ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮ ಪಂಚಾಯಿತಿ 2ನೇ ಹಂತದ ಚುನಾವಣೆ: ಎಲ್ಲೆಲ್ಲಿ ಎಷ್ಟು ಮತದಾನ?

|
Google Oneindia Kannada News

ಬೆಂಗಳೂರು, ಡಿ. 28: ಎರಡನೇ ಹಂತದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಯೂ ಗ್ರಾಮೀಣ ಭಾಗದ ಮತದಾರರು ಭರ್ಜರಿ ವೋಟಿಂಗ್ ಮಾಡಿದ್ದಾರೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚು ಮತದಾನವಾಗುತ್ತದೆ ಎಂಬುದು, ಪಂಚಾಯಿತಿ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ನಿನ್ನೆ (ಡಿಸೆಂಬರ್ 27) ನಡೆದ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸರಾಸರಿ ಶೇಕಡಾ 84.3ರಷ್ಟು ಮತದಾನವಾಗಿದೆ. ಹೆಚ್ಚು ಮತದಾನ ಮಾಡುವ ಮೂಲಕ ರಾಜ್ಯ ಚುನಾವಣಾ ಆಯೋಗದ ಪ್ರಯತ್ನಕ್ಕೆ ಗ್ರಾಮೀಣ ಮತದಾರರು ಸ್ಪಂಧಿಸಿದ್ದಾರೆ.

ಮೊದಲನೇ ಹಂತದಂತೆ ಎರಡನೇ ಹಂತದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಯೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತಿಹೆಚ್ಚು ಮತದಾನ (ಶೇಕಡಾ 91.86) ವಾಗಿದ್ದು, ಅತಿ ಕಡಿಮೆ ಮತದಾನ ಕೊಡಗು ಜಿಲ್ಲೆಯಲ್ಲಿ (ಶೇಕಡಾ 69.51) ಆಗಿದೆ. ಎರಡನೇ ಹಂತದಲ್ಲಿ ಒಟ್ಟು 30 ಜಿಲ್ಲೆಗಳ 109 ತಾಲೂಕುಗಳ 2,709 ಗ್ರಾಮ ಪಂಚಾಯಿತಿಗಳಿಗೆ ಮತದಾನ ನಡೆದಿತ್ತು. ಮತದಾನದ ವಿವರ ಹೀಗಿದೆ.

ಬೆಂಗಳೂರು ಗ್ರಾ. ಜಿಲ್ಲೆಯಲ್ಲಿ ಹೆಚ್ಚು ಮತದಾನ

ಬೆಂಗಳೂರು ಗ್ರಾ. ಜಿಲ್ಲೆಯಲ್ಲಿ ಹೆಚ್ಚು ಮತದಾನ

ಮೊದಲನೇ ಹಂತದಂತೆ ಎರಡನೆಯ ಹಂತದಲ್ಲಿಯೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಒಟ್ಟು 2 ತಾಲೂಕುಗಳಲ್ಲಿ 54 ಗ್ರಾಮ ಪಂಚಾಯಿತಿಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆದಿತ್ತು. ಶೇಕಡಾ 91.86 ರಷ್ಟು ಮತದಾರರು ಮತದಾನ ಮಾಡುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಮತದಾನ ಸ್ವಲ್ಪ ಹೆಚ್ಚಾಗಿದೆ. ಎರಡನೇ ಹಂತದಲ್ಲಿ ಶೇಕಡಾ 73.09 ರಷ್ಟು ಮತದಾರರು 2 ತಾಲೂಕುಗಳ 54 ಗ್ರಾಮ ಪಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕಡಿಮೆ ಮತದಾನ

ಕೊಡಗು ಜಿಲ್ಲೆಯಲ್ಲಿ ಕಡಿಮೆ ಮತದಾನ

ಮೊದಲನೆಯ ಹಂತದಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಅತಿಕಡಿಮೆ ಮತದಾನವಾಗಿತ್ತು. ಆದರೆ ಎರಡನೇ ಹಂತದಲ್ಲಿ ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ ಮತದಾನವಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ 35 ಗ್ರಾಮ ಪಂಚಾಯಿತಿಗಳಿಗೆ ಎರಡನೇ ಹಂತದ ಮತದಾಣದಲ್ಲಿ ಶೇಕಡಾ 69.51ರಷ್ಟು ಮತದಾನವಾಗಿದೆ. ಉಳಿದಂತೆ 18ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಶೇಕಡಾ 80ಕ್ಕೂ ಹೆಚ್ಚು ಮತದಾನವಾಗಿದೆ.

ಶೇಕಡಾ 80ಕ್ಕಿಂತ ಹೆಚ್ಚು ಮತದಾನವಾದ ಜಿಲ್ಲೆಗಳು

ಶೇಕಡಾ 80ಕ್ಕಿಂತ ಹೆಚ್ಚು ಮತದಾನವಾದ ಜಿಲ್ಲೆಗಳು

ಮಂಡ್ಯ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು ಮೈಸೂರು, ಹಾಸನ, ಚಾಮರಾಜನಗರ, ಬೆಳಗಾವಿ, ಗದಗ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇಕಡಾ 80ಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಶೇ. 70ಕ್ಕಿಂ ಹೆಚ್ಚು ಮತದಾನವಾದ ಜಿಲ್ಲೆಗಳು

ಶೇ. 70ಕ್ಕಿಂ ಹೆಚ್ಚು ಮತದಾನವಾದ ಜಿಲ್ಲೆಗಳು

ಉಳಿದಂತೆ ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಧಾರವಾಡ, ಕಲಬುರಗಿ, ಬೀದರ್, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಶೇಕಡಾ 70ಕ್ಕಿಂತ ಹೆಚ್ಚು ಮತದಾನವಾಗಿದೆ. ವಿಜಯಪುರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಾತ್ರ ಶೇಕಡಾ 70ಕ್ಕಿಂತ ಕಡಿಮೆ ಮತದಾನವಾಗಿದೆ. ಸ್ಥಳೀಯರ ಕೈಯಲ್ಲಿ ಅಧಿಕಾರ ಕೊಡುವ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ನಾಡಿದ್ದು ಡಿಸೆಂಬರ್ 30 ರಂದು ಬರಲಿದೆ.

Recommended Video

ಇಟಲಿಗೆ ಹೋಗ್ತಿರೋದಾದ್ರು ಯಾಕೆ ?? | Rahul Gandhi | Oneindia Kannada

English summary
In the Second phase of Gram Panchayat elections, the average turnout was 82.88 per cent. The highest turnout (92.35 per cent) was recorded in the Bengaluru Rural district, while the lowest turnout was in Kodagu district (69.51 per cent). A total of 3,014 Gram Panchayats of 114 taluks of 30 districts were voted. Here is the district voter turnout.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X