Get Updates
Get notified of breaking news, exclusive insights, and must-see stories!

ಅಮಿತ್ ಶಾ ಸಮ್ಮುಖದಲ್ಲಿ ವಿಜಯೇಂದ್ರನಲ್ಲಿ ಭವಿಷ್ಯದ ನಾಯಕನನ್ನು ಕಂಡ ಕಾಂಗ್ರೆಸ್ ನಾಯಕ

ತುಮಕೂರು, ಏಪ್ರಿಲ್ 2: ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಯವರ 115ನೇ ಗುರುವಂದನಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಅವರ ಜನ್ಮದಿನವಾದ ಏಪ್ರಿಲ್ ಒಂದರಂದು ನಡೆಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇಡೀ ಕಾರ್ಯಕ್ರಮದ ಉಸ್ತುವಾರಿಯನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಹಿಸಿಕೊಂಡಿದ್ದರು. ಕಾರ್ಯಕ್ರಮಕ್ಕೆ ಎಲ್ಲೂ ಲೋಪದೋಷ ಬರದಂತೆ ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು.

ಲಕ್ಷಲಕ್ಷ ಸಂಖ್ಯೆಯಲ್ಲಿ ಭಕ್ತರು, ಜನರು, ಅಭಿಮಾನಿಗಳು ಸೇರಿದ್ದರೂ ಕಾರ್ಯಕ್ರಮ ಎಲ್ಲೂ ಹಳಿತಪ್ಪಲಿಲ್ಲ. ಹೀಗಾಗಿ, ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲರೂ ವಿಜಯೇಂದ್ರ ಅವರ ಕಾರ್ಯಶೈಲಿಗೆ ಶಹಬ್ಬಾಸ್ ಎಂದರು. ಇನ್ನು, ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ವಿಜಯೇಂದ್ರ ಅವರನ್ನು ಭವಿಷ್ಯದ ನಾಯಕ ಎಂದು ಕರೆದರು.

ಸರಕಾರದ ಬಿಸಿಯೂಟ ಯೋಜನೆಗೆ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರ ಸಲಹೆಯಂತೆ ಶ್ರೀ.ಶಿವಕುಮಾರ ಸ್ವಾಮೀಜಿ ದಾಸೋಹ ಕಾರ್ಯಕ್ರಮ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮರುನಾಮಕರಣ ಮಾಡುವುದಾಗಿ ಹೇಳಿದರು.

 ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

ಗುರುವಂದನಾ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ವ್ಯಾಪ್ತಿಯ ಎಲ್ಲಾ ಶಾಸಕರು ಪಕ್ಷಾತೀತವಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ತಮ್ಮ ಸರದಿಯ ಭಾಷಣ ಬಂದಾಗ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ವಿಜಯೇಂದ್ರ ಸಂಘಟನಾ ಶಕ್ತಿಯನ್ನು ಹಾಡಿ ಹೊಗಳಿದರು. ತಮ್ಮ ಭಾಷಣದಲ್ಲಿ ಎಲ್ಲರ ಹೆಸರನ್ನು ಪ್ರಸ್ತಾವಿಸಿ ಪರಮೇಶ್ವರ್ ಭಾಷಣ ಆರಂಭಿಸಿದರು.

 ಭವಿಷ್ಯದ ನಾಯಕರಾಗಿರುವಂತಹ ಮಾನ್ಯ ವಿಜಯೇಂದ್ರ ಅವರೇ

ಭವಿಷ್ಯದ ನಾಯಕರಾಗಿರುವಂತಹ ಮಾನ್ಯ ವಿಜಯೇಂದ್ರ ಅವರೇ

"ಈ ಕಾರ್ಯಕ್ರಮವನ್ನು ಏರ್ಪಾಟು ಮಾಡುವಲ್ಲಿ ತನ್ನೆಲ್ಲಾ ಶಕ್ತಿ ಮೀರಿ, ಆಯೋಜನೆ ಮಾಡಿರುವಂತಹ ಭವಿಷ್ಯದ ನಾಯಕರಾಗಿರುವಂತಹ ಮಾನ್ಯ ವಿಜಯೇಂದ್ರ ಅವರೇ" ಎಂದು ಪರಮೇಶ್ವರ್ ಹೇಳುವ ಮೂಲಕ, ಮೆಚ್ಚುಗೆಯನ್ನು ಸೂಚಿಸಿದರು. ಪರಮೇಶ್ವರ್ ಅವರ ಈ ಮಾತಿಗೆ ನೆರೆದಿದ್ದ ಸಭಿಕರಿಂದ ಭಾರೀ ಕರತಾಡನ ವ್ಯಕ್ತವಾಯಿತು. ಆಗ, ವೇದಿಕೆಯಯಲ್ಲಿದ್ದ ಯಡಿಯೂರಪ್ಪ ಮತ್ತು ವಿಜಯೇಂದ್ರ ಮುಗುಳ್ನಕ್ಕರು. ಎಲ್ಲರೂ ತಮ್ಮತಮ್ಮ ಭಾಷಣದಲ್ಲಿ ವಿಜಯೇಂದ್ರ ಕಾರ್ಯಕ್ರಮ ಆಯೋಜಿಸಿದ್ದ ರೀತಿಗೆ ಮೆಚ್ಚುಗೆಯನ್ನು ಸೂಚಿಸಿದರು.

 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ಪ್ರಶಂಸನೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ಪ್ರಶಂಸನೆ

"ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣವಾದಂತಹ ಸಂಘಟನಾ ಶಕ್ತಿಯನ್ನು ನೀಡಿ ಶ್ರಮ ಹಾಗೂ ಅತ್ಯಂತ ಭಕ್ತಿಭಾವದಿಂದ ಸಂಘಟಿಸಿದಂತಹ ನನ್ನ ಆತ್ಮೀಯರಾದ ವಿಜಯೇಂದ್ರ ಅವರೇ"ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ಪ್ರಶಂಸನೆಯನ್ನು ನೀಡಿದರು. ಗುರುವಂದನಾ ಮಹೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ವಿಜಯೇಂದ್ರ ಉತ್ತಮ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡಾ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

 ರಾಜಕೀಯವಾಗಿ ಇನ್ನಷ್ಟು ಬಲಬರಬಹುದು ಎನ್ನುವ ದೂರಾಲೋಚನೆ

ರಾಜಕೀಯವಾಗಿ ಇನ್ನಷ್ಟು ಬಲಬರಬಹುದು ಎನ್ನುವ ದೂರಾಲೋಚನೆ

ಚುನಾವಣಾ ವರ್ಷ ಮತ್ತು ಕ್ಯಾಬಿನೆಟ್ ವಿಸ್ತರಣೆ ಮುಂತಾದ ವಿಚಾರಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ತಮಗಿರುವ ಸಂಘಟನಾ ಶಕ್ತಿಯನ್ನು ವಿಜಯೇಂದ್ರ ಅವರಿಗೆ ಸಿದ್ದಗಂಗಾ ಶ್ರೀಗಳ ಗುರುವಂದನಾ ಕಾರ್ಯಕ್ರಮ ಉತ್ತಮ ವೇದಿಕೆಯಾಗಿತ್ತು. ರಾಜ್ಯ ಮತ್ತು ಕೇಂದ್ರದ ಬಿಜೆಪಿಯ ಎಲ್ಲಾ ಆಗುಹೋಗುಗಳ ಮೇಲೆ ನಿಯಂತ್ರಣವನ್ನು ಹೊಂದಿರುವ ಅಮಿತ್ ಶಾ ಸಮ್ಮುಖದಲ್ಲಿ ಬೃಹತ್ ಸಮಾರಂಭವೊಂದು ಅಚ್ಚುಕಟ್ಟಾಗಿ ನಡೆದರೆ, ರಾಜಕೀಯವಾಗಿ ಇನ್ನಷ್ಟು ಬಲಬರಬಹುದು ಎನ್ನುವ ದೂರಾಲೋಚನೆಯನ್ನು ವಿಜಯೇಂದ್ರ ಹೊಂದಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

Recommended Video

      ಯುಗಾದಿ ಹಬ್ಬಕ್ಕೆ ವಿಶ್ ಮಾಡಿದ ಅಪ್ಪು ನೋಡಿ ಕಣ್ಣೀರಿಟ್ಟ ಅಭಿಮಾನಿಗಳು,ವಿಡಿಯೋ ವೈರಲ್ | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+