Rain Alert: ಮಳೆ ಆರ್ಭಟಕ್ಕೆ ಬೆಚ್ಚಿಬಿದ್ದು ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ!
ಮಳೆ ಅಬ್ಬರ ಜೋರಾಗಿದ್ದು, ಕರ್ನಾಟಕದ ಭಾಗಶಃ ಎಲ್ಲಾ ಜಿಲ್ಲೆ & ತಾಲೂಕುಗಳಲ್ಲೂ ಇದೀಗ ಮುಂಗಾರು ಮಳೆ ಆರ್ಭಟಿಸುತ್ತಿದೆ. ಹೀಗಾಗಿ ಜನರು ಕೂಡ ಭರ್ಜರಿ ಮಳೆಯಲ್ಲಿ ಪರದಾಡುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಹಾಗೇ ಕೆರೆ & ಕಟ್ಟೆಗಳಿಗೆ ಭಾರಿ ಪ್ರಮಾಣದ ನೀರು ಹರಿದು ಬರ್ತಿದೆ. ಬೆಂಗಳೂರಲ್ಲೂ ಭಾರಿ ಮಳೆ ಬೀಳುತ್ತಿದ್ದು, ಇದೇ ಕಾರಣಕ್ಕೆ ಇದೀಗ ಶಾಲೆ & ಕಾಲೆಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಬೆಳಗಾವಿ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆ ಭಾರಿ ಮಳೆ ಬೀಳಲಿದೆ ಎಂಬ ಮುನ್ಸೂಚನೆ ನೀಡಲಾಗಿದೆ. ಇದರ ಜತೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾಸನ, ದಾವಣಗೆರೆ, ಮೈಸೂರು & ಮಂಡ್ಯ ಸೇರಿ ಚಿತ್ರದುರ್ಗ, ತುಮಕೂರು, ಕಲಬುರಗಿ, ಬೀದರ್, ಕೋಲಾರದಲ್ಲೂ ಮಳೆ ಅಬ್ಬರ ಗ್ಯಾರಂಟಿ ಆಗಿದೆ. ಅದರಲ್ಲೂ ಬೆಂಗಳೂರಲ್ಲಿ ಇನ್ನೂ 5 ದಿನಗಳ ಕಾಲ ಸೂರ್ಯ ಕಾಣುವುದೇ ಅನುಮಾನ ಎನ್ನಲಾಗುತ್ತಿದೆ. ಇಂತಹ ಸಮಯದಲ್ಲೇ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ ಶಿಕ್ಷಣ ಇಲಾಖೆಯವರು. ಹಾಗಾದ್ರೆ ಯಾವ ಯಾವ ಜಿಲ್ಲೆಗಳ ಶಾಲಾ & ಕಾಲೇಜು ಬಂದ್ ಆಗಲಿವೆ? ಮಾಹಿತಿಗಾಗಿ ಮುಂದೆ ಓದಿ.

ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ
ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದೆ ಹೀಗಾಗಿ ಎಲ್ಲೆಲ್ಲೂ ಭಾರಿ ಮಳೆ ಬೀಳುತ್ತಿದೆ. ಕರಾವಳಿ & ಮಲೆನಾಡು ಕರ್ನಾಟಕದಲ್ಲಿ ಮಾತ್ರ ಅಲ್ಲ, ಉತ್ತರ ಕರ್ನಾಟಕ & ದಕ್ಷಿಣ ಕರ್ನಾಟಕದ ಭಾಗದಲ್ಲಿ ಕೂಡ ಮಳೆರಾಯ ಅಬ್ಬರಿಸಿದ್ದು ಎಲ್ಲೆಲ್ಲೂ ಬರೀ ನೀರೆ ಕಾಣ್ತಿದೆ. ಪರಿಸ್ಥಿತಿ ಹೀಗಿದ್ದಾಗಲೆ ಮುಂದಿನ 24 ಗಂಟೆ ಕಾಲ ಮತ್ತಷ್ಟು ಭೀಕರ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ. ಇದಕ್ಕಾಗಿ ಈಗ ಮಳೆ ಅಬ್ಬರ ಜೋರಾಗಿರುವ ಕಾರಣಕ್ಕೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡವು ಸೇರಿ ಹಾಸನದ ಹಲವು ತಾಲೂಕುಗಳಲ್ಲಿ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಹಾಸನದ ಆಲೂರು, ಬೇಲೂರು, ಸಕಲೇಶಪುರ, ಅರಕಲಗೂಡು ಸೇರಿದಂತೆ ಹಾಸನ ನಗರದಲ್ಲಿ ಇರುವ ಶಾಲಾ & ಕಾಲೇಜುಗಳಿಗೆ ರಜೆ ನೀಡಲಾಗಿದೆ. ಇದರ ಜೊತೆಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲೂ ಅಧಿಕೃತ ರಜೆ ಘೋಷಣೆ ಆಗಿದೆ. ಇನ್ನುಳಿದಂತೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಜುಲೈ 16 ರಂದು ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದಾರೆ ಶಿಕ್ಷಣಾಧಿಕಾರಿಗಳು. ಈ ನಡುವೆ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್, ಐಟಿಐ ಕಾಲೇಜುಗಳು ಮಾತ್ರ ರಜೆ ಇಲ್ಲದೆ ಮಾಮೂಲಿ ರೀತಿಯೇ ನಡೆಯಲಿವೆ.












Click it and Unblock the Notifications