• search

ಕುರಿ ಮಾಂಸ ಪ್ರಿಯರಿಗೆ ಸುದ್ದಿ: ಜಿಲ್ಲೆ ಜಿಲ್ಲೆಗಳಲ್ಲಿ ಮಟನ್ ಕೇಂದ್ರ!

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಮೈಸೂರು, ಆಗಸ್ಟ್ 21: ಕೆಎಂಎಫ್ ನಂದಿನಿ ಬ್ರ್ಯಾಂಡ್ ಹೇಗೆ ಜನಪ್ರಿಯವಾಗಿರುವಂತೆ ಕುರಿ ಮಾಂಸ ಎಲ್ಲೆಡೆ ಸಿಗುವಂತೆ ಮಾಡಲು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಯೋಜನೆ ಹಾಕಿಕೊಂಡಿದೆ. ಕುರಿಗಳ ತಳಿ ಅಭಿವೃದ್ಧಿ, ಮಾಂಸ ಮಾರಾಟ ಕೇಂದ್ರ, ಉದ್ಯೋಗ ಅವಕಾಶ ಹೆಚ್ಚಳ ಎಲ್ಲವೂ ನಮ್ಮ ಗಮನದಲ್ಲಿದೆ ಎಂದು ನಿಗಮದ ಚೇರ್ಮನ್ ಪಂಡಿತರಾವ್ ಚಿದ್ರಿ ಘೋಷಿಸಿದ್ದಾರೆ.

    ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಕುರಿ ಮಾಂಸದ ಅಂಗಡಿಗಳನ್ನು ತೆರೆಯಲಾಗುವುದು, ಕುರಿ ಸಾಕಾಣಿಕೆ, ಸ್ಥಳೀಯರಿಗೆ ಉದ್ಯೋಗವಕಾಶ ಸೃಷ್ಟಿ ಮಾಡಲಾಗುವುದು. ರಾಜ್ಯದಲ್ಲಿರುವ ಸುಮಾರು 300ಕ್ಕೂ ಅಧಿಕ ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘಗಳನ್ನು ಒಗ್ಗೂಡಿಸಿ, ನೋಂದಣಿಗೆ ಚಾಲನೆ ನೀಡಲಾಗುವುದು. ಈ ಸಂಘಗಳ ಅಭಿವೃದ್ಧಿಗೆ ಸರ್ಕಾರದಿಂದ 25 ಕೋಟಿ ರು ಅನುದಾನ ಸಿಕ್ಕಿದೆ ಎಂದರು.

    Sheep Meat Shelling Centres

    ನಿಂಬಾಳ್ಕರ್ ಕೃಷಿ ಸಂಶೋಧನಾ ಕೇಂದ್ರದಿಂದ ಹುಟ್ಟಿಕೊಂಡ ನಾರಿ ಸುವರ್ಣ ಕುರಿ ತಳಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಡೆಕ್ಕನಿ, ಕೆಂಗುರಿ, ಹಾಸನ್ ತಳಿಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಮಂಡ್ಯ, ಚಿತ್ರದುರ್ಗ, ಹಾವೇರಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ತಳಿ ಅಭಿವೃದ್ಧಿ ಕೇಂದ್ರಗಳಿವೆ ಎಂದು ಹೇಳಿದರು.

    ಸುಮಾರು 18ಕ್ಕೂ ಅಧಿಕ ಆಂಬ್ಯುಲೆನ್ಸ್ ಗಳನ್ನು ರಸ್ತೆಗಿಳಿಸಲಾಗಿದ್ದು, ಕುರಿ/ಮೇಕೆಗಳ ಆರೋಗ್ಯ ರಕ್ಷಣೆಗೆ ಕ್ರಮ ಜರುಗಿಸಲಾಗಿದೆ.ಬಿಬಿಎಂಪಿ ಚುನಾವಣೆ ಬಳಿಕ ಕಾರ್ಯಕ್ರಮ ಆಯೋಜಿಸಿ ಹೊಸ ತಳಿ, ಸಂಘಗಳಿಗೆ ನೆರವು, ಮೊಬೈಲ್ ಆಂಬ್ಯುಲೆನ್ಸ್ ಗಳಿಗೆ ಚಾಲನೆ ನೀಡಲಾಗುತ್ತದೆ ಎಂದು ಚಿದ್ರಿ ಹೇಳಿದರು.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Karnataka State Sheep and Wool Development Corporation decided to introduce 18 ambulances, establish cooperative societies on the lines of KMFes; establish modern sheep meat selling centres in all districts.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more