Nandini: ಆರ್ಸಿಬಿ ಜೊತೆ ರಾರಾಜಿಸಲಿದೆ ನಮ್ಮ ಹೆಮ್ಮೆಯ 'ನಂದಿನಿ': ಐಪಿಎಲ್-2026ರಲ್ಲಿ ಕನ್ನಡಿಗರಿಗೆ ಡಬಲ್ ಧಮಾಕಾ
ಬೆಂಗಳೂರು: ಈ ಬಾರಿಯ ಐಪಿಎಲ್ (IPL 2026) ಆರಂಭಕ್ಕೂ ಮುನ್ನವೇ ಕನ್ನಡಿಗರಿಗೆ ಮತ್ತು ಆರ್ಸಿಬಿ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ 'ನಂದಿನಿ' (KMF) ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಈ ಬಾರಿ ಅಧಿಕೃತ ಡೈರಿ ಪಾಲುದಾರನಾಗಿ (Official Dairy Partner) ಸಾಥ್ ನೀಡುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ನಂದಿನಿಯ ವಿಶ್ವಾಸಾರ್ಹತೆ ಮತ್ತು ಆರ್ಸಿಬಿ ತಂಡದ ಕ್ರೀಡಾ ಬದ್ಧತೆ ಈ ಬಾರಿಯ ಐಪಿಎಲ್ನ ಪ್ರಮುಖ ಆಕರ್ಷಣೆಯಾಗಲಿದೆ ಎಂದು ತಿಳಿಸಿದ್ದಾರೆ. ಕಳೆದ ಬಾರಿ ಚಾಂಪಿಯನ್ ಆಗಿ ಸಂಭ್ರಮಿಸಿದ್ದ ಆರ್ಸಿಬಿಗೆ ಈಗ ತವರು ನೆಲದ ಬ್ರ್ಯಾಂಡ್ ಬೆಂಬಲ ಸಿಕ್ಕಿರುವುದು ಅಭಿಮಾನಿಗಳಲ್ಲಿ ಹೊಸ ಚೈತನ್ಯ ತುಂಬಿದೆ.

ಕೆಎಂಎಫ್ ಕೇವಲ ಹಾಲಿನ ಉತ್ಪನ್ನಗಳ ಮಾರಾಟಕ್ಕಷ್ಟೇ ಸೀಮಿತವಾಗದೆ, ಜಾಗತಿಕ ಮಟ್ಟದ ಕ್ರೀಡಾಕೂಟಗಳಲ್ಲಿ ತನ್ನ ಅಸ್ತಿತ್ವವನ್ನು ಸಾಬೀತುಪಡಿಸುತ್ತಿದೆ. ಈಗ ಆರ್ಸಿಬಿಯ ಪ್ರಾಯೋಜಕತ್ವ ವಹಿಸಿಕೊಳ್ಳುವ ಮೂಲಕ ಮೈದಾನದಲ್ಲಿ ರಾರಾಜಿಸಲಿದೆ. ಇದು ಕೇವಲ ವ್ಯವಹಾರವಲ್ಲ, ಬದಲಿಗೆ ಕನ್ನಡಿಗರ ಬ್ರ್ಯಾಂಡ್ ಮತ್ತು ಕನ್ನಡಿಗರ ತಂಡ ಒಂದಾಗಿರುವ ಭಾವನಾತ್ಮಕ ಕ್ಷಣವಾಗಿದೆ.
ಅಭಿಮಾನಿಗಳ ಸಂಭ್ರಮ ಹೇಗಿದೆ?
ಸಾಮಾಜಿಕ ಜಾಲತಾಣಗಳಲ್ಲಿ ಆರ್ಸಿಬಿ ಅಭಿಮಾನಿಗಳು ಈ ಸುದ್ದಿಯನ್ನು ಸಂಭ್ರಮದಿಂದ ಸ್ವಾಗತಿಸುತ್ತಿದ್ದಾರೆ. "ನಮ್ಮ ಹಾಲು ನಂದಿನಿ, ನಮ್ಮ ತಂಡ ಆರ್ಸಿಬಿ" ಎಂಬ ಘೋಷಣೆಗಳು ಮೊಳಗುತ್ತಿವೆ. "ಕಳೆದ ಬಾರಿ ಚಾಂಪಿಯನ್ ಆದ್ವಿ, ಈ ಬಾರಿ ನಂದಿನಿ ಹಾಲಿನ ಶಕ್ತಿಯೊಂದಿಗೆ ಈ ಸಲನೂ ಕಪ್ ನಮ್ದೇ!" ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಮೈದಾನದಲ್ಲಿ ಆರ್ಸಿಬಿ ಆಟಗಾರರು ರನ್ ಮಳೆ ಸುರಿಸುತ್ತಿದ್ದರೆ, ಸ್ಟೇಡಿಯಂನ ಗ್ಯಾಲರಿಯಲ್ಲಿ ನಂದಿನಿ ಉತ್ಪನ್ನಗಳ ರುಚಿಯೂ ಅಭಿಮಾನಿಗಳಿಗೆ ಸಿಗುವ ಸಾಧ್ಯತೆಯಿದೆ.
Karnataka’s pride, the Nandini brand, is now the official dairy partner of Royal Challengers Bengaluru, the champions of the last IPL season.
— CM of Karnataka (@CMofKarnataka) March 24, 2026
The synergy between Nandini’s trusted legacy and RCB’s sporting excellence will be a key highlight of this IPL season.
ಕರ್ನಾಟಕದ ಹೆಮ್ಮೆಯ… pic.twitter.com/YbOgIKVuCR
ನಂದಿನಿಯ ಹೊಸ ಅಧ್ಯಾಯ
ಕರ್ನಾಟಕದ ಜೀವನಾಡಿ, ಕೋಟ್ಯಂತರ ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ 'ನಂದಿನಿ' ಈಗ ಜಾಗತಿಕ ಕ್ರಿಕೆಟ್ ಭೂಪಟದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಚಾಂಪಿಯನ್ ತಂಡ ಆರ್ಸಿಬಿ ಜೊತೆ ಕೈಜೋಡಿಸಿರುವ ನಂದಿನಿ ಈ ಬಾರಿಯ ಐಪಿಎಲ್-2026ರ ಅಧಿಕೃತ ಪ್ರಾಯೋಜಕತ್ವದ ಪಾಲುದಾರನಾಗಿ ಮಿಂಚಲಿದೆ. ಬೆಂಗಳೂರು ಹಾಲು ಒಕ್ಕೂಟದ (BAMUL) ಅಧ್ಯಕ್ಷರಾದ ಡಿ.ಕೆ.ಸುರೇಶ್ ಅವರು ಈ ಬಗ್ಗೆ ಮಾತನಾಡುತ್ತಾ, "ಇದು ನಮ್ಮ ನಂದಿನಿಯ ಪಾಲಿಗೆ ಹೊಸ ಅಧ್ಯಾಯ. ನಮ್ಮ ನಾಡಿನ ಹೆಮ್ಮೆಯ ಬ್ರ್ಯಾಂಡ್ ಅನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಆರ್ಸಿಬಿ ತಂಡಕ್ಕೆ ಪ್ರಾಯೋಜಕತ್ವ ನೀಡಲು ನಿರ್ಧರಿಸಲಾಗಿದೆ" ಎಂದು ಹೆಮ್ಮೆಯಿಂದ ತಿಳಿಸಿದ್ದಾರೆ.
ಈ ಒಪ್ಪಂದದ ಮೂಲಕ, ವಿಶ್ವದಾದ್ಯಂತ ಕೋಟ್ಯಂತರ ವೀಕ್ಷಕರಿರುವ ಐಪಿಎಲ್ ವೇದಿಕೆಯಲ್ಲಿ ನಂದಿನಿ ಲೋಗೋ ರಾರಾಜಿಸಲಿದೆ. ಇದರಿಂದ ಕೇವಲ ಕರ್ನಾಟಕ ಮಾತ್ರವಲ್ಲದೆ, ಅಂತರಾಷ್ಟ್ರೀಯ ಮಟ್ಟದಲ್ಲೂ ನಂದಿನಿ ಉತ್ಪನ್ನಗಳ ಮೌಲ್ಯ ಹೆಚ್ಚಾಗಲಿದೆ. ಕೇವಲ ಪ್ರಾಯೋಜಕತ್ವಕ್ಕೆ ಸೀಮಿತವಾಗದೆ, ಸಾರ್ವಜನಿಕರು ಮತ್ತು ಅಭಿಮಾನಿಗಳು ನಮ್ಮ ನಾಡಿನ ರೈತರ ಬೆನ್ನೆಲುಬಾಗಿರುವ ನಂದಿನಿ ಉತ್ಪನ್ನಗಳನ್ನೇ ಹೆಚ್ಚಾಗಿ ಬಳಸಬೇಕು ಎಂದು ಡಿ.ಕೆ.ಸುರೇಶ್ ಕರೆ ನೀಡಿದ್ದಾರೆ.
-
Namma Metro: ಐಪಿಎಲ್ ಪಂದ್ಯದ ದಿನ ದಟ್ಟಣೆ ಇಲ್ಲದೇ ಓಡಾಡಿ, ಮೆಟ್ರೋ ಸೇವಾವಧಿ ವಿಸ್ತರಣೆ -
PBKS Vs GT: ಪಂಜಾಬ್ ಕಿಂಗ್ಸ್ ಪರ ಕೂಪರ್ ಕಾನೊಲಿ ಹರಿಸಿದ ರನ್ ಮಳೆಗೆ ಕೊಚ್ಚಿಹೋದ ಗುಜರಾತ್ ಟೈಟನ್ಸ್ -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
ಮುಂಬೈನಲ್ಲಿ ಬರೋಬ್ಬರಿ 20,00,00,000 ರೂಪಾಯಿ ಮೌಲ್ಯದ ಅಪಾರ್ಟ್ಮೆಂಟ್ ಖರೀದಿಸಿದ ಶುಭ್ಮನ್ ಗಿಲ್: ವರದಿ -
IPL 2026 Free Ticket: ರಾಜ್ಯದ ಶಾಸಕರಿಗೆ ಪ್ರತಿ ಪಂದ್ಯಕ್ಕೂ 3 ಟಿಕೆಟ್ ಉಚಿತ; ಡಿ.ಕೆ.ಶಿವಕುಮಾರ್ -
ಐಪಿಎಲ್ ಪಂದ್ಯಗಳ ವೇಳೆ ಅಪ್ರಾಪ್ತರನ್ನು ಬಳಸಿ ಮೊಬೈಲ್ ಕಳ್ಳತನ: ಅಂತರರಾಜ್ಯ ಗ್ಯಾಂಗ್ ಬೆಂಗಳೂರಿನಲ್ಲಿ ವಶಕ್ಕೆ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ












Click it and Unblock the Notifications