ಗುರುವಾರದ ಬದಲು ಶುಕ್ರವಾರ ವಿಶ್ವಾಸ ಮತ ಯಾಚನೆ
ಬೆಂಗಳೂರು, ಮೇ 23: ಗುರುವಾರ ನಡೆಸಲು ಉದ್ದೇಶಿಸಿದ್ದ ವಿಧಾನಸಭೆ ಅಧಿವೇಶನ ಶುಕ್ರವಾರಕ್ಕೆ ಮುಂದೂಡಿಕೆಯಾಗಿದೆ. ಹೀಗಾಗಿ ನೂತನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ವಿಶ್ವಾಸ ಮತ ಯಾಚನೆ ಶುಕ್ರವಾರ ನಡೆಯಲಿದೆ.
ಈ ಹಿಂದೆ ಗುರುವಾರ ವಿಶ್ವಾಸ ಮತ ಯಾಚನೆ, ಶುಕ್ರವಾರ ಸ್ಪೀಕರ್ ಚುನಾವಣೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದರು. ಆದರೆ ಇಂದು ನಡೆದ ಪ್ರಮಾಣ ವಚನ ಸ್ವೀಕರಿಸಿದ ಕುಮಾರಸ್ವಾಮಿ ತಮ್ಮ ನಿರ್ಧಾರ ಬದಲಿಸಿದ್ದು ಶುಕ್ರವಾರ ಅಧಿವೇಶನ ಕರೆದಿದ್ದಾರೆ.
ಶುಕ್ರವಾರ ಮಧ್ಯಾಹ್ನ 12.15ಕ್ಕೆ ಅಧಿವೇಶನ ಆರಂಭವಾಗಲಿದೆ. ಅಂದೇ ಸ್ಪೀಕರ್ ಬದಲಾವಣೆಯೂ ನಡೆಯುವ ಸಾಧ್ಯತೆ ಇದೆ.

ಹಾಲಿ ಹಂಗಾಮಿ ಸ್ಪೀಕರ್ ಕೆ.ಜಿ. ಬೋಪಯ್ಯ ಸ್ಪೀಕರ್ ಚುನಾವಣೆ ನಡೆಸಿಕೊಡಲಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಕೆ.ಆರ್. ರಮೇಶ್ ಕುಮಾರ್ ನೂತನ ಸ್ಪೀಕರ್ ಆಗಲಿದ್ದಾರೆ. ಬಹುಶಃ ಇದಾದ ನಂತರ ವಿಶ್ವಾಸ ಮತ ಯಾಚನೆ ನಡೆಯಲಿದೆ.











Click it and Unblock the Notifications