಿ ವೇಳೆ ಚಾಲನೆಗೆ ಅನುಕೂಲ ಆಗುವಂತೆ ಹೈ-ಟೆಕ್ ರಸ್ತೆ ದೀಪಗಳು, ಸೈನ್ ಬೋರ್ಡ್‌ಗಳು ಮತ್ತು ಸುರಕ್ಷತಾ ತಡೆಗೋಡೆಗಳನ್ನು ನಿರ್ಮಿಸಲಾಗಿದೆ.

ಏನೆಲ್ಲಾ ಪ್ರಯೋಜನಗಳಿವೆ?

* ಪ್ರಯಾಣದ ಸಮಯ ಉಳಿತಾಯ: ಶಿವಮೊಗ್ಗ ಹಾಗೂ ಬೆಂಗಳೂರು ನಡುವಿನ ಪ್ರಯಾಣದ ಸಮಯ ಗಮನಾರ್ಹವಾಗಿ ಕಡಿಮೆಯಾಗಲಿದೆ.

* ಕೃಷಿ ಮತ್ತು ವ್ಯಾಪಾರ ಉತ್ತೇಜನ: ಅಡಿಕೆ, ಭತ್ತ ಸೇರಿದಂತೆ ಸ್ಥಳೀಯ ರೈತರ ಬೆಳೆಗಳನ್ನು ಬೆಂಗಳೂರು ಹಾಗೂ ಇತರೆ ದೊಡ್ಡ ಮಾರುಕಟ್ಟೆಗಳಿಗೆ ವೇಗವಾಗಿ ಸಾಗಿಸಲು ಸಹಕಾರಿಯಾಗಲಿದೆ.

* ಪ್ರವಾಸೋದ್ಯಮಕ್ಕೆ ಉತ್ತೇಜನ: ಜೋಗ್‌ಫಾಲ್ಸ್, ಆಗುಂಬೆ, ಸಕ್ರೆಬೈಲು ಆನೆ ಬಿಡಾರ, ಮಲೆನಾಡಿನ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರಿಗೆ ಪ್ರಯಾಣ ಸುಗಮ ಆಗಲಿದೆ.

* ಹೊಸ ಕೈಗಾರಿಕೆಗಳು, ಲಾಜಿಸ್ಟಿಕ್ಸ್ ಹಬ್‌ಗಳು ಹಾಗೂ ಸ್ಥಳೀಯ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ.

ಒಟ್ಟಿನಲ್ಲಿ ಹೇಳುವುದಾದರೆ ಮಾರ್ಚ್ 2027ಕ್ಕೆ ಈ ಹೆದ್ದಾರಿ ಕಾಮಗಾರಿಯು ಸಂಪೂರ್ಣವಾಗಿ ಮುಕ್ತಾಯ ಆದ್ರೆ ಮಧ್ಯ ಕರ್ನಾಟಕದ ಆರ್ಥಿಕತೆಗೆ ದೊಡ್ಡ ಬಲ ಸಿಕ್ಕಾಂತಾಗಲಿದೆ. ಇದರಿಂದ ಆರ್ಥಿಕತೆಯಲ್ಲಿ ವೇಗವಾಗಿ ಅಭಿವೃದ್ಧಿ ಆಗುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಅಂತಲೇ ಹೇಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+