ಡಿಕೆಶಿ ಪ್ರಭಾವ ತಗ್ಗಿಸಲು ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ? ಸಾಹುಕಾರ್ ಮನೆ ರಾತ್ರಿ ಊಟದ ಒಳಗುಟ್ಟೇನು?
ಕರ್ನಾಟಕ ಕಾಂಗ್ರೆಸ್ ಪರಿಸ್ಥಿತಿ ಮನೆಯೊಂದು 2 ಬಾಗಿಲು ಎನ್ನುವಂತೆ ಆಗಿದೆ. ಯಾಕಂದ್ರೆ ಕರ್ನಾಟಕ ಕಾಂಗ್ರೆಸ್ ಘಟಕದಲ್ಲಿ ದೊಡ್ಡ ತಿಕ್ಕಾಟ ಆರಂಭವಾಗಿದ್ದು, ಅಧಿಕಾರದ ಹಪಾಹಪಿ ಶುರುವಾಗಿದೆ. ಇದಕ್ಕಾಗಿ ಫೈಟಿಂಗ್ ಕೂಡ ಜೋರಾಗಿದ್ದು, ಒಂದು ಕಡೆ ಸಿದ್ದರಾಮಯ್ಯ ಬಣ & ಮತ್ತೊಂದು ಕಡೆ ಡಿ.ಕೆ. ಶಿವಕುಮಾರ್ ಬಣದ ಬಡಿದಾಟ ಜೋರಾಗಿದೆ. ಈ ಹೊತ್ತಲ್ಲೇ ಸ್ಫೋಟಕ ಸುದ್ದಿಯೊಂದು ಹರಡಿದ್ದು, ಡಿ.ಕೆ. ಶಿವಕುಮಾರ್ ಬಣಕ್ಕೆ ಆಘಾತ ಸಿಕ್ಕಿದೆ!
ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಡಿನ್ನರ್ ಪಾರ್ಟಿ ನಡೆದ ನಂತರ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರ ಸ್ಥಾನಕ್ಕೆ ಕಂಟಕ ಎದುರಾಗಿದೆ ಎಂಬ ಸುದ್ದಿ ಹಬ್ಬಿದೆ. ಒಂದು ಕಡೆ ನಾನು ಕೂಡ ಸಿಎಂ ಆಗಬೇಕು ಎಂಬ ಗುರಿಯೊಂದಿಗೆ ಕಾಂಗ್ರೆಸ್ ಪಕ್ಷದಲ್ಲಿ ಹಲವರು ಪೈಪೋಟಿ ನಡೆಸುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಗೆ, ಸಿಎಂ ಆಗಲೇಬೇಕು ಎಂಬ ಹಠ ಹೆಚ್ಚಾಗಿದೆ. ಹೀಗಿದ್ದಾಗಲೇ, ಡಿಕೆಶಿ ಅವರ ಪ್ರಭಾವ ತಗ್ಗಿಸಲು ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗುವುದು ಬಹುತೇಕ ಗ್ಯಾರಂಟಿ ಎನ್ನಲಾಗ್ತಿದೆ.

ಡಿಕೆಶಿ ಪ್ರಭಾವ ತಗ್ಗಿಸಲು ಜಾರಕಿಹೊಳಿಗೆ ಪಟ್ಟ?
ಸಿದ್ದರಾಮಯ್ಯ ಅವರು 2ನೇ ಬಾರಿಗೆ ಸಿಎಂ ಸ್ಥಾನಕ್ಕೆ ಬಂದು 2 ವರ್ಷ ಕಳೆಯುತ್ತಿದೆ. ಇದೇ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರು, ಸಿದ್ದರಾಮಯ್ಯ ಅವರನ್ನ ಸಿಎಂ ಸ್ಥಾನದಿಂದ ಕೆಳಗೆ ಇಳಿಸಲು ಎಲ್ಲ ರೀತಿಯಲ್ಲು ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಇಷ್ಟೆಲ್ಲದರ ನಡುವೆ ಸಿಎಂ ಸಿದ್ದರಾಮಯ್ಯ ಕೂಡ ಚೆಕ್‌ಮೇಟ್ ಇಡಲು ಸಜ್ಜಾಗಿದ್ದು, ತಮ್ಮ ನಂಬಿಕಸ್ಥ ಬೆಂಬಲಿಗ ಸತೀಶ್ ಜಾರಕಿಹೊಳಿ ಅವರಿಗೆ ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಿಸಲು ಮುಂದಾಗಿದ್ದಾರೆ ಎಂಬ ಸುದ್ದಿ ಸಿಕ್ಕು ಸಂಚಲನ ಸೃಷ್ಟಿಯಾಗಿದೆ. ಈ ವಿಚಾರ ಕರ್ನಾಟಕದ ಕಾಂಗ್ರೆಸ್ ಘಟಕದಲ್ಲಿ ಮಾತ್ರವಲ್ಲ ಕರ್ನಾಟಕ ರಾಜಕೀಯದಲ್ಲೂ ಸಂಚಲನ ಸೃಷ್ಟಿ ಮಾಡುವ ಮುನ್ಸೂಚನೆ ನೀಡಿದೆ.
ಅಹಿಂದ ಮಂತ್ರ ಜಪಿಸಿದ ಸಿದ್ದರಾಮಯ್ಯ?
ಕರ್ನಾಟಕ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರಿಗೆ ದೊಡ್ಡ ತಿರುವು ನೀಡಿದ್ದೇ 'ಅಹಿಂದ' ಹೋರಾಟ. ಹೀಗಾಗಿ ಮತ್ತೆ 'ಅಹಿಂದ' ನಾಯಕರ ಬೆಂಬಲದ ಮೂಲಕ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನ ಭದ್ರ ಮಾಡಿಕೊಳ್ಳಲು ಮುಂದಾಗಿದ್ದಾರಾ? ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ ಸಾಹುಕಾರ್ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ನಡೆದಿರುವ ಡಿನ್ನರ್ ಪಾರ್ಟಿ ವೇಳೆ ಕರ್ನಾಟಕ ಅಹಿಂದ ನಾಯಕರು ಭಾಗವಹಿಸಿದ್ದು, ಸಿದ್ದರಾಮಯ್ಯ ಅವರಿಗೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದಂತೆ ಕಾಣುತ್ತಿದೆ.












Click it and Unblock the Notifications