Get Updates
Get notified of breaking news, exclusive insights, and must-see stories!

ಕುಂಕುಮ, ಗಂಧ ಸಿಗುತ್ತೆ, ತೀರ್ಥ ಕೇಳಬೇಡಿ: ದೇವಸ್ಥಾನ ತೆರೆಯಲು 6 ಷರತ್ತುಗಳು

ಬೆಂಗಳೂರು, ಜೂನ್ 1: ಈಗಾಗಲೇ ವರದಿಯಾಗಿರುವಂತೆ, ಜೂನ್ ಒಂದರ ಬದಲು, ಜೂನ್ ಎಂಟರಂದು, ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಸ್ಥಾನಗಳ ಸಹಿತ, ಎಲ್ಲಾ ದೇವಾಲಯಗಳು ಭಕ್ತರ ದರ್ಶನಕ್ಕೆ ತೆರೆಯಲಿವೆ.

"ಈ ಮೊದಲು ಜೂನ್ 1ಕ್ಕೆ ತೆರೆಯಬೇಕೆಂದು ನಿರ್ಧರಿಸಲಾಗಿದ್ದರೂ, ಕೇಂದ್ರ ಸರ್ಕಾರ ನೀಡಿರುವ ನೂತನ ಮಾರ್ಗಸೂಚಿಯ ಮೇರೆಗೆ ಜೂನ್ 8ಕ್ಕೆ ದೇವಾಲಯ ತೆರೆಯುವುದನ್ನು ಮುಂದೂಡಲಾಗಿದ್ದು, ಎಲ್ಲಾ ಭಕ್ತರು ಸಹಕರಿಸಬೇಕಾಗಿ" ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದ್ದಾರೆ.

ಮಾರ್ಗಸೂಚಿಯ ಪ್ರಕಾರ, ಯಾವುದೇ ಗೊಂದಲವಾಗದಂತೆ ನೋಡಿಕೊಳ್ಳಲು, ಈಗಿಂದಲೇ ಪೂರ್ವ ತಯಾರಿ ನಡೆಸಿಕೊಳ್ಳುವಂತೆ ಸಚಿವರು, ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

"ದೇವಾಲಯದಲ್ಲಿ ಕುಂಕುಮ ಗಂಧ ಸಿಗುತ್ತದೆ. ಆದರೆ ತೀರ್ಥ ಸಿಗುವುದಿಲ್ಲ"ಎಂದು ಈಗಾಗಲೇ ಸಚಿವ ಕೋಟ ಪೂಜಾರಿಯವರು ಹೇಳಿದ್ದಾರೆ. ಇಲಾಖೆಯ ಆಯುಕ್ತರ ಸುತ್ತೋಲೆಯ ಪ್ರಕಾರ, ಎಲ್ಲಾ ದೇವಾಲಯಗಳು, ಈ ಮಾರ್ಗಸೂಚಿಯನ್ನು ಪಾಲಿಸಬೇಕಿದೆ. ಆರು ಷರತ್ತುಗಳು, ಹೀಗಿವೆ:

ಮಾಸ್ಕ್ ಅಥವಾ ಮೂಗು ಮುಚ್ಚವಂತೆ ಕರವಸ್ತ್ರ

ಮಾಸ್ಕ್ ಅಥವಾ ಮೂಗು ಮುಚ್ಚವಂತೆ ಕರವಸ್ತ್ರ

1. ಎಲ್ಲಾ ದೇವಾಲಯದ ಪ್ರವೇಶ ದ್ವಾರಗಳಲ್ಲಿ ಉಷ್ಣತೆ ಪರೀಕ್ಷೆ ಕಡ್ಡಾಯ. ನಿಗದಿಗಿಂತ ಹೆಚ್ಚಿನ ಉಷ್ಟತೆ ಕಂಡು ಬಂದರೆ, ದೇವಾಲಯದೊಳಗೆ ಪ್ರವೇಶ ನೀಡಬಾರದು.

2. ಮಾಸ್ಕ್ ಅಥವಾ ಮೂಗು ಮುಚ್ಚವಂತೆ ಕರವಸ್ತ್ರಗಳನ್ನು ಧರಿಸಿದವರಿಗೆ ಮಾತ್ರ, ದೇವಾಲಯದೊಳಗೆ ಬಿಡಬೇಕು.

ಹೆಚ್ಚಿನ ಭದ್ರತಾ ಸಿಬ್ಬಂದಿ

ಹೆಚ್ಚಿನ ಭದ್ರತಾ ಸಿಬ್ಬಂದಿ

3. ಮಾರ್ಗಸೂಚಿ ಪಾಲಿಸಲು ಹೆಚ್ಚಿನ ಭದ್ರತಾ ಸಿಬ್ಬಂದಿ ಬೇಕಿದ್ದಲ್ಲಿ, ಆಯಾಯ ದೇವಾಲಗಳು ಎರಡು ತಿಂಗಳ ಮಟ್ಟಿಗೆ ಇವರನ್ನು ನೇಮಿಸಿಕೊಳ್ಳಬಹುದು. ಇದಕ್ಕೆ ತಗಲುವ ಖರ್ಚನ್ನು ಆಯಾಯ ದೇವಾಲಯಗಳೇ ಭರಿಸಬೇಕು.

ಸಚಿವ ಕೋಟ ಶ್ರೀನಿವಾಸ ಪೂಜಾರಿ

ಸಚಿವ ಕೋಟ ಶ್ರೀನಿವಾಸ ಪೂಜಾರಿ

4. ದೇವಾಲಯದ ಅರ್ಚಕ ವೃಂದ, ಒಳಾಂಗಣ ಸಿಬ್ಬಂದಿ ಹೊರತು ಪಡಿಸಿ, ಅಧಿಕಾರಿಗಳು/ನೌಕರರು ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು.

5.ದೇವಾಲಯದ ದ್ವಾರದಲ್ಲೇ ಸ್ಯಾನಿಟೈಸರ್ ವ್ಯವಸ್ಥೆ ಇರಬೇಕು. ಇದಕ್ಕೂ ದೇವಾಲಯದ ನಿಧಿಯನ್ನೇ ಬಳಸಬೇಕು.

ಸ್ವಚ್ಚತೆಗೆ ಆದ್ಯತೆಯನ್ನು ನೀಡಬೇಕು

ಸ್ವಚ್ಚತೆಗೆ ಆದ್ಯತೆಯನ್ನು ನೀಡಬೇಕು

6. ದೇವಾಲಯದಲ್ಲಿ ಸ್ವಚ್ಚತೆಗೆ ಆದ್ಯತೆಯನ್ನು ನೀಡಬೇಕು. ದೇವಾಲಯದ ಹೊರ ಮತ್ತು ಒಳಾವರಣದಲ್ಲಿ ಸೋಂಕು ನಿವಾರಕಗಳನ್ನು ಸಿಂಪಡಿಸುತ್ತಿರಬೇಕು. ಶೌಚಾಲಯಗಳನ್ನು ಸ್ವಚ್ಜಗೊಳಿಸುತ್ತಿರಬೇಕು.

ಈ ಎಲ್ಲಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೋರಿದ್ದಾರೆ. ಜೊತೆಗೆ, ಭಕ್ತರೂ ಸಹಕರಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+