Ration Card: ಜೂನ್ 30ರೊಳಗೆ ಈ ಕೆಲ್ಸ ಮಾಡದಿದ್ರೆ ಪಡಿತರ ಚೀಟಿ ರದ್ದು
Ration Card: ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದಾಗಿದೆ. ಈ ರೇಷನ್ ಕಾರ್ಡ್ ಸಂಬಂಧ ಜನರಿಗೆ ಅನುಕೂಲವಾಗುವಂತೆ ಬದಲಾವಣೆಗಳನ್ನು ಜಾರಿ ಮಾಡುತ್ತಲ್ಲಿರುತ್ತದೆ. ಹಾಗೆಯೇ ಇದೀಗ ಈ ದಿನಾಂಕದೊಳಗೆ ಕೆವೈಇಸಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದೆ. ಹಾಗಾದ್ರೆ ಎಲ್ಲಿಯವರೆಗೂ ಇದಕ್ಕೆ ಅವಕಾಶ ಇದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ಕರ್ನಾಟಕದಲ್ಲಿ ರಾಜ್ಯ ಸರ್ಕಾರವು ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದಪಡಿಸಲು ಮುಂದಾಗಿದ್ದು, ಇಂತಹವರನ್ನು ಎಪಿಎಲ್ ಕಾರ್ಡ್‌ಗೆ ವರ್ಗಾವಣೆ ಮಾಡುವ ಕೆಲಸವನ್ನು ಮುಂದುವರೆಸಿತ್ತು. ಇದರ ಉದ್ದೇಶದ ಅರ್ಹರಿಗೆ ಸಿಗಬೇಕಾದ ಪಡಿತರ ದುರ್ಬಳಕೆಯನ್ನು ತಡೆಯುವುದಾಗಿತ್ತು. ಈಗಲೂ ಈ ಮಹತ್ವದ ಕಾರ್ತ ಮುಂದುವರೆದಿದೆ. ಅಲ್ಲದೆ, ಪಡಿತರ ಚೀಟಿ ಹೊಂದಿರುವವರು ಮತ್ತೊಂದು ಮಹತ್ವದ ಮಾಹಿತಿಯನ್ನು ಗಮನಿಸಲೇಬೇಕಾಗುತ್ತದೆ.

ಕೊನೇ ದಿನಾಂಕ ಯಾವಾಗ?: ಕೇಂದ್ರ ಸರ್ಕಾರವು ಇದೀಗ ರೇಷನ್ ಕಾರ್ಡ್ ಫಲಾನುಭವಿಗಳಿಗೆ ನಿರ್ದಿಷ್ಟ ಸೂಚನೆಯೊಂದನ್ನು ನೀಡಿದೆ. ಜೂನ್ 30ರೊಳಗೆ ತಮ್ಮ (ಬಿಪಿಎಲ್, ಎಪಿಎಲ್ ಇತ್ಯಾದಿ) ಪಡಿತರ ಚೀಟಿಗಳಿಗೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದೆ. ಒಂದು ವೇಳೆ ನೀಡಿರುವ ಗಡುವಿನೊಳಗೆ ಈ ಪ್ರಕ್ರಿಯೆ ಆಗದಿದ್ದರೆ, ಕಾರ್ಡ್ ರದ್ದುಪಡಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇ-ಕೆವೈಸಿ ಪ್ರಕ್ರಿಯೆಯು ನಿಮ್ಮ ಆಧಾರ್ ಕಾರ್ಡ್ ಮೂಲಕ ನಡೆಯುತ್ತದೆ. ಇದರಲ್ಲಿ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಗುರುತಿನ ಪರಿಶೀಲನೆಯನ್ನು ನಡೆಸಲಾಗುತ್ತದೆ. ಇದರಿಂದ ನಕಲಿ ಕಾರ್ಡ್‌ಗಳು, ಅನರ್ಹ ವ್ಯಕ್ತಿಗಳ ಲಾಭ ಪಡೆಯುವುದು, ಮರಣದ ನಂತರವೂ ಕಾರ್ಡ್ ಬಳಕೆಯಂತಹ ಸಮಸ್ಯೆಗಳನ್ನು ತಡೆಯಲು ಸಾಧ್ಯ ಆದಂತಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಇದಕ್ಕೂ ಮುಂಚೆ ಮಾರ್ಚ್ 31, 2025 ಈ ಪ್ರಿಕ್ರಿಯೆಗೆ ಕೊನೆ ದಿನಾಂಕ ಆಗಿತ್ತು. ಆದರೆ, ತಾಂತ್ರಿಕ ದೋಷಗಳಿಂದ ಅಡಚಣೆಗಳು ಮತ್ತು ಮಾಹಿತಿ ಕೊರತೆಯಿಂದಾಗಿ ಈ ಗಡುವನ್ನು ಇದೇ ಜೂನ್ 30, 2025ಕ್ಕೆ ವಿಸ್ತರಣೆ ಮಾಲಡಾಗಿದೆ. ಈ ಗಡುವಿನೊಳಗೆ ಪಡಿತರ ಚೀಟಿದಾರರು ಇದರ ಪ್ರಯೋಜನ ಪಡೆಯಬೇಕಾಗಿದೆ.
ಇ-ಕೆವೈಸಿ ಪ್ರಕ್ರಿಯೆಯನ್ನು ಆಫ್‌ಲೈನ್ ಅಥವಾ ಆನ್‌ಲೈನ್‌ನಲ್ಲೂ ಕೂಡ ಮಾಡಿಸಬಹುದು. ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿ ಅಥವಾ ಸೈಬರ್ ಸೆಂಟರ್‌ಗೆ ಹೋಗಿಯೂ ಮಾಡಿಸಬಹದು. ಈ ಪ್ರಕ್ರಿಯೆಗೆ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ತೆಗೆದುಕೊಂಡು ಹೋಗಬೇಕಾಗುತ್ತದೆ. ಆಗ ಅಲ್ಲಿ ಪಿಒಎಸ್ ಯಂತ್ರದ ಮೂಲಕ ಬಯೋಮೆಟ್ರಿಕ್ ವೆರಿಫಿಕೇಶನ್ ಮಾಡಲಾಗುತ್ತದೆ.
ಆನ್‌ಲೈನ್ ಪ್ರಕ್ರಿಯೆಗೆ, ನೀವು Mera Ration ಅಥವಾ Aadhaar Face RD ಅಪ್ಲಿಕೇಶನ್‌ಗಳನ್ನು Google Play Storeನಿಂದ ಡೌನ್‌ಲೋಡ್ ಮಾಡಬಹುದು. ಆಧಾರ್ ನಂಬರನ್ನು ನಮೂದಿಸಿ, ಒಟಿಪಿ ಮೂಲಕ ದೃಢೀಕರಣ ಮಾಡಿ, ಬಳಿಕ ನಿಮ್ಮ ಮುಖವನ್ನು ಸ್ಕ್ಯಾನ್ ಮಾಡುವ ಮೂಲಕ ಪ್ರಕ್ರಿಯೆಯನ್ನು ಮುಗಿಸಲಾಗುತ್ತದೆ. ಈ ಕ್ರಮವನ್ನು ಸರ್ಕಾರವು ಪಾರದರ್ಶಕತೆಯ ಉದ್ದೇಶದಿಂದ ಮಾಡಲಿದೆ. ಅರ್ಹರಿಗೆ ಆಗುವ ತೊಂದರೆಹಳು ತಪ್ಪಿದಂತಾಗಲಿದೆ. ಒಟ್ಟಿನಲ್ಲಿ ಅರ್ಹರಿಗೆ ಸಿಗಬೇಕಾದ ಪಡಿತರ ಚೀಟಿ ಸರಿಯಾಗಿ ಸಿಕ್ಕಂತಾಗಲಿದ್ದು, ಕಳ್ಳಾಟ ಮುಂದುವರೆಸುವ ಅನರ್ಹರಿಗೆ ಬ್ರೇಕ್ ಬೀಳಿಲಿದೆ.












Click it and Unblock the Notifications