School Holiday: ಜುಲೈ 24 ಗುರುವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ, ಈ ಜಿಲ್ಲೆಗಳಿಗೆ...

ಕರ್ನಾಟಕದ ಶಾಲೆಗಳಿಗೆ ಪದೇ ಪದೇ ರಜೆಗಳು ಸಿಗುತ್ತಿದ್ದು, ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ವಿಚಾರ ಇದೀಗ ಭಾರಿ ಸದ್ದು ಮಾಡುತ್ತಿದೆ. ಒಂದು ಕಡೆ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗುತ್ತಾ ಅಂತಾ ಅಪ್ಪ & ಅಮ್ಮ ಅಂದ್ರೆ ಮಕ್ಕಳು ಪೋಷಕರು ರಾತ್ರಿ ಪೂರ್ತಿ ಕಾಯುವ ಸನ್ನಿವೇಶ ಇದ್ದರೆ, ಹೀಗೆಯೇ ಮಕ್ಕಳು ಅಂದ್ರೆ ವಿದ್ಯಾರ್ಥಿಗಳು ಕೂಡ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡುತ್ತಾರಾ? ಅಂತಾ ಕಾಯುತ್ತಾರೆ. ಹೀಗಿದ್ದಾಗಲೇ, ಜುಲೈ 24 ಗುರುವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ, ಈ ಜಿಲ್ಲೆಗಳಿಗೆ...

ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಿಗೂ ಈ ಬಾರಿ ಉತ್ತಮ ಮಳೆಯಾಗಿದ್ದು, ಜನರು ಕೂಡ ಉತ್ತಮ ಮಳೆ ಕಾರಣಕ್ಕೆ ಖುಷಿಯಾಗಿದ್ದಾರೆ. ಆದರೆ ಇದೇ ಮಳೆ ಈಗಲೂ ಬ್ರೇಕ್ ಇಲ್ಲದೆ ಮತ್ತೆ ಸುರಿಯಲು ಆರಂಭಿಸಿದೆ. ಮಳೆ.. ಮಳೆ.. ಮಳೆ.. ಹೀಗೆ ಕರ್ನಾಟಕದ ಮೂಲೆ ಮೂಲೆಗೂ ಮಳೆಯ ಮೋಡ ದಾಳಿ ಇಟ್ಟಿವೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಸೇರಿದಂತೆ ಮಂಡ್ಯ, ಮೈಸೂರು ಭಾಗದಲ್ಲಿ ಭಾರಿ ಮಳೆ ಸುರಿಯುವ ಎಚ್ಚರಿಕೆಯನ್ನ ನೀಡಲಾಗಿದೆ.

School Holiday May Announce In Karnataka On July 24 Of 2025 For This Reason

ಯಾವ ಯಾವ ಜಿಲ್ಲೆಗಳಲ್ಲಿ ರಜೆ?

ಚಾಮರಾಜನಗರ, ಮಲೆನಾಡು ಜಿಲ್ಲೆ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಮಳೆ ಸುರಿಯಲಿದೆ. ಇದರ ಜೊತೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಕೂಡ ಭಾರಿ ಮಳೆ ಗ್ಯಾರಂಟಿ ಆಗಿದೆ. ಇಷ್ಟೆಲ್ಲಾ ಮಳೆ ರಗಳೆ ನಡುವೆ, ದೊಡ್ಡ ದೊಡ್ಡ ಅವಾಂತರ ಸಂಭವಿಸುತ್ತಿವೆ. ಹೀಗೆ ಭಾರಿ ಮಳೆ ಹಿನ್ನೆಲೆಯಲ್ಲಿ ಈಗ ಹಲವು ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ. ಇನ್ನು ಇದೀಗ ಕರವಾಳಿ ಹಾಗೂ ಮಲೆನಾಡು ಭಾಗದಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಕಾರಣ & ಇದರ ಜೊತೆಗೆ ಗುರುವಾರ ಕೂಡ ಭಾರಿ ಮಳೆ ಸುರಿಯುವ ಮುನ್ಸೂಚನೆ ಇರುವ ಕಾರಣ ಇದೀಗ ಉಡುಪಿ ಜಿಲ್ಲೆಯ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಮತ್ತಷ್ಟು ಜಿಲ್ಲೆಗಳಿಗೂ ರಜೆ ಘೋಷಣೆ?

ಉಡುಪಿ ಜಿಲ್ಲೆ ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ಇದೀಗ ಭಾರಿ ಮಳೆ ತನ್ನ ಅಬ್ಬರವನ್ನು ತೋರಿಸುತ್ತಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಭಾರಿ ಮಳೆ ಸುರಿಯುತ್ತಿದ್ದರೂ ಮಂಗಳೂರು ತಾಲೂಕಿನಲ್ಲಿ ಇನ್ನಷ್ಟು ಮಳೆ ಸುರಿದು ಸಮಸ್ಯೆ ಎದುರಾಗುವ ಮುನ್ಸೂಚನೆ ಇದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಮೂಲಕ ಉಡುಪಿ & ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ತಾಲೂಕಿಗೆ ಇದೀಗ ರಜೆ ಘೋಷಣೆ ಮಾಡಿದ್ದರೂ ಮತ್ತೆ ಇನ್ನಷ್ಟು ಪ್ರದೇಶಗಳಲ್ಲಿ ಮಳೆ ಆರ್ಭಟ ಹೆಚ್ಚಾದರೆ ಅಲ್ಲೂ ರಜೆ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+