Railway Alert: ಚನ್ನಸಂದ್ರ ನಿಲ್ದಾಣದಲ್ಲಿ ಕಾಮಗಾರಿ, ವಿವಿಧ ರೈಲುಗಳ ಮಾರ್ಗ ಬದಲಾವಣೆ, ಸಂಚಾರ ರದ್ದು
Bengaluru Train Alert: ಬೆಂಗಳೂರು ವಿಭಾಗದ ಚನ್ನಸಂದ್ರ ನಿಲ್ದಾಣದಲ್ಲಿ ಯಾರ್ಡ್ ರಿಮಾಡೆಲಿಂಗ್ ಕಾಮಗಾರಿಯನ್ನು ನೈಋತ್ಯ ರೈಲ್ವೆ (SWR) ಕೈಗೊಳ್ಳಲಿದೆ. ಈ ಸಂಬಂಧ ಮುಂದಿನ ಏಪ್ರಿಲ್ 15 ರಿಂದ ಮೇ 02 ರವರೆಗೆ ವಿವಿಧ ರೈಲುಗಳ ಸಂಚಾರದಲ್ಲಿ ಬದಲಾವಣೆ, ಕೆಲ ರೈಲುಗಳ ಭಾಗಶಃ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೆಮು ರೈಲುಗಳ ಸಂಚಾರ ರದ್ದು
ಕಾಮಗಾರಿ ನಡೆಯುವ ಸದರಿ ಅವಧಿಯಲ್ಲಿ ಕೆಎಸ್ಆರ್ ಬೆಂಗಳೂರು-ಕೋಲಾರ ಮೆಮು (66591) ರೈಲು, ಕೋಲಾರ-ಬಂಗಾರಪೇಟೆ ಮೆಮು (66593) ರೈಲು, ಬಂಗಾರಪೇಟೆ-ಕೋಲಾರ ಮೆಮು (66594) ರೈಲು, ಕೋಲಾರ-ಬೆಂಗಳೂರು ಕಂಟೋನ್ಮೆಂಟ್ ಮೆಮು (66592) ರೈಲುಗಳನ್ನು ಏಪ್ರಿಲ್ 29 ರಿಂದ ಮೇ 02 ಸಂಚಾರ ರದ್ದುಗೊಳಿಸಲಾಗಿದೆ.

ಮೇ 01 ರಂದು ಬೆಂಗಳೂರು ಸರ್ ಎಂ.ವಿಶ್ವೇಶ್ವರ ಟರ್ಮಿನಲ್ (ಎಸ್‌ಎಂವಿಟಿ) -ಬೀದರ್ ಎಕ್ಸ್‌ಪ್ರೆಸ್ ವಿಶೇಷ ರೈಲು (06539) ರೈಲು ಹಾಗೂ ಮೇ 02 ರಂದು ಬೀದರ್-ಎಸ್‌ಎಂಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ (06540) ರೈಲುಗಳು ರದ್ದಗೊಂಡಿವೆ. ಪ್ರಯಾಣಿಕರು ರದ್ದಾಗ ರೈಲುಗಳ ಮಾಹಿತಿ ಆಧಾರದಲ್ಲಿ ಸಂಚಾರಕ್ಕೆ ಪ್ಲ್ಯಾನ್ ಮಾಡಿಕೊಳ್ಳಬೇಕೆಂದು ಅಧಕಾರಿಗಳು ತಿಳಿಸಿದ್ದಾರೆ.
ಭಾಗಶಃ ರದ್ದಾದ ರೈಲುಗಳ ಪಟ್ಟಿ (ಏ.29 ಮೇ2)
* ಮುಂಬೈ ಸಿಎಸ್ಎಂಟಿ-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (11301) ಯಲಹಂಕ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ರದ್ದಾಗಲಿದೆ.
* ಕೆಎಸ್ಆರ್ ಬೆಂಗಳೂರು-ಮುಂಬೈ ಸಿಎಸ್ಎಂಟಿ ಎಕ್ಸ್‌ಪ್ರೆಸ್ ರೈಲು (11302) ಅದೇ ಅವಧಿಯಲ್ಲಿ ಯಲಹಂಕದಿಂದಲೇ ತನ್ನ ಪ್ರಯಾಣ ಆರಂಭಿಸಲಿದೆ.
* ಹುಬ್ಬಳ್ಳಿ-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (20687) ಯಶವಂತಪುರ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಸಂಚಾರ ರದ್ದುಗೊಂಡಿದೆ.
* ಕೆಎಸ್ಆರ್ ಬೆಂಗಳೂರು-ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು (20688) ಏಪ್ರಿಲ್ 30 ರಿಂದ ಮೇ 02 ರವರೆಗೆ ಯಶವಂತಪುರದಿಂದಲೇ ಸಂಚಾರ ಆರಂಭಿಸುತ್ತದೆ. ಭುವನೇಶ್ವರ-ಕೆಎಸ್ಆರ್ ಬೆಂಗಳೂರು ಪ್ರಶಾಂತಿ ಎಕ್ಸ್‌ಪ್ರೆಸ್ ರೈಲು (18463) ಏಪ್ರಿಲ್ 30 ಮತ್ತು ಮೇ 01 ರಂದು ಯಲಹಂಕ ಹಾಗೂ ಕೆಎಸ್ಆರ್ ಬೆಂಗಳೂರು ನಡುವೆ ಸಂಚರಿಸುವುದಿಲ್ಲ.
* ಕೆಎಸ್ಆರ್ ಬೆಂಗಳೂರು-ಭುವನೇಶ್ವರ ಪ್ರಶಾಂತಿ ಎಕ್ಸ್‌ಪ್ರೆಸ್ ರೈಲು (18464) ಮೇ 01 ಮತ್ತು 02 ರಂದು ಯಲಹಂಕದಿಂದಲೇ ಪ್ರಯಾಣ ಆರಂಭಿಸುತ್ತದೆ.
* ಮಾರ್ಗ ಬದಲಾವಣೆಯ ವಿಷಯದಲ್ಲಿ ಕೆಎಸ್ಆರ್ ಬೆಂಗಳೂರು-ನಾಂದೇಡ್ ಎಕ್ಸ್‌ಪ್ರೆಸ್ (16593) ಏಪ್ರಿಲ್ 15ರಿಂದ ಮೇ 02ರವರೆಗೆ ಯಶವಂತಪುರ ಮತ್ತು ಯಲಹಂಕ ಮಾರ್ಗವಾಗಿ ಸಂಚರಿಸಲಿದೆ. ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದ ನಿಲುಗಡೆಯನ್ನು ರದ್ದುಗೊಳಿಸಲಾಗಿದೆ.
ಈ ರೈಲುಗಳ ಮಾರ್ಗ ಬದಲಾವಣೆ
ಏಪ್ರಿಲ್ 19 ಮತ್ತು 26 ರಂದು ಕೊಯಮತ್ತೂರು-ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲು (12647) ಕೃಷ್ಣರಾಜಪುರಂ, ಎಸ್ಎಂವಿಟಿ ಬೆಂಗಳೂರು, ಯಶವಂತಪುರ, ಯಲಹಂಕ ಮತ್ತು ಧರ್ಮಾವರಂ ಮಾರ್ಗವಾಗಿ ಸಂಚಾರ ಮಾಡುತ್ತದೆ.
ಏಪ್ರಿಲ್ 29 -ಮೇ 02 ರವರೆಗೆ ಅದೇ ರೀತಿ ಕಾಚೆಗುಡ-ಅಶೋಕಪುರಂ ಎಕ್ಸ್‌ಪ್ರೆಸ್ (12785) ರೈಲು ಮತ್ತು ಅಶೋಕಪುರಂ-ಕಾಚೆಗುಡ ಎಕ್ಸ್‌ಪ್ರೆಸ್ (12786) ರೈಲಿನ ಮಾರ್ಗ ಬದಲಾವಣೆ ಆಗಿದೆ. ಈ ರೈಲುಗಳು ಬೆಂಗಳೂರು ಪೂರ್ವ ಹಾಗೂ ಕಂಟೋನ್ಮೆಂಟ್ ನಿಲ್ದಾಣಗಳಲ್ಲಿ ನಿಲುಗಡೆ ನೀಡುವುದಿಲ್ಲ. ಕೆಎಸ್ಆರ್ ಬೆಂಗಳೂರು-ನಾಂದೇಡ್ ಎಕ್ಸ್‌ಪ್ರೆಸ್ ರೈಲಿನ(16593) ವೇಳಾಪಟ್ಟಿಯನ್ನು ಏಪ್ರಿಲ್ 15 ರಿಂದ ಮೇ 02 ರವರೆಗೆ 75 ನಿಮಿಷಗಳ ಕಾಲ ಮುಂದೂಡಲಾಗಿದೆ. ಈ ಮೇಲಿನ ಎಲ್ಲ ಅಡಚಣೆಗೆ ಪ್ರಯಾಣಿಕರು ಸಹಕರಿಸಬೇಕು. ಜೊತೆಗೆ ವೇಳಾಪಟ್ಟಿ, ಮಾರ್ಗ ಬದಲಾವಣೆ, ಸಮಯ ನೋಡಿಕೊಂಡು ಪ್ರಯಾಣಕ್ಕೆ ಪ್ಲ್ಯಾನ್ ಮಾಡಿಕೊಳ್ಳುವಂತೆ ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications