School Dasara Holiday 2025: ಕರ್ನಾಟಕದಲ್ಲಿ ಶಾಲೆಗಳಿಗೆ 18 ದಿನ ದಸರಾ ರಜೆ: ಇಲ್ಲಿದೆ ಸಂಪೂರ್ಣ ಪಟ್ಟಿ

Karnataka Dasara Holiday: ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾರಣಾಂತರಂಗಳಿಂದ ಸಾಲು ರಜೆಗಳನ್ನೇ ಘೋಷಣೆ ಮಾಡಲಾಗಿದೆ. ಪ್ರತಿಭಟನೆ, ಹವಾಮಾನ ವೈಪರಿತ್ಯದಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆ ನೀಡಲಾಗಿದೆ. ಇನ್ನು ಇದೀಗ ಗಣೇಶ ಹಬ್ಬ ಇದ್ದು, ಬಳಿಕ ದಸರಾ ಬರಲಿದೆ. ಹಾಗಾದ್ರೆ, ಶಾಲೆಗಳಿಗೆ ದಸರಾ ರಜೆ ಎಷ್ಟು ದಿನ ಇರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಹಿನ್ನೆಲೆ ಶಾಲೆಗಳಿಗೆ ಸಾಲು ರಜೆಗಳನ್ನೇ ನೀಡಲಾಗಿದೆ. ಇದೀಗ ಗಣೇಶ ಹಬ್ಬದ ರಜೆಯೂ ಇದ್ದು, ಇದರಿಂದ ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವನ್ನೇ ಬಡಿಸಿದಂತಾಗಿದೆ. ಈ ನಡುವೆಯೇ ಇದೀಗ ವಿದ್ಯಾರ್ಥಿಗಳಿಗೆ ಮತ್ತೊಂದು ಖಷಿಯ ವಿಚಾರ ಇದೆ. ಮಧ್ಯಂತರ ಪರೀಕ್ಷೆಗಳು ಮುಗಿದ ನಂತರ ದಸರಾ ರಜೆ ನೀಡಲಾಗುತ್ತದೆ.

Schools to Get 18-Days Dasara Holidays in Karnataka

ಹೌದು.. ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆ ರಾಜ್ಯದ ಶಾಲಾ ಮಕ್ಕಳಿಗೆ ರಜೆಗಳು ಸಿಗಲಿವೆ. ರಾಜ್ಯ ಶಿಕ್ಷಣ ಇಲಾಖೆ ಹೊರಡಿಸಿರುವ ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ, 2025ರ ದಸರಾ ರಜೆಯು ಸೆಪ್ಟೆಂಬರ್ 20ರಿಂದ ಅಕ್ಟೋಬರ್ 7ರ ವರೆಗೆ ಒಟ್ಟು 18 ದಿನಗಳು ಇರಲಿವೆ. ಆದ್ದರಿಂದ ವಿದ್ಯಾರ್ಥಿಗಳು ಮಧ್ಯಂತರ ಪರೀಕ್ಷೆಗಳು ಯಾವಾಗ ಮುಗಿಯಲಿಯೋ ಎನ್ನುವ ಕಾತರದಲ್ಲಿದ್ದಾರೆ.

ಸಾಮಾನ್ಯವಾಗಿ ದಸರಾ ಹಬ್ಬದ ವೇಳೆ ಶಾಲೆಗಳಿಗೆ 15ರಿಂದ ಒಂದು ತಿಂಗಳಿಗಳ ಕಾಲ ರಜೆ ನೀಡಲಾಗುತ್ತದೆ. ಅದರಂತೆಯೇ ಈ ಬಾರಿಯೂ 18 ದಿನಗಳ ಕಾಲ ದಸರಾ ರಜೆಯನ್ನು ಘೋಷಣೆ ಮಾಡಲಾಗಿದೆ. ಈ ರಜೆಯನ್ನು ಮಧ್ಯಂತರ ಪರೀಕ್ಷೆಗಳು ಮುಗಿದ ಬಳಿಕ ವಿದ್ಯಾರ್ಥಿಗಳಿಗೆ ಅಧಿಕೃತವಾಗಿ ಪ್ರಕಟ ಮಾಡಲಾಗುತ್ತದೆ. ಇನ್ನೂ ಈ ರಜೆಯಲ್ಲಿ ಪೋಷಕರು ತಮ್ಮ ಮಕ್ಕಳ ಸಹಿತ ಕುಟುಂಬದ ಜೊತೆ ಪ್ರವಾಸ ಮಾಡಲು ಉತ್ತಮ ಸಮಯವಾಗಿದೆ. ಈಗಾಗಲೇ ಬಹುತೇಕ ಮಂದಿ ಮಕ್ಕಳ ಮಧ್ಯಂತರ ಪರೀಕ್ಷೆಗಳು ಮುಗಿಯುವಿಕೆಗಾಗಿಯೇ ಕಾದುಕುಳಿತಿದ್ದಾರೆ.

ರಜೆಯ ನಡುವೆಯೂ ಶಿಕ್ಷಣ ಇಲಾಖೆ ಒಂದು ಪ್ರಮುಖ ಸೂಚನೆಯನ್ನ ಸಹ ನೀಡಿದೆ. ಅಕ್ಟೋಬರ್ 2ರಂದು ರಜೆ ಇದ್ದರೂ ಕೂಡ ಎಲ್ಲಾ ಶಾಲಾ ಮಕ್ಕಳು ಮತ್ತು ಶಿಕ್ಷಕರು ಶಾಲೆಗೆ ಕಡ್ಡಾಯವಾಗಿ ಹಾಜರಾಗಬೇಕು. ಯಾಕಂದ್ರೆ ಈ ದಿನ ದೇಶಾದ್ಯಂತ ಎಲ್ಲಾ ಶಾಲೆಗಳಲ್ಲೂ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಆಚರಣೆ ಮಾಡಲಾಗುತ್ತದೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಮಾಡಲಾಗುತ್ತದೆ.

ಇನ್ನು 2025ನೇ ಸಾಲಿನ ಮಹೋತ್ಸವದ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು 11 ದಿನಗಳ ಕಾಲ ದಸರಾ ನಡೆಯಲಿದೆ. ಸೆಪ್ಟೆಂಬರ್ 22ರಂದು ಆರಂಭಗೊಳ್ಳಲಿದ್ದು, ಅಕ್ಟೋಬರ್ 2ರ ವಿಜಯ ದಶಮಿಯೊಂದಿಗೆ ಮುಕ್ತಾಯ ಆಗಲಿದೆ. ದಸರಾ ಮಹೋತ್ಸವವನ್ನು ಈ ಬಾರಿ ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಬಾನು ಮುಷ್ತಾಕ್ ಅವರು ಉದ್ಘಾಟಿಸಲಿದ್ದಾರೆ. ಈ ವೇಳೆ ಏರ್ ಶೋ ಸಹ ನಡೆಸಲಾಗುತ್ತಿದ್ದು, ಇದು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಲಿದೆ ಎಂದು ಹೇಳಿದರು.

ಒಟ್ಟಿನಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಒಟ್ಟು 123 ರಜೆ ದಿನಗಳು ಇವೆ. ಉಳಿದಂತೆ 242 ದಿನ ಶಾಲೆಗಳು ತೆರೆಯಲಿವೆ. ಪರೀಕ್ಷೆ ಮತ್ತು ಮೌಲ್ಯಾಂಕನ ಕಾರ್ಯಕ್ಕಾಗಿ 26 ದಿನ, ಪಠ್ಯೇತರ ಚಟುವಟಿಕೆ, ಪಠ್ಯ ಚಟುವಟಿಕೆ, ಸ್ಪರ್ಧೆಗಳ ನಿರ್ವಹಣಾ ಕಾರ್ಯಕ್ಕಾಗಿ 22 ದಿನ, ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10 ದಿನ, ಶಾಲಾ ಸ್ಥಳೀಯ ರಜೆಗಳಿಗೆ 4 ದಿನ ಮತ್ತು ಬೋಧನಾ ಕಲಿಕಾ ಪ್ರಕ್ರಿಯೆಗೆ ಉಳಿಯುವ ಕರ್ತವ್ಯಕ್ಕೆ 178 ದಿನಗಳನ್ನು ಮೀಸಲಿಡಲಾಗಿದೆ. ಇನ್ನು ಇದೀಗ ದಸರಾ ರಜೆಗಳು ಬರಲಿದ್ದು, ಇದರಿಂದ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಮಧ್ಯಂತರ ಪರೀಕ್ಷೆಗಳು ಮುಗಿಯುವಿಕೆಗಾಗಿ ಕಾದಿದ್ದಾರೆ. ಯಾಕಂದ್ರೆ ಈ ಪರೀಕ್ಷೆಗಳು ಮುಗಿದ ಮೇಲೆಯೇ ದಸರಾ ರಜೆ ಆರಂಭವಾಗುತ್ತದೆ. ಆಗ ಮಕ್ಕಳೊಂದಿಗೆ ಪ್ರವಾಸ ಮಾಡುವ ಯೋಜನೆ ಬಹುತೇಕ ಪೋಷಕರದ್ದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+