ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತ್ಯೇಕ ಧರ್ಮ: ಸಂವಿಧಾನದಲ್ಲಿದೆಯೇ ಉಲ್ಲೇಖ?

|
Google Oneindia Kannada News

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದಂತೆ ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಅಂಗೀಕರಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು ರಾಜ್ಯದಲ್ಲಿ ಹೊಸ ತಲ್ಲಣ ಮೂಡಿಸಿದೆ. ಸದ್ಯಕ್ಕೆ ಈ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರ ಒಂದೊಮ್ಮೆ ಇದಕ್ಕೆ ಒಪ್ಪಿಗೆ ನೀಡಿದಲ್ಲಿ, ಲಿಂಗಾಯತ ಎಂಬುದು ಪ್ರತ್ಯೇಕ ಧರ್ಮವಾಗಲಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಆದರೆ ಸಂವಿಧಾನ ಪ್ರತ್ಯೇಕ ಧರ್ಮದ ಕುರಿತು ಏನನ್ನುತ್ತದೆ? ಸಂವಿಧಾನದಲ್ಲಿ ಪ್ರತ್ಯೇಕ ಧರ್ಮದ ಕುರಿತು ಉಲ್ಲೇಖವಿದೆಯೇ? ಎಂಬ ಅನುಮಾನ ಕಾಡುವುದು ಸಹಜ.

"ಲಿಂಗಾಯತ ಧರ್ಮ ಶಿಫಾರಸು ಆರಂಭದ ಮುನ್ನಡೆ ಅಷ್ಟೆ; ಸಂಪೂರ್ಣ ಗೆಲುವಲ್ಲ"

ಆದರೆ ಪ್ರತ್ಯೇಕ ಧರ್ಮದ ಕುರಿತಂತೆ ಸಂವಿಧಾನದಲ್ಲಿ ಯಾವುದೇ ಉಲ್ಲೇಖವಿಲ್ಲ. 1995 ರ ಹಿಂದು ವಿವಾಹ ಕಾಯ್ದೆಯ ಪ್ರಕಾರ, ಬ್ರಹ್ಮ ಸಮಾಜ, ಪ್ರಾರ್ಥನಾ ಸಮಾಜ, ಆರ್ಯಸಮಾಜ, ವೀರಶೈವ ಇತ್ಯಾದಿ ಎಲ್ಲ ಪಂಥಗಳನ್ನು ಅನುಸರಿಸುವವರನ್ನೂ ಹಿಂದುಗಳೆಂದೇ ಕರೆಯಲಾಗಿದೆ.

Separate Lingayat religion: Why it defeats the spirit of the Indian Constitution

ಸಂವಿಧಾನದಲ್ಲಿ 'ಅಲ್ಪಸಂಖ್ಯಾತರು' ಎಂಬುದನ್ನು ವ್ಯಾಖ್ಯಾನಿಸದಿದ್ದರೂ, ರಾಷ್ಟ್ರೀಯ ಅಲ್ಪಸಂಖ್ಯಾರ ಕಾಯ್ದೆ-1992 ರ ಪ್ರಕಾರ ಕೇಂದ್ರ ಸರ್ಕಾರ ಒಂದು ಸಮುದಾಯವನ್ನು 'ಅಲ್ಪಸಂಖ್ಯಾತ'ರು ಎಂದು ಘೋಷಿಸುವ ಅಧಿಕಾರ ಪಡೆದಿರುತ್ತದೆ.

ಕೆಲ ವರ್ಷಗಳ ಹಿಂದೆ ಸ್ವಾಮಿ ನಾರಾಯಣ ಪಂಥದವರೂ ಪ್ರತ್ಯೇಕ ಧರ್ಮದ ಬೇಡಿಕೆ ಇಟ್ಟಿದ್ದರು. ಇಂಥ ಹಲವು ಉದಾಹರಣೆಗಳು ಈ ಮೊದಲೂ ಸಿಗುತ್ತವಾದರೂ, ಕೊನೆಯಲ್ಲಿ ಪ್ರತ್ಯೇಕ ಧರ್ಮದ ಸ್ಥಾನಮಾನ ಮಾತ್ರ ಯಾವುದಕ್ಕೂ ಸಿಕ್ಕಿಲ್ಲ.

English summary
The decision by the Siddaramaiah led Congress government in Karnataka to accord 'religious minority' status is expected to face tough legal scrutiny. One of the main points that one needs to take into consideration is that although the Constitution is silent on this issue, it still goes against its spirit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X