• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಿರೀಶ್ ಕಾರ್ನಾಡ್ ಅಗಲುವಿಕೆಗೆ ಹಿರಿಯ ಸಾಹಿತಿಗಳ ಸಂತಾಪ

|

ಬೆಂಗಳೂರು, ಜೂನ್ 10: ಹಿರಿಯ ಸಾಹಿತಿ, ನಾಟಕಕಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾಗಿದ್ದ ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಸಾಹಿತಿಗಳು, ಚಿತ್ರನಟರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಗಿರೀಶ್ ಕಾರ್ನಾಡ್ ಅವರಿಗೆ 81 ವರ್ಷ ವಯಸ್ಸಾಗಿತ್ತು, ಲ್ಯಾವಲ್ಲೆ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಇಂಗ್ಲೆಂಡಿಗೆ ತೆರಳುವ ಮೊದಲೆ ಗಿರೀಶ ಕಾರ್ನಾಡರ ಮೊದಲ ಸಾಹಿತ್ಯ ಕೃತಿ ಯಯಾತಿ ನಾಟಕ ಧಾರವಾಡದ ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟವಾಯಿತು. ಇಂಗ್ಲೆಂಡಿನಿಂದ ಮರಳಿದ ಬಳಿಕ ತುಘಲಕ್ ಹಾಗೂ ಹಯವದನ ಪ್ರಕಟವಾದವು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ವಿಧಿವಶ

ಈ ನಡುವೆ ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್‍ನ ನಿರ್ದೇಶಕ ರಾಗಿದ್ದು, ಮತ್ತೆ ಅದನ್ನು ಬಿಟ್ಟು ಮುಂಬಯಿಗೆ ಬಂದ ಕಾರ್ನಾಡರು ಕೆಲವು ಚಲನಚಿತ್ರಗಳಲ್ಲಿ ನಟಿಸಿದರು. ಆ ರಂಗವನ್ನೂ ತ್ಯಜಿಸಿ ಮತ್ತೆ ಬೆಂಗಳೂರಿಗೆ ಬಂದರು. ನಾಟಕಗಳು-ಅಂಜುಮಲ್ಲಿಗೆ, ನಾಗಮಂಡಲ, ತಲೆದಂಡ ಹಾಗೂ ಅಗ್ನಿ ಮತ್ತು ಮಳೆ ನಾಟಕವನ್ನು ರಚಿಸಿದ್ದಾರೆ.

ಕನ್ನಡ ನಾಟಕವನ್ನು ಜಗತ್ತಿನಾದ್ಯಂತ ವಿಸ್ತರಿಸಿದವರು

ಕನ್ನಡ ನಾಟಕವನ್ನು ಜಗತ್ತಿನಾದ್ಯಂತ ವಿಸ್ತರಿಸಿದವರು

ಕಾರ್ನಾಡ್ ಅವರು ನನಗೆ ಈ ಸುದ್ದಿ ಕೇಳಿ ಶಾಕ್ ಆಗಿದೆ, ಕನ್ನಡ ನಾಟಕವನ್ನು ಜಗತ್ತಿನಾದ್ಯಂತ ವಿಸ್ತರಿಸಿದ ಅಪರೂಪ ನಾಟಕಕಾರರು ಅವರು, ಕನ್ನಡ ಪ್ರಜ್ಞೆ, ಅಭಿನಯ, ಒಟ್ಟಿನಲ್ಲಿ ಆಲ್ ರೌಂಡರ್ ಎಂದೇ ಹೇಳಬಹುದು. ನಮ್ಮನ್ನಗಲಿರುವುದರಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಭಾಷಾ ಸ್ಪಷ್ಟತೆ, ಇಂಗ್ಲಿಷ್ ಭಾಷೆಯಲ್ಲಿದ್ದ ಪ್ರಭುತ್ವ ನೋಬೆಲ್ ಅವಾರ್ಡ್ ಹತ್ತಿರ ಹೋಗುವಂತ ಲೇಖಕರಾಗಿದ್ದರು.- ಕುಂ ವೀರ ಭದ್ರಪ್ಪ ಹಿರಿಯ ಸಾಹಿತಿ

ಮೂಗಲ್ಲಿ ನಳಿಕೆ, ಆದರೂ ಹೋರಾಟದಲ್ಲಿ ಮುಂದೆ! ಕಾರ್ನಾಡರೆಂದರೆ ಹಾಗೆ!

ಗೌರಿಯ ಹಾಗೆ ಕಾರ್ನಾಡ್ ಕೂಡ ಹಿಟ್ ಲಿಸ್ಟ್‌ನಲ್ಲಿದ್ದರು

ಗೌರಿಯ ಹಾಗೆ ಕಾರ್ನಾಡ್ ಕೂಡ ಹಿಟ್ ಲಿಸ್ಟ್‌ನಲ್ಲಿದ್ದರು

ಗೌರಿ ಲಂಕೇಶ್ ರೀತಿಯಲ್ಲಿ ಕಾರ್ನಾಡ್ ಕೂಡ ಹಿಟ್ ಲಿಸ್ಟ್‌ನಲ್ಲಿದ್ದರು, ಅವರು ಆರೋಗ್ಯ ಸರಿ ಇಲ್ಲದ ಸಮಯದಲ್ಲಿ ಕೂಡ ತಮ್ಮ ವಾದವನ್ನು ಮರೆತವರಲ್ಲ, ಬೋಲ್ಡ್‌ ಅಂಡ್ ಸ್ಟ್ರಾಂಗ್ ಆಗಿದ್ದರು. ಗೌರಿ ಕಾರ್ಯಕ್ರಮಕ್ಕೆ ಬಂದಾಗ ಹಾಗೂ ಮತ್ತೊಂದು ಕಾರ್ಯಕ್ರಮದಲ್ಲಿ ಕೊನೆಯದಾಗಿ ಭೇಟಿ ಆಗಿದ್ದೆವು, ಆಕ್ಸಿಜನ್ ಸಿಲಿಂಡರ್ ಇಟ್ಟುಕೊಂಡೇ ಕಾರ್ಯಕ್ರಮಕ್ಕೆ ಬಂದಿದ್ದರು. ಒಳ್ಳೆಯ ಹೃದಯವಂತ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ. ಕವಿತಾ ಲಂಕೇಶ್- ಲೇಖಕಿ

ಹಲವು ಕ್ಷೇತ್ರದಲ್ಲಿ ಪ್ರಾವಿಣ್ಯ ಹೊಂದಿದ್ದ ಗಿರೀಶ್

ಹಲವು ಕ್ಷೇತ್ರದಲ್ಲಿ ಪ್ರಾವಿಣ್ಯ ಹೊಂದಿದ್ದ ಗಿರೀಶ್

ನಿಜವಾಗಲೂ ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೆ ಹೆಮ್ಮೆಯ ವ್ಯಕ್ತಿತ್ವ ಗಿರೀಶ್‌ ಅವರದ್ದು, ಹಲವು ಕ್ಷೇತ್ರದಲ್ಲಿ ಪ್ರಾವಿಣ್ಯತೆ ಇತ್ತು, ಸಾಹಿತ್ಯ, ತುಘಲಕ್ ರಂಗ, ಭೂಮಿ, ಸಾಹಿತ್ಯ, ರಾಜಕೀಯದ ಬಗ್ಗೆ ಎಷ್ಟು ಹಿಡಿತವಿದೆ ಎನ್ನುವುದು ತುಘಲಕ್ ನಾಟಕದ ಮೂಲಕ ತಿಳಿಯುತ್ತದೆ.ಸನಾತನ ಧರ್ಮ, ಸಂಸ್ಕೃತಿ, ವೈಚಾರಿಕೆ ಬ್ಯಾಲೆನ್ಸ್ ಮಾಡುತ್ತಿದ್ದರು. ಶ್ರೀಧರ್, ಹಿರಿಯ ನಟ

ಪುರಾಣ ಪ್ರಸಂಗಗಳಿಗೆ ಹೊಸ ವ್ಯಾಖ್ಯಾನ

ಪುರಾಣ ಪ್ರಸಂಗಗಳಿಗೆ ಹೊಸ ವ್ಯಾಖ್ಯಾನ

ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಕೂಡ ತಮ್ಮ ವಿಚಾರವನ್ನು ಮಂಡಿಸುವುದನ್ನು ಅವರು ಬಿಟ್ಟಿರಲಿಲ್ಲ. ಪ್ರಜಾಪ್ರಭುತ್ವದಲ್ಲಿ ವಾಗ್ವಾದಗಳು ಸಹಜ ಎಂದು ನಂಬಿದ್ದರು.

ಹಿಟ್ಟಿನ ಹುಂಜ, ಯಯಾತಿ ಮೂಲಕ ಪುರಾಣ ಪ್ರಸಂಗಗಳಿಗೆ ಹೊಸ ವ್ಯಾಖ್ಯಾನಕೊಟ್ಟು ಜೀವ ನೀಡುವ ಪ್ರಯತ್ನ ಮಾಡಿದ್ದರು. ಬರಗೂರು ರಾಮಂದ್ರಪ್ಪ-ಹಿರಿಯ ಸಾಹಿತಿ

English summary
Senior lyricists, writers like kum Veerabhadrappa, Baragur Ramachandrappa, Kavita Lankesh pay their condolence message to Jnanpith awardee Girish Karnad's death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X