School Holiday: ಜುಲೈ 12 ಶನಿವಾರ & ಜುಲೈ 14 ಸೋಮವಾರ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಕರ್ನಾಟದಲ್ಲಿ ಶಾಲಾ & ಕಾಲೇಜುಗಳು ಈಗಿನ್ನೂ ಶುರುವಾಗಿ ಸುಮಾರು ಒಂದೂವರೆ ತಿಂಗಳು ಕಳೆದಿದ್ದು, ವಿದ್ಯಾರ್ಥಿಗಳು ಹೊಸ ಪಾಠ ಆರಂಭಿಸಿದ್ದಾರೆ. ಆದರೆ ಹಲವು ಜಿಲ್ಲೆಗಳಲ್ಲಿ ಹಲವು ಕಾರಣಗಳಿಗೆ ಪದೇ, ಪದೇ ರಜೆ ಘೋಷಣೆ ಮಾಡುವ ಪರಿಸ್ಥಿತಿ ಬರುತ್ತಿದೆ. ಅದರಲ್ಲೂ ಭಾರಿ ಮಳೆ ಕಾರಣಕ್ಕೆ ಕರ್ನಾಟದಲ್ಲಿ ಶಾಲಾ & ಕಾಲೇಜುಗಳಿಗೆ ರಜೆ ಘೋಷಿಸುವ ವಾತಾವರಣ ನಿರ್ಮಾಣ ಆಗುತ್ತಿದೆ. ಹೀಗಿದ್ದಾಗಲೇ, ಜುಲೈ 12 ಶನಿವಾರ & ಜುಲೈ 14 ಸೋಮವಾರ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ರಜೆ.. ರಜೆ.. ರಜೆ.. ಹೀಗೆ ಸಾಲು ಸಾಲು ರಜೆಗಳು ಇದೀಗ ವಿದ್ಯಾರ್ಥಿಗಳಿಗೆ ಅಂತಾನೇ ಕಾಯುತ್ತಾ ಇವೆ. ಶಾಲಾ & ಕಾಲೇಜುಗಳಿಗೆ ಬೇಸಿಗೆ ರಜೆ ಅಂತಾನೇ 60 ದಿನ ಅಂದ್ರೆ ಸುಮಾರು 2 ತಿಂಗಳ ಕಾಲ ರಜೆ ಘೋಷಣೆ ಮಾಡಲಾಗಿತ್ತು. 60 ದಿನಗಳ ಕಾಲ ರಜೆ ಎಂಜಾಯ್ ಮಾಡಿ ಮತ್ತೆ ಶಾಲಾ & ಕಾಲೇಜುಗಳಿಗೆ ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ಕರ್ನಾಟಕ ಸೇರಿದಂತೆ ಇಡೀ ಇಂಡಿಯಾ ಪೂರ್ತಿ ಶಾಲಾ & ಕಾಲೇಜು ರೀ ಓಪನ್ ಅಂದ್ರೆ ಮತ್ತೆ ತೆರೆಯುವ ಮೂಲಕ ಮಕ್ಕಳಿಗೆ ಪಾಠ ಮಾಡಲು ಸಜ್ಜಾಗಿದ್ದವು. ಹೀಗಿದ್ದಾಗಲೇ ಮಳೆ ಕಾರಣಕ್ಕೆ ಮತ್ತೆ, ಮತ್ತೆ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಪರಿಸ್ಥಿತಿ ಎದುರಾಗಿದೆ! ಹಾಗಾದ್ರೆ ಯಾವ ಯಾವ ಜಿಲ್ಲೆಗಳಲ್ಲಿ ರಜೆ ಸಿಗಲಿದೆ?

School Holiday May Announce In Karnataka On July 12 And July 14 Of 2025 For This Reason

ಜುಲೈ 12 ಶನಿವಾರ & ಜುಲೈ 14 ರಜೆ?

ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಭರ್ಜರಿ ಜೋರಾಗಿದ್ದು, ಎಲ್ಲೆಲ್ಲೂ ಮಳೆರಾಯನ ಅಬ್ಬರ ಹೆಚ್ಚಾಗುತ್ತಿದೆ. ಇದೇ ಕರಾಣಕ್ಕೆ ಒಂದು ಕಡೆ ನದಿಗಳು ತುಂಬಿ ಹರಿದು ಜಲಾಶಯಗಳಲ್ಲಿ ಕೂಡ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹ ಆಗಿದೆ. ಆದರೆ ಇಂತಹ ಸಮಯದಲ್ಲೇ ಭಾರಿ ಮಳೆ ಬೀಳುತ್ತಿರುವ ಕಾರಣಕ್ಕೆ ಹಲವು ಜಿಲ್ಲೆಗಳಲ್ಲಿ ಶಾಲೆ & ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಪರಿಸ್ಥಿತಿ ಇದೆ. ಹೀಗೆ, ಜುಲೈ 12 ಶನಿವಾರ & ಜುಲೈ 14 ಸೋಮವಾರ ಶಾಲಾ, ಕಾಲೇಜು ರಜೆ ಘೋಷಣೆ ಸಾಧ್ಯತೆ ದಟ್ಟವಾಗಿದೆ.

ಮಳೆ.. ಮಳೆ.. ಮಳೆ.. ಭಾರಿ ಮಳೆ!

ಹೌದು, ಜುಲೈ 12 ಶನಿವಾರದಿಂದ ನಮ್ಮ ಕರ್ನಾಟಕದ ಹಲವು ಭಾಗಗಳಲ್ಲಿ ಭಾರಿ ಮಳೆ ಸುರಿಯುವ ಕುರಿತು ಈಗ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು ಸೇರಿ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ, ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಕೊಡಗು ಸೇರಿ ಚಿಕ್ಕಮಗಳೂರು ಭಾಗದಲ್ಲೂ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಇದರ ಜೊತೆಗೆ ಹಾಸನ, ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಜುಲೈ 12 ಶನಿವಾರದಿಂದ ಭಾರಿ ಮಳೆ ಬೀಳುವ ಮುನ್ಸೂಚನೆಯು ಇದೆ. ಹೀಗಿದ್ದಾಗ ಉತ್ತರ ಕರ್ನಾಟಕ ಭಾಗದಲ್ಲೂ ಮಳೆರಾಯ ಅಬ್ಬರಿಸುವ ಮುನ್ಸೂಚನೆ ಸಿಗುತ್ತಿದೆ.

ಈ ಹಿನ್ನೆಲೆ ಜುಲೈ 12 ಶನಿವಾರ & ಜುಲೈ 14 ಸೋಮವಾರ ಶಾಲಾ, ಕಾಲೇಜು ರಜೆ ಘೋಷಣೆ ಸಾಧ್ಯತೆ ಹೆಚ್ಚು ಅಂತಾ ಹೇಳಲಾಗುತ್ತಿದೆ. ನಾಳೆ ಶನಿವಾರ ರಜೆ ಮಿಸ್ ಆದರೂ ಸೋಮವಾರ ಭಾರಿ ದೊಡ್ಡ ಮಳೆ ಇರುವ ಕಾರಣಕ್ಕೆ ಜುಲೈ 14 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ನೀಡುವ ಸಾಧ್ಯತೆ ದಟ್ಟವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ, ಈ ಹಿನ್ನೆಲೆಯಲ್ಲಿ ಭಾನುವಾರ ಸಂಜೆಯ ತನಕ ಕಾದು ನೋಡಬೇಕಿದೆ. ಒಟ್ನಲ್ಲಿ ಮಳೆ ಕಾರಣಕ್ಕೆ ಇದೀಗ ಕರ್ನಾಟಕದಲ್ಲಿ ಹಲವು ಜಿಲ್ಲೆಗಳ ಶಾಲಾ & ಕಾಲೇಜುಗಳಿಗೆ ರಜೆ ನೀಡುವ ಪರಿಸ್ಥಿತಿ ಬಂದಿರುವುದು ಶಿಕ್ಷಕರು ಹಾಗೂ ಮಕ್ಕಳ ಪೋಷಕರಿಗೆ ಚಿಂತೆ ತರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+