Breaking; ಬೆಳಗಾವಿ-ದೆಹಲಿ ವಿಮಾನ ಮತ್ತೆ ಆರಂಭಿಸುವಂತೆ ಒತ್ತಾಯ

ಬೆಳಗಾವಿ, ಡಿಸೆಂಬರ್ 15; ಸ್ಪೈಸ್‌ ಜೆಟ್ ಬೆಳಗಾವಿ ವಿಮಾನ ನಿಲ್ದಾಣದಿಂದ ಎಲ್ಲಾ ಸೇವೆಗಳನ್ನು ರದ್ದುಗೊಳಿಸಿದೆ. ಇದರಿಂದಾಗಿ ಬೆಳಗಾವಿ-ನವದೆಹಲಿ ನಡುವಿನ ವಿಮಾನ ಸೇವೆಯೂ ಸಹ ಅಂತ್ಯಗೊಂಡಿದೆ.

ಬೆಳಗಾವಿಯ ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ಕೇಂದ್ರ ವಿಮಾನಯಾನ ಖಾತೆ ಸಚವ ಜ್ಯೋತಿರಾದಿತ್ಯ ಸಿಂಧಿಯಾಗೆ ಪತ್ರವನ್ನು ಬರೆದಿದೆ. ಬೆಳಗಾವಿ-ನವದೆಹಲಿ ನಡುವಿನ ವಿಮಾನ ಸೇವೆ ಮತ್ತೆ ಆರಂಭಿಸಬೇಕು ಎಂದು ಒತ್ತಾಯಿಸಿದೆ.

ಸ್ಪೈಸ್‌ ಜೆಟ್ ವಿಮಾನ ಸೇವೆ ರದ್ದುಗೊಳಿಸಿದ ಬಳಿಕ ಬೆಳಗಾವಿ-ನವದಹೆಲಿ ನಡುವೆ ಸಂಚಾರ ನಡೆಸುವ ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ಕೇಂದ್ರ ಸಚಿವರಿಗೆ ಬರೆದಿರುವ ಪತ್ರದಲ್ಲಿ ವಿವರಣೆ ನೀಡಲಾಗಿದೆ.

ಬೆಳಗಾವಿಯು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ಗಡಿಯಲ್ಲಿದೆ. ಫೌಂಡ್ರಿ ಉದ್ಯಮದಿಂದಾಗಿ ಬೆಳಗಾವಿ ದೇಶದಲ್ಲಿಯೇ ಪ್ರಸಿದ್ಧಿ ಪಡೆದಿದೆ ಎಂದು ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ಹೇಳಿದೆ.

Request To Start Belagavi New Delhi Flight Service Again

ಏಪ್ರಿಲ್ 2022ರಲ್ಲಿ ಬೆಳಗಾವಿ-ನವದೆಹಲಿ ನಡುವೆ ಸ್ಪೈಸ್ ಜೆಟ್ ವಿಮಾನ ಸೇವೆಯನ್ನು ಆರಂಭಿಸಿತು. ಇದರಿಂದಾಗಿ ಬೆಳಗಾವಿ, ಸಾಂಗ್ಲಿ, ವಿಜಯಪುರದಿಂದ ದೆಹಲಿಗೆ ತೆರಳುವ ಜನರಿಗೆ ಸಹ ಸಹಾಯಕವಾಗಿತ್ತು. ಕಡಿಮೆ ಅವಧಿಯಲ್ಲಿಯೇ ಈ ಸೇವೆ ಹೆಚ್ಚು ಜನಪ್ರಿಯವಾಯಿತು ಎಂದು ಸಮಿತಿ ಪತ್ರದಲ್ಲಿ ತಿಳಿಸಿದೆ.

2022ರ ಏಪ್ರಿಲ್‌ನಿಂದ ನವೆಂಬರ್ ತನಕ ಪ್ರಯಾಣಿಕರಿಂದಲೂ ಬೆಳಗಾವಿ-ನವದೆಹಲಿ ವಿಮಾನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸುಮಾರು 50 ಸಾವಿರ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಈಗ ಸ್ಪೈಸ್ ಜೆಟ್ ಡಿಸೆಂಬರ್ 12ರಿಂದಲೇ ಅನ್ವಯವಾಗುವಂತೆ ವಿಮಾನ ಸೇವೆ ರದ್ದುಗೊಳಿಸಿದೆ ಎಂದು ಪತ್ರದಲ್ಲಿ ಮಾಹಿತಿ ನೀಡಲಾಗಿದೆ.

ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ಬೆಳಗಾವಿ-ದೆಹಲಿ ವಿಮಾನವನ್ನು ಮತ್ತೆ ಆರಂಭಿಸಬೇಕು. ಆದ್ದರಿಂದ ಬೇರೆ ವಿಮಾನಯಾನ ಕಂಪನಿಗಳ ಜೊತೆಗೂ ಮಾತುಕತೆ ನಡೆಸಬೇಕು ಎಂದು ಕೇಂದ್ರ ಸಚಿವರಿಗೆ ಪತ್ರದಲ್ಲಿ ಮನವಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+