63-58=5: ತಮಗಿಂತ 5 ವರ್ಷ ಕಿರಿಯ ಅಮಿತ್ ಶಾ ಕಾಲಿಗೆ ಬಿದ್ದ ರಾಮದಾಸ್! ಬಿಜೆಪಿ ಚಾಣಕ್ಯನ ಕೈಯಲ್ಲಿದ್ಯಾ ಬಿಜೆಪಿ ನಾಯಕನ ಭವಿಷ್ಯ?
ಮೈಸೂರು,ಏಪ್ರಿಲ್25: ಕೃಷ್ಣ ರಾಜೇಂದ್ರ ಕ್ಷೇತ್ರದ ಹಾಲಿ ಶಾಸಕ ರಾಮದಾಸ್ ಅವರಿಗೆ 63 ವರ್ಷ ವಯಸ್ಸಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ 58 ವರ್ಷ ವಯಸ್ಸಾಗಿದೆ. ತಮಗಿಂತ 5 ವರ್ಷ ಕಿರಿಯರಾಗಿರುವ ಅಮಿತ್ ಶಾ ಕಾಲಿಗೆ ಬಿದ್ದ ರಾಮದಾಸ್ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ.
ರಾಜ್ಯ ಚುನಾವಣೆ ಪ್ರಚಾರಕ್ಕೆ ರಾಜಕೀಯ ಪಕ್ಷಗಳು ಎಲ್ಲಡೆ ಭರ್ಜರಿ ನಡೆಯುತ್ತಿದ್ದು, ಟಿಕೆಟ್ ಘೋಷಣೆಯ ಬಳಿಕ ಹಲವು ನಾಯಕರು ಕಮಲ ಬಿಟ್ಟು ಅನ್ಯ ಪಕ್ಷಗಳತ್ತ ಮುಖಮಾಡಿದ್ದಾರೆ. ಇತ್ತ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನ ಅಧಿಕಾರಕ್ಕೆ ತರಲು ಬಿಜೆಪಿ ಹೈಕಮಾಂಡ್ ನಾಯಕರು ಕರ್ನಾಟಕದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಸೋಮವಾರ ರಾಜ್ಯಕ್ಕೆ ಆಗಮಿಸಿರುವ ಕೇಂಒದ್ರ ಗೃಹ ಸಚಿವ ಅಮಿತ್ ಶಾ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಪ್ರಚಾರ ಹಿನ್ನೆಲೆ ಮೈಸೂರು ಆಗಮಿಸಿದ ಅಮಿತ್ ಶಾ ಅವರನ್ನು ಬಿಜೆಪಿ ಮುಖಂಡರು ಹಾಗೂ ಕೃಷ್ಣ ರಾಜೇಂದ್ರ ಕ್ಷೇತ್ರದ ಟಿಕೆಟ್ ವಂಚಿತರಾಗಿರುವ ರಾಮದಾಸ್ ಅವರನ್ನುಆತ್ಮೀಯವಾಗಿ ಸ್ವಾಗತಿಸಿದ್ದು, ಈ ವೇಳೆ ಅಮಿತ್ ಶಾ ಅವರ ಕಾಲಿಗೆ ರಾಮ್ ದಾಸ್ ನಮಸ್ಕರಿಸಿದ್ದಾರೆ.

ಮೈಸೂರಿಗೆ ವಿಮಾನ ನಿಲ್ದಾಣಕ್ಕೆ ಬಂದ ಅಮಿತ್ ಶಾ ಅವರನ್ನ ಹಾಲಿ ಶಾಸಕ ರಾಮದಾಸ್ , ಸಂಸದ ಪ್ರತಾಪ್ ಸಿಂಹ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ರಾಮದಾಸ್ ನೋಡಿ ಅಮಿತ್ ಪ್ರಶಂಸೆ ವ್ಯಕ್ತಪಡಿಸಿದ್ದು, ಆತ್ಮೀಯವಾಗಿ ತಬ್ಬಿಕೊಂಡಿದ್ದಾರೆ. ನಿಮ್ಮ ಪಕ್ಷ ನಿಷ್ಠೆ ನಿಜಕ್ಕೂ ಸಂತೋಷ ತಂದಿದೆ ಎಂದಿದ್ದಾರೆ. ಈ ವೇಳೆ ಅಮಿತ್ ಶಾ ಅವರ ಕಾಲಿಗೆ ರಾಮ್ ದಾಸ್ ಬಿದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗುತ್ತಿದೆ.

ಬಿಜೆಪಿ ಟಿಕೆಟ್ ಘೋಷಣೆಯಿಂದಾಗಿ ಬಿಜೆಪಿಯಲ್ಲಿ ಬಂಡಾಯ ಭುಗಿಲೆದಿದ್ದು, ಹಲವು ನಾಯಕರು ಬಿಜೆಪಿ ಗೆ ಗುಡ್ ಬೈ ಹೇಳಿದಂತೆ ಕೆಆರ್ ಕ್ಷೇತ್ರದ ಟಿಕೆಟ್ ಮಿಸ್ ಆದ ವೇಳೆ ಶಾಸಕ ರಾಮದಾಸ್ ಸಹ ಬಂಡಾಯ ಸ್ಪರ್ಧೆ ಮಾಡ್ತಾರೆ , ಬಿಜೆಪಿ ಪಕ್ಷ ಬಿಡುತ್ತಾರೆ ಹೀಗೆ ಅನೇಕ ಊಹಾಪೋಹ ಎಲ್ಲೆಡೆ ಹರಿದಾಡಿದ್ವು. ಅದೆಲ್ಲವನ್ನ ಬದಿಗೊತ್ತಿ ರಾಮದಾಸ್ ಪಕ್ಷದಲ್ಲಿ ಉಳಿದು ಅಭ್ಯರ್ಥಿ ಪರ ಪ್ರಚಾರ ಮಾಡ್ತಿದ್ದಾರೆ. ಇದು ಬಿಜೆಪಿ ಹೈ ಕಮಾಂಡ್ ಗಮನಕ್ಕೆ ಬಂದಿದ್ದು , ರಾಮದಾಸ್ ನಡೆ ದೆಹಲಿ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿ ಇದೀಗ ಅಮಿತ್ ಶಾ ಬೆನ್ನು ತಟ್ಟಿದ್ದಾರೆ.
ಇನ್ನೂ ಕಳೆದ ವರ್ಷದಿಂದ ಬಿಜೆಪಿಯನ್ನ ಸದೃಢವಾಗಿ ಕೆ ಆರ್ ಕ್ಷೇತ್ರದಲ್ಲಿ ರಾಮದಾಸ್ ಕಟ್ಟಿದ್ದಾರೆ. ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಕ್ಯಾಬಿನೆಟ್ ನಲ್ಲೂ ಮಂತ್ರಿಗಿರಿಯೂ ಬಾರಿ ಮಿಸ್ ಆಗಿತ್ತು. ಇದೀಗ MLA ಟಿಕೆಟ್ ಕೂಡ ಕೈತಪ್ಪಿದೆ. ಇದೆಲ್ಲದರ ನಡುವೆ ಪಕ್ಷ ಸಂಘಟನೆಗೆ ಹೆಚ್ಚು ತೊಡಗಿಸಿಕೊಳ್ಳುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಮುಂದೆ ಪಕ್ಷದಲ್ಲಿ ದೊಡ್ಡ ಸ್ಥಾನ ಮಾನ ಸಿಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ರಾಮದಾಸ್ ರಾಜಕೀಯ ಭವಿಷ್ಯ ಹಾಗೂ ಉನ್ನತ ಸ್ಥಾನಮಾನ ಬಿಜೆಪಿ ಚಾಣಕ್ಯ ಅಮಿತ್ ಶಾ ಕೈಯಲ್ಲಿದೆ ಎಂದು ಹೇಳಲಾಗಿದೆ.












Click it and Unblock the Notifications