ಕರ್ನಾಟಕದ ಈ ಭಾಗದಲ್ಲಿ ಭೂಮಿಗೆ ಭರ್ಜರಿ ಬಂಗಾರದ ಬೆಲೆ, ಬೆಂಗಳೂರು ಬಿಡಿಎಗೆ ಪೈಪೋಟಿ!
ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಬೂಸ್ಟ್ ಪಡೆದುಕೊಂಡಿದೆ. ಅಲ್ಲದೇ ಇದೇ ಸಂದರ್ಭದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೂ ಸಹ ಕೆಲವೊಂದು ಬಂಪರ್ ಆಫರ್‌ಗಳನ್ನು ಕೊಡುತ್ತಿದೆ. ಇದೀಗ ಬಿಡಿಎಗಿಂತಲೂ ಮತ್ತೊಂದು ಪ್ರಾಧಿಕಾರ ಬೂಸ್ಟ್ ಆಗುತ್ತಿದೆ. ಬೆಂಗಳೂರಿನ ಅಭಿವೃದ್ಧಿ ಪ್ರಾಧಿಕಾರ / ಹುಬ್ಬಳ್ಳಿ - ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶ (ಎಲ್.ಪಿ.ಎ)ವು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಗೆ ಪೈಪೋಟಿ ನೀಡುವ ಎಲ್ಲಾ ಲಕ್ಷಣಗಳು ಸಹ ಕಾಣಿಸುತ್ತಿವೆ. ಬೆಂಗಳೂರಿನಲ್ಲಿ ಮಧ್ಯಮ ವರ್ಗದವರಿಗೂ ಮನೆಗಳನ್ನು ಕಡಿಮೆ ಬೆಲೆಯಲ್ಲಿ ಬಿಡಿಎ ಕೊಡುತ್ತಿದೆ.
ಇದೀಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಪೈಪೋಟಿ ನೀಡುವಂತೆ ಹುಬ್ಬಳ್ಳಿ - ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶ (ಎಲ್.ಪಿ.ಎ)ವು ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಇದಲ್ಲದೇ ಹುಬ್ಬಳ್ಳಿ - ಧಾರವಾಡದ 92ಕ್ಕೂ ಹೆಚ್ಚು ಗ್ರಾಮಗಳನ್ನು ಎಲ್‌ಪಿಎಗೆ ಸೇರುತ್ತಿದ್ದು. ಈ ಭಾಗದಲ್ಲೂ ಭೂಮಿಗೆ ಬಂಗಾರದ ಬೆಲೆ ಬರುವ ನಿರೀಕ್ಷೆ ಮೂಡಿದೆ. ಹುಬ್ಬಳ್ಳಿ - ಧಾರವಾಡ ಸ್ಥಳೀಯ ಯೋಜನಾ ಪ್ರದೇಶಕ್ಕೆ (ಎಲ್.ಪಿ.ಎ) ಧಾರವಾಡ, ಕಲಘಟಗಿ, ಹುಬ್ಬಳ್ಳಿ ತಾಲೂಕಿನ 46 ಹಳ್ಳಿಗಳ ಹೊಸದಾಗಿ ಸೇರ್ಪಡೆ ಮಾಡಲಾಗುತ್ತಿದೆ.

ಈ ಮೂಲಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ - ಹುಬ್ಬಳ್ಳಿ - ಧಾರವಾಡ ಸ್ಥಳೀಯ ಯೋಜನಾ ಪ್ರದೇಶ ಪೈಪೋಟಿ ನೀಡುವುದಕ್ಕೆ ಮುಂದಾಗಿದೆ. ಬಿಡಿಗೆ ಯಾವ ರೀತಿಯಲ್ಲಿ ಪೈಪೋಟಿ ನೀಡಲಿದೆ ಎನ್ನುವ ವಿವರ ಮುಂದೆ ನೋಡೋಣ.
ಹೆಚ್ಚು ಪ್ರದೇಶ: ಬಿಡಿಎಗೆ ವಿಸ್ತೀರ್ಣ ಹಾಗೂ ಬೆಲೆಯಲ್ಲಿ ಪೈಪೋಟಿ ನೀಡುವುದಕ್ಕೆ ಎಲ್‌ಪಿಎ ಮುಂದಾಗಿದೆ. ಇದರಿಂದ ಹುಬ್ಬಳ್ಳಿ - ಧಾರವಾಡ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವುದರೊಂದಿಗೆ ಕಡಿಮೆ ಬೆಲೆಯಲ್ಲಿ ನಿವೇಶನವೂ ಸಿಗುವ ನಿರೀಕ್ಷೆ ಇದೆ. ಬೆಂಗಳೂರು ಮಹಾನಗರ ಪ್ರದೇಶವು ಗ್ರೇಟರ್ ಬೆಂಗಳೂರು ಆಡಳಿತಕ್ಕೆ ಒಳಪಟ್ಟ ಮೇಲೆ BDA ಅಧಿಕಾರ ವ್ಯಾಪ್ತಿಯನ್ನು ಸರಿಸುಮಾರು 1,200 ಚದರ ಕಿ.ಮೀ.ನಿಂದ ಸುಮಾರು 400 ಚದರ ಕಿ.ಮೀ.ಗೆ ಇಳಿಸಲಾಗಿದೆ. GBA ಈಗ ಸರಿಸುಮಾರು 721 ಚದರ ಕಿ.ಮೀ.ನ ಹೊಸ "ಗ್ರೇಟರ್ ಬೆಂಗಳೂರು" ಪ್ರದೇಶವನ್ನು ಒಳಗೊಂಡಿದೆ. ಹುಬ್ಬಳ್ಳಿ - ಧಾರವಾಡ ವ್ಯಾಪ್ತಿಯಲ್ಲಿ ಎಲ್‌ಪಿಎ 407 ಚದರ ಕಿ.ಮೀ.ನಿಂದ 757 ಚದರ ಕಿ.ಮೀ.ಗೆ ವಿಸ್ತರಿಸಲಾಗಿದ್ದು, ಇದು ಲಾಭವಾಗಿ ಬದಲಾಗಿದೆ.
ಈಗಾಗಲೇ ಹುಬ್ಬಳ್ಳಿ ಧಾರವಾಡ ಸ್ಥಳೀಯ ಯೋಜನಾ ಪ್ರದೇಶ ವ್ಯಾಪ್ತಿಯಲ್ಲಿ ಹುಬ್ಬಳ್ಳಿ ತಾಲ್ಲೂಕಿನ 21 ಗ್ರಾಮಗಳು ಹಾಗೂ ಧಾರವಾಡ ತಾಲ್ಲೂಕಿನ 25 ಗ್ರಾಮಗಳು ಸೇರಿದಂತೆ ಒಟ್ಟು 46 ಗ್ರಾಮಗಳನ್ನು ಸೇರ್ಪಡೆ ಮಾಡಲಾಗಿತ್ತು. ಈಚೆಗೆ ಸರಕಾರದ ಅಧಿಸೂಚನೆ ಪ್ರಕಾರ ಪ್ರಾಧಿಕಾರದ ವ್ಯಾಪ್ತಿಗೆ ಹೊಸದಾಗಿ 46 ಗ್ರಾಮಗಳನ್ನು ಸೇರ್ಪಡೆ ಮಾಡಲಾಗಿದೆ. ಒಟ್ಟಾರೆಯಾಗಿ 92 ಗ್ರಾಮಗಳು ಸ್ಥಳೀಯ ಯೋಜನಾ ಪ್ರದೇಶ ವ್ಯಾಪ್ತಿಗೆ ಸೇರ್ಪಡೆಯಾಗಿವೆ.
ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಸೆರ್ಪಡೆ ಆಗಿರುವ ಮೂರು ತಾಲ್ಲೂಕಿಗೆ ಒಳಪಟ್ಟ ಹೊಸ ಗ್ರಾಮಗಳಾಗಿವೆ.
ಹುಬ್ಬಳ್ಳಿ ತಾಲ್ಲೂಕು: ರೇವಡಿಹಾಳ,ದೇವರಗುಡಿಹಾಳಪರಸಾಪೂರ, ಬುಡ್ನಾಳ, ಮಾವನೂರ, ಬುಡರಸಿಂಗಿ, ಸಿದ್ದಾಪೂರ, ಮುರಾರಹಳ್ಳಿ, ಅದರಗುಂಚಿ, ಹಳ್ಳಾಳ, ಶಹರ ವೀರಾಪೂರ, ಕುಸುಗಲ್ಲ, ಸುಳ್ಳ ಗ್ರಾಮಗಳು.
ಕಲಘಟಗಿ ತಾಲ್ಲೂಕು: ದೇವಲಿಂಗಿಕೊಪ್ಪ, ದಾಸನೂರ, ದುಮ್ಮವಾಡ, ಕುರಣಕೊಪ್ಪ, ಕಾಡಣಕೊಪ್ಪ, ಚಳಮಟ್ಟಿ ಗ್ರಾಮಗಳು.
ಧಾರವಾಡ ತಾಲ್ಲೂಕು: ಕೋಟೂರ, ಅಗಸನಹಳ್ಳಿ, ಶಿಂಗನಹಳ್ಳಿ, ಹೆಗ್ಗೇರಿ, ವರವನಾಗವಾಲಿ, ಚಿಕ್ಕಮಲ್ಲಿಗವಾಡ, ದಡ್ಡಿಕಮಲಾಪೂರ, ಮಂಡಿಹಾಳ, ಮುಗದ, ಕ್ಯಾರಕೊಪ್ಪ, ಜಂಜಲ (ಜುಂಜಲಕಟ್ಟಿ), ಬಾಡ, ಬೆನಕನಕಟ್ಟಿ, ಮನಗುಂಡಿ, ನಾಯಿಕನಹುಲಿಕಟ್ಟಿ, ಶಿವಳ್ಳಿ, ಮಾರಡಗಿ, ನವಲೂರ ತಡೆಬಿಳ, ಅಲ್ಲಾಪೂರ, ಗೊಂಗಡಿಕೊಪ್ಪ, ಗೋವನಕೊಪ್ಪ, ದಂಡಿಕೊಪ್ಪ, ಕಮಲಾಪೂರ, ದಾಸನಕೊಪ್ಪ, ದೇವಗಿರಿ ಎಂ ನರೇಂದ್ರ, ಗೋವನಕೊಪ್ಪ ಎಂ ನರೇಂದ್ರ ಮತ್ತು ನೀರಲಕಟ್ಟಿ ಗ್ರಾಮಗಳು ಸೇರಿವೆ.












Click it and Unblock the Notifications