ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಕರ ನೇಮಕಾತಿ ಹಗರಣ: ವರದಿ ಮೂಲ ಬಹಿರಂಗಪಡಿಸುವಂತೆ ದಿ ಫೈಲ್ ಸಂಸ್ಥಾಪಕರಿಗೆ ಪೊಲೀಸ್ ನೋಟಿಸ್

|
Google Oneindia Kannada News

ಬೆಂಗಳೂರು, ಜ. 08: ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಕಟವಾದ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಹಗರಣವನ್ನು ಬಯಲಿಗೆಳೆದಿದ್ದ ದಿ ಫೈಲ್ ಡಿಜಿಟಲ್ ತನಿಖಾ ಸುದ್ದಿ ಸಂಸ್ಥೆಯ ಸಂಸ್ಥಾಪಕ ಮಹಾಂತೇಶ್‌ಗೆ ಬೆಂಗಳೂರು ಪೊಲೀಸರು ನೋಟಿಸ್ ಕಳುಹಿಸಿದ್ದಾರೆ.

ಸುದ್ದಿಯ ಮೂಲವನ್ನು ಬಹಿರಂಗಪಡಿಸುವಂತೆ ಆನ್‌ಲೈನ್ ಪೋರ್ಟಲ್ ದಿ ಫೈಲ್‌ನ ಸಂಸ್ಥಾಪಕ ಮತ್ತು ಸಂಪಾದಕ ಮಹಾಂತೇಶ್ ಅವರಿಗೆ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

Breaking: ಪಿಎಸ್ಐ ನೇಮಕಾತಿ ಹಗರಣ: ದಿವ್ಯಾ ಹಾಗರಗಿ ಸೇರಿ 26 ಮಂದಿಗೆ ಜಾಮೀನುBreaking: ಪಿಎಸ್ಐ ನೇಮಕಾತಿ ಹಗರಣ: ದಿವ್ಯಾ ಹಾಗರಗಿ ಸೇರಿ 26 ಮಂದಿಗೆ ಜಾಮೀನು

ಕರ್ನಾಟಕ ಕ್ರಿಮಿನಲ್ ಇನ್ವೆಸ್ಟಿಗೇಷನ್ ಇಲಾಖೆ (ಸಿಐಡಿ) ಸೆಪ್ಟೆಂಬರ್ 2022 ರಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ 60 ಜನರನ್ನು ಬಂಧಿಸಿತು. ಅದೇ ವರ್ಷದ ನವೆಂಬರ್‌ನಲ್ಲಿ ದಿ ಫೈಲ್ ಪ್ರಕಟಿಸಿದ ಫಾಲೋ-ಅಪ್ ಸ್ಟೋರಿಗೆ ಸಂಬಂಧಿಸಿದಂತೆ ಪೊಲೀಸ್ ನೋಟಿಸ್ ನೀಡಲಾಗಿದೆ.

Recruitment Scam: Bengaluru Police gives notice to journalist to reveal source

ತಮ್ಮ ಮೂಲಗಳನ್ನು ಬಹಿರಂಗಪಡಿಸಲು ನಿರಾಕರಿಸಿದ ದಿ ಫೈಲ್ ಸಂಸ್ಥಾಪಕ ಮತ್ತು ಸಂಪಾದಕ ಮಹಾಂತೇಶ್, ಪೊಲೀಸರಿಗೆ ಪ್ರತಿಕ್ರಿಯಿಸಿದ ಅವರು, ದುರಾಚಾರ, ದುರಾಡಳಿತ, ಹಗರಣ, ಅಕ್ರಮದ ಬಗ್ಗೆ ಮಾಹಿತಿ ನೀಡುವ ಮೂಲದ ಹೆಸರು ಮತ್ತು ವಿವರಗಳನ್ನು ಬಹಿರಂಗಪಡಿಸುವುದು ಪತ್ರಿಕೋದ್ಯಮದ ನೈತಿಕತೆಯಲ್ಲ" ಎಂದು ಉತ್ತರಿಸಿದ್ದಾರೆ.

ಸೈಬರ್ ಕ್ರೈಂ ಪೊಲೀಸ್ ಇನ್ಸ್ ಪೆಕ್ಟರ್ ನೀಡಿರುವ ನೋಟಿಸ್‌ನಲ್ಲಿ ''ಶಿಕ್ಷಣ ಇಲಾಖೆಯಿಂದ ದಾಖಲೆಗಳು ಸೋರಿಕೆಯಾಗಿರುವ ಬಗ್ಗೆ ದೂರು ಬಂದಿದ್ದು, ಅದರಂತೆ ಸೈಬರ್ ಕ್ರೈಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ, 10 ನವೆಂಬರ್ 2022 ರಂದು, ಶಿಕ್ಷಣ ಇಲಾಖೆಗೆ ಸಂಬಂಧಿಸಿದ ದಾಖಲೆಗಳನ್ನು 'ದಿ ಫೈಲ್' ನಲ್ಲಿ ಪ್ರಕಟಿಸಲಾಯಿತು. ಪ್ರಕರಣದ ತನಿಖೆಯ ಉದ್ದೇಶಕ್ಕಾಗಿ 'ದಿ ಫೈಲ್'ಗೆ ದಾಖಲೆಗಳನ್ನು ನೀಡಿದ ವ್ಯಕ್ತಿಗಳ ಮಾಹಿತಿಯನ್ನು ಈ ಕೆಳಗಿನ ಮಾಹಿತಿ ಮತ್ತು ದಾಖಲೆಗಳೊಂದಿಗೆ ಒದಗಿಸಬೇಕು ಎಂದು ಈ ಮೂಲಕ ನಿರ್ದೇಶಿಸಲಾಗಿದೆ" ಎಂದಿದೆ.

ಆದರೆ, ಪಬ್ಲಿಷ್ ಆಗಿರುವ ವರದಿಯ ಮೂಲವನ್ನು ಪೊಲೀಸರಿಗೆ ಬಹಿರಂಗಪಡಿಸುವುದಿಲ್ಲ ಎಂದು ಮಹಾಂತೇಶ್ ಹೇಳಿದ್ದಾರೆ. "ಸ್ವತಂತ್ರ ಮಾಧ್ಯಮದಲ್ಲಿ ನಿರ್ಭೀತಿಯಿಂದ ಕೆಲಸ ಮಾಡುತ್ತಿರುವ ಪತ್ರಕರ್ತರ ಮಾಧ್ಯಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಭಾಗವಾಗಿ ಇಂತಹ ನೋಟಿಸ್‌ಗಳು ಬರುತ್ತವೆ. ಅಲ್ಲದೆ, ಸ್ವತಂತ್ರ ಸುದ್ದಿ ವೆಬ್‌ಸೈಟ್ 'ದಿ ಫೈಲ್' ಕಳೆದ ಮೂರು ವರ್ಷಗಳಿಂದ ತನಿಖಾ ವರದಿಗಳನ್ನು ಪ್ರಕಟಿಸುತ್ತಿದೆ. ಅಕ್ರಮಗಳಲ್ಲಿ ಶಿಕ್ಷಕರ ನೇಮಕಾತಿಯನ್ನು ನಮ್ಮ ವರದಿಯಲ್ಲಿ ಸೇರಿಸಲಾಗಿದೆ" ಎಂದು ಮಹಾಂತೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Recruitment Scam: Bengaluru Police gives notice to journalist to reveal source

ಫೈಲ್ ಬೆಂಗಳೂರು ಮೂಲದ ಸ್ವತಂತ್ರ ಸುದ್ದಿ ವೆಬ್‌ಸೈಟ್ ಆಗಿದ್ದು ಅದು ಪ್ರದರ್ಶಕ್ ಮೀಡಿಯಾ ಫೌಂಡೇಶನ್ ಬ್ಯಾನರ್ ಅಡಿಯಲ್ಲಿ ತನಿಖಾ ವರದಿಗಳನ್ನು ಪ್ರಕಟಿಸುತ್ತದೆ. ಸೆಪ್ಟೆಂಬರ್ 2022 ರಲ್ಲಿ ಪ್ರಕಟವಾದ ದಿ ಫೈಲ್‌ನ ಆರಂಭಿಕ ವರದಿಯನ್ನು ಆಧರಿಸಿ, 2014-15ರ ಶೈಕ್ಷಣಿಕ ವರ್ಷದಲ್ಲಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ 60 ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕರಾಗಿದ್ದ ಉನ್ನತ ಅಧಿಕಾರಿ ಮಾದೇಗೌಡ ಕೂಡ ಸೇರಿದ್ದರು.

ಹಗರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಿದ ಎರಡು ತಿಂಗಳ ನಂತರ, ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದ ಹೇಳಿಕೆಯಲ್ಲಿ ಮಾದೇಗೌಡ ಮತ್ತು ಇತರ ಇಬ್ಬರನ್ನು ಅವರ ಸ್ಥಾನಗಳಿಗೆ ಮರುನೇಮಕ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದ ಟಿಪ್ಪಣಿಯ ಪ್ರತಿಯನ್ನು ನವೆಂಬರ್ 10, 2022 ರಂದು ದಿ ಫೈಲ್‌ನ ವರದಿಯಲ್ಲಿ ಪ್ರಕಟಿಸಲಾಗಿದೆ.

English summary
Bengaluru Police gives notice to The File journalist Mahantesh to reveal the source for a story related to a school teachers recruitment scam. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X