BPL Card: ಪಡಿತರ ಚೀಟಿ ತಿದ್ದುಪಡಿಗೆ ಸರ್ವರ್ ಸಮಸ್ಯೆ: ರೊಚ್ಚಿಗೆದ್ದ ಫಲಾನುಭವಿಗಳು ಹೇಳೋದೇನು ಗೊತ್ತಾ?
BPL Card: ಇದೀಗ ಯಾವುದೇ ಸರ್ಕಾರಿ ಕೆಲಸಗಳಿಗೆ ಬೇಕಾಗುವ ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿಯೂ ಒಂದಾಗಿದೆ. ಇನ್ನು ಲೋಕಸಭೆ ಚುನಾವಣೆ ಬಳಿಕ ಇದೀಗ ಕಳೆ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಸರ್ವರ್ ತುಂಬಾ ಸ್ಲೋ ಆಗಿರುವ ಹಿನ್ನೆಲೆ ಜನರು ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆ ಬಿಪಿಎಲ್ ರೇಷನ್ ಕಾರ್ಡ್ ತಿದ್ದುಪಡಿ ಕಾರ್ಯವನ್ನು ನಿಲ್ಲಿಸಲಾಗಿತ್ತು. ಇದೀಗ ಚುನಾವಣೆ ಮುಗಿದಿರುವ ಹಿನ್ನೆಲೆ ಕಳೆದ ಮೂರು ದಿನಗಳಿಂದ ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಆಹಾರ ಇಲಾಖೆ ಅವಕಾಶ ಕಲ್ಪಿಸಿದೆ. ಆದರೆ ಸರ್ವರ್ ಡೌನ್ ಆಗಿರುವುದರಿಂದ ಜನರು ಅಧಿಕಾರಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ.

ಸರ್ವರ್ ಡೌನ್ ಹಿನ್ನೆಲೆ ಜನರು ಕಾರ್ಡ್ಗಳನ್ನು ತಿದ್ದುಪಡಿ ಮಾಡಲಾಗದೇ ಬೇಸತ್ತು ಹೋಗಿದ್ದಾರೆ. ಬೆಂಗಳೂರು ಒನ್ ಸೆಂಟರ್‌ಗಳಲ್ಲಿ ಸರ್ವರ್ ಸಮಸ್ಯೆ ಆಗಿದ್ದು, ಇದರಿಂದ ಫಲಾನುಭವಿಗಳು ಪ್ರತಿದಿನ ಕಾದು ನಿಂತು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೂರು ತಿಂಗಳ ಬಳಿಕ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದ್ದು, ಇದಕ್ಕೆ ಸಮಯವನ್ನು ಸಹ ನಿಗದಿಪಡಿಸಲಾಗಿದೆ. ಪ್ರತಿದಿನ ಬೆಳ್ಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆಯವರೆಗೂ, ಮತ್ತೆ ಸಂಜೆ 4ರಿಂದ 6 ಗಂಟೆಯವರೆಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಪ್ರತಿ ದಿನ ಈ ಸಮಯಕ್ಕೆ ಫಲಾನುಭವಿಗಳು ತಿದ್ದುಪಡಿಗೆಂದು ಬಂದರೆ, ಸರ್ವರ್ ಸಮಸ್ಯೆ ಕಾಡುತ್ತಿದ್ದು, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮಾಂತರ ಒನ್ ಕೇಂದ್ರಗಳಲ್ಲಿ ನಿಂತು.. ನಿಂತು ಜನರು ಬೇಸತ್ತು ಹೋಗಿದ್ದಾರೆ.
ಇದರಿಂದ ಹಣವು ಇಲ್ಲದೇ.. ಅಕ್ಕಿಯೂ ಇಲ್ಲದೇ ಬಿಪಿಎಲ್ ಫಲಾನುಭವಿಗಳು ಪರದಾಡುವಂತಹ ಪರಿಸ್ಥಿನಿ ನಿರ್ಮಾಣವಾಗಿದೆ. ನಾವು ನಮ್ಮ ದಿನಗೂಲಿ ಬಿಟ್ಟು ಕ್ಯೂ ನಿಂತುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಹೀಗೆ ಪ್ರತಿದಿನ ಆದರೆ ನಮ್ಮ ದಿನಗೂಲಿ ಹಣವೂ ಕೈತಪ್ಪಿ ಹೋಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಸರಿಪಡಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.
ಮತ್ತೊಂದೆಡೆ ಹೆಚ್ಚಿನ ಸಂಖ್ಯೆಯಲ್ಲಿ ಫಾಲಾನುಭವಿಗಳು ಬರುತ್ತಿರುವುದರಿಂದ ಜನರನ್ನು ನಿಭಾಯಿಸುವುದಕ್ಕೆ ಕಷ್ಟ ಆಗುತ್ತಿದೆ ಎಂದು ಬೆಂಗಳೂರು ಒನ್ ಸಿಬ್ಬಂದಿ ಹೇಳುತ್ತಿದ್ದಾರೆ.












Click it and Unblock the Notifications