ಬಿಜೆಪಿಗೆ ಚಲಾವಣೆಯಾಗಿರುವ ಮತಗಳ ಸಂಖ್ಯೆ ಕಳುಹಿಸಿ ಪುರಸ್ಕಾರ ಪಡೆಯಿರಿ

ಬೆಂಗಳೂರು, ಮೇ 12: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ಮುಗಿದು ಫಲಿತಾಂಶಕ್ಕೆ ಕೌಂಟ್‌ಡೌನ್‌ ಶುರುವಾಗಿರುವ ಬೆನ್ನಲ್ಲೇ ಬಿಜೆಪಿಯು 224 ಕ್ಷೇತ್ರದ ಮತದಾರರಿಗೆ ಹೊಸ ಟಾಸ್ಕ್‌ ನೀಡಿದೆ.

ಮತದಾನ ಮುಗಿದ ಬೆನ್ನಲ್ಲೇ ಎಕ್ಸಿಟ್‌ ಪೋಲ್‌ಗಳು ಕಾಂಗ್ರೆಸ್‌ಗೆ ಬಹುಮತ ಬರಲಿದೆ ಎಂದು ಹೇಳುತ್ತಿವೆ. ಆದರೆ ಬಿಜೆಪಿ ನಾಯಕರು ನಮಗೆ ಬಹುಮತ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Send the number of votes cast to BJP and get rewarded: party urged to karnataka

ಈ ಬೆನ್ನಲ್ಲೇ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ, ತಮ್ಮ ಮತಗಟ್ಟೆಯಲ್ಲಿ ಬಿಜೆಪಿಗೆ ಚಲಾವಣೆಯಾಗಿರುವ ಒಟ್ಟು ಮತಗಳನ್ನು ಕಳುಹಿಸಿ ಪುರಸ್ಕಾರ ಪಡೆಯಿರಿ ಎಂದು ಬಿಜೆಪಿ ರಾಜ್ಯದ ಮತದಾರರಲ್ಲಿ ಕೇಳಿದೆ. 12 ಮೇ 2023 ರ ರಾತ್ರಿ 10 ಗಂಟೆಯ ಒಳಗೆ 810 505 1086 ನಂಬರ್‌ಗೆ WhatsApp ಮುಖಾಂತರ ಅಥವಾ [email protected] ಗೆ ಇ-ಮೇಲ್‌ ಮುಖಾಂತರ ಅಥವಾ Facebook, Twitter, Instagram ಗಳಲ್ಲಿ DM ಮುಖಾಂತರವೂ ಕಳುಹಿಸಬಹುದು ಎಂದು ತಿಳಿಸಿದೆ.

ಬಿಜೆಪಿಗೆ ಚಲಾವಣೆಯಾಗಿರುವ ಮತಗಳ ಮಾಹಿತಿಯನ್ನು ಜನರು ತಮ್ಮ ಉತ್ತರವನ್ನು ತಮ್ಮ ಹೆಸರು, ವಿಧಾನಸಭಾ ಕ್ಷೇತ್ರದ ಹೆಸರು, ಮತಗಟ್ಟೆಯ ವಿವರ ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ವಿವರ ಹಾಗೂ ಸಂಪರ್ಕ ವಿವರಗಳೊಂದಿಗೆ ಕಳುಹಿಸಲು ಕೋರಲಾಗಿದೆ. ಇದಕ್ಕೆ ಈಗಾಗಲೇ ಪ್ರತಿಕ್ರಿಯೆ ಶುರುವಾಗಿದ್ದು, ಅಜಯ್‌ ಎಂಬುವವರು ಮಂಗಳೂರು ದಕ್ಷಿಣ ಕ್ಷೇತ್ರದಿಂದ, ಮತಗಟ್ಟೆ#137 (ಅತ್ತಾವರ ಸರಕಾರಿ ಶಾಲೆ ಪೂರ್ವ): ಮೊಬೈಲ್# 8050109598
ನನ್ನ ಮತಗಟ್ಟೆಯಲ್ಲಿ ಒಟ್ಟು ಮತದಾನ 738/1019 = 72.42% ಬಿಜೆಪಿಗೆ ನಿರೀಕ್ಷಿತ ಮತಗಳು 548/738= 74.25% ಮಂಗಳೂರು ದಕ್ಷಿಣ ಬಿಜೆಪಿಗೆ 84000/162004=51.85% ಗೆಲುವು 4-8 ಸಾವಿರ ಎಂದು ತಿಳಿಸಿದ್ದಾರೆ.

ಇಟಿಗಿ ಹರೀಶ್‌ ಕುಮಾರ್‌ ಎಂಬುವವರು 88 - ಹಡಗಲಿ ವಿಧಾನ ಸಭಾ ಕ್ಷೇತ್ರ, ವಾರ್ಡ್ ಸಂಖ್ಯೆ - 4, ಒಟ್ಟು ಮತಗಳು - 1053, ಚಲಾವಣೆಯಾದ ಮತಗಳು - 680, ಬಿಜೆಪಿಗೆ ಚಲಾವಣೆಯಾದ ಮತಗಳು - 450 ಎಂದು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಮತದಾರರ ನಾಡಿಮಿಡಿತವನ್ನು ಡಿಜಿಟಲ್‌ ಆಗಿ ತಿಳಿಯಲು ಮುಂದಾಗಿರುವ ಬಿಜೆಪಿಯು ಫಲಿತಾಂಶಕ್ಕೂ ಮುನ್ನವೇ ಎಕ್ಸಿಟ್‌ ಪೋಲ್‌ ತಿಳಿಯಲು ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+