Reservoirs water level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಜುಲೈ 20ರ ಅಂಕಿಅಂಶ ಹೀಗಿದೆ
ಕರ್ನಾಟಕ, ಜುಲೈ, 20: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೀಗ ಮುಂಗಾರು ಚುರುಕು ಪಡೆದಿದ್ದು, ಹಲವು ಪ್ರಮುಖ ಜಲಾಶಯಗಳ ನೀರಿನ ಮಟ್ಟವೂ ಕೂಡ ನಿಧಾನಗತಿಯಲ್ಲಿ ಏರಿಯಾಗುತ್ತಲೇ ಇದೆ. ಹಾಗಾದರೆ ಇದೀಗ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ಗಮನಿಸಿ.
ಮುಂಗಾರು ಆರಂಭವಾಗಿ ತಿಂಗಳು ಕಳೆಯುತ್ತಾ ಬಂದರೂ ಕೂಡ ಕೆಲವೆಡೆ ಮಾತ್ರ ಮಳೆಯೇ ಇಲ್ಲದಂತಾಗಿತ್ತು. ಆದರೆ ಇದೀಗ ಕರಾವಳಿ ಜಿಲ್ಲೆಗಳು ಮಾತ್ರವಲ್ಲದೆ ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆರಾಯ ಆರ್ಭಟ ಶುರು ಮಾಡಿದ್ದಾನೆ. ಇದರಿಂದ ಹಲವು ಜಲಾಶಯಗಳಿಗೂ ಕಳೆಬಂದಂತಾಗಿದೆ. ಅದರಲ್ಲೂ ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ಡ್ಯಾಂಗಳ ಒಳಹರಿವಿನ ಪ್ರಮಾಣ ತುಸು ಹೆಚ್ಚಾಗಿದೆ.

| ಪ್ರಮುಖ ಜಲಾಶಯ | ಗರಿಷ್ಠ ನೀರಿನ ಮಟ್ಟ(ಮೀಟರ್) | ಒಟ್ಟು ಸಾಮರ್ಥ್ಯ | ಇಂದಿನ ನೀರಿನ ಮಟ್ಟ(ಟಿಎಂಸಿ) | ಕಳೆದ ವರ್ಷದ ನೀರಿನ ಮಟ್ಟ(ಟಿಎಂಸಿ) | ಒಳಹರಿವು | ಹೊರಹರಿವು |
| ಕೆಆರ್ಎಸ್ ಜಲಾಶಯ | 124.80 | 49452 | 89.72 | 123.36 | 11846 ಕ್ಯೂಸೆಕ್ | 399 ಕ್ಯೂಸೆಕ್ |
| ಆಲಮಟ್ಟಿ ಜಲಾಶಯ | 519.6 | 123.08 | 28.76 | 87.23 | 21672ಕ್ಯೂಸೆಕ್ | 561 ಕ್ಯೂಸೆಕ್ |
| ತುಂಗಭದ್ರಾ ಜಲಾಶಯ | 497.71 | 105.79 | 11.77 | 98.26 | 9849ಕ್ಯೂಸೆಕ್ | 285 ಕ್ಯೂಸೆಕ್ |
| ಮಲಪ್ರಭಾ ಜಲಾಶಯ | 633.8 | 37.73 | 7.17 | 22.81 | 3851 ಕ್ಯೂಸೆಕ್ | 194 ಕ್ಯೂಸೆಕ್ |
| ಲಿಂಗನಮಕ್ಕಿ ಜಲಾಶಯ | 554.44 | 151.75 | 26.59 | 87.57 | 20792 ಕ್ಯೂಸೆಕ್ | 1734 |
| ಕಬಿನಿ ಜಲಾಶಯ | 696.13 | 19.52 | 12.16 | 18.51 | 3293 ಕ್ಯೂಸೆಕ್ | 800 ಕ್ಯೂಸೆಕ್ |
| ಭದ್ರಾ ಜಲಾಶಯ | 657.73. | 71.54 | 27.99 | 66.74 | 1518 ಕ್ಯೂಸೆಕ್ | 164 ಕ್ಯೂಸೆಕ್ |
| ಘಟಪ್ರಭಾ ಜಲಾಶಯ | 662.91 | 51 | 9.28 | 31.97 | 13753 ಕ್ಯೂಸೆಕ್ | 96 ಕ್ಯೂಸೆಕ್ |
| ಹೇಮಾವತಿ ಜಲಾಶಯ | 890.58 | 37.1 | 16.47 | 35.33 | 2189 ಕ್ಯೂಸೆಕ್ | 200 ಕ್ಯೂಸೆಕ್ |
| ವರಾಹಿ ಜಲಾಶಯ | 594.36 | 31.1 | 5.35 | 13.44 | 4144 ಕ್ಯೂಸೆಕ್ | 220 ಕ್ಯೂಸೆಕ್ |
| ಹಾರಂಗಿ ಜಲಾಶಯ | 871.38 | 8.5 | 5.34 | 7.05 | 4383 ಕ್ಯೂಸೆಕ್ | 50 ಕ್ಯೂಸೆಕ್ |
ಒಟ್ಟಿನಲ್ಲಿ ಬತ್ತುವ ಹಂತದಲ್ಲಿದ್ದ ಜಲಾಶಯಗಳಿಗೆ ಇದೀಗ ಜೀವಕಳೆ ಬಂದಂತಾಗಿದೆ. ಇದರಿಂದ ಅನ್ನದಾತನ ಮುಖದಲ್ಲೂ ಮಂದಹಾಸ ಮೂಡಿದಂತಾಗಿದೆ. ಈ ಅಂಕಿಅಂಶಗಳನ್ನು ಗಮನಿಸಿದರೆ ಜಲಾಶಯಗಳ ನೀರಿನ ಪ್ರಮಾಣ ತುಸು ಹೆಚ್ಚಾಗಿದೆ ಎನ್ನುವುದು ತಿಳಿದುಬರುತ್ತಿದೆ.












Click it and Unblock the Notifications