Ration Card: ಬಿಪಿಎಲ್ & ಎಪಿಎಲ್ ಕಾರ್ಡ್‌ದಾರರಿಗೆ ಶಾಕ್‌: ಈ ಕಾರಣಕ್ಕೆ ಸಿಗ್ತಿಲ್ಲ ರೇಷನ್!

ರಾಜ್ಯದಲ್ಲಿ ರೇ‌ಷನ್ ಕಾರ್ಡ್‌ (ಪಡಿತರ ಚೀಟಿ) ವಿತರಣೆಯಲ್ಲಿ ಹೊಸ ಸಮಸ್ಯೆ ಎದುರಾಗಿದೆ. ಈ ಸಮಸ್ಯೆಯಿಂದ ಲಕ್ಷಾಂತರ ಜನ ರೇಷನ್‌ ಕಾರ್ಡ್‌ದಾರರಿಗೆ ಪಡಿತರ ಚೀಟಿ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಆಹಾರ ಮತ್ತು ಸರಬರಾಜು ಇಲಾಖೆಯು ಈ ನಿಟ್ಟಿನಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳದೆ ಇರುವುದರಿಂದ ರೇಷನ್‌ ಅಂಗಡಿಗಳ ಮೇಲೆ ಅವಲಂಬಿತವಾಗಿರುವ ಕುಟುಂಬಗಳು ಪರದಾಡುತ್ತಿವೆ.

ರಾಜ್ಯ ಆಹಾರ ಇಲಾಖೆಯಲ್ಲಿ ಸರ್ವರ್‌ ಸಮಸ್ಯೆ ಮುಂದುವರಿದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ವರ್‌ ಡೌನ್‌ ಸಮಸ್ಯೆ ಎದುರಾಗಿದ್ದು, ನ್ಯಾಯ ಬೆಲೆ ಅಂಗಡಿಗಳ ಮುಂದೆ ಜನ ಸಾಲುಗಟ್ಟಿ ನಿಲ್ಲುವುದು ಕಾಣಿಸುತ್ತಿದೆ. ರೇಷನ್‌ಗಾಗಿ ಜನ ತಾಸುಗಟ್ಟಲೆ ಅಂಗಡಿಗಳ ಮುಂದೆ ನಿಂತು ಪರದಾಡುತ್ತಿದ್ದಾರೆ. ಆದರೆ, ಆಹಾರ ಇಲಾಖೆ ಮಾತ್ರ ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ.

Ration Card Shock for BPL amp amp APL card holders Ration not available for this reason

ಹೊಸ ತಂತ್ರಾಂಶದಿಂದ ಪರದಾಟ: ಇನ್ನು ರಾಜ್ಯದಲ್ಲಿ ಆಹಾರ ಇಲಾಖೆಯು ಪಡಿತರ ವಿತರಣೆಯಲ್ಲಿ ಅಳವಡಿಸಿಕೊಂಡಿರುವ ಹೊಸ ತಂತ್ರಾಂಶದಿಂದ ಭಾರೀ ಸಮಸ್ಯೆ ಎದುರಾಗಿದೆ. ಈಗಾಗಲೇ ಸರ್ವಸ್‌ ಸಮಸ್ಯೆ ಹಲವು ತಿಂಗಳುಗಳಿಂದ ಇದೆ. ಈ ನಡುವೆ ಸರ್ವರ್‌ ಸಮಸ್ಯೆ ಸ್ವಲ್ಪ ಇಳಿಕೆಯಾಗಿತ್ತು. ಆದರೆ, ಈಗ ಉಗ್ರ ಸ್ವರೂಪವನ್ನು ಪಡೆದುಕೊಂಡಿರುವುದರಿಂದ ಜನ ಪರದಾಡುತ್ತಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಸರ್ವರ್‌ ಕೈ ಕೊಡುತ್ತಿದೆ.

ಇದರಿಂದ ಹಲವರಿಗೆ ಸಕಾಲದಲ್ಲಿ ರೇಷನ್‌ ಸಿಗ್ತಿಲ್ಲ. ಇನ್ನೂ ಆಘಾತಕಾರಿ ವಿಷಯವೆಂದರೆ ಬಿಪಿಎಲ್‌, ಎಪಿಎಲ್ ಕಾರ್ಡ್‌ದಾರರು ಹಾಗೂ ಅಂತ್ಯೋದಯ ಸೇರಿದಂತೆ 1.49 ಕೋಟಿ ಜನ ಪಡಿತರದಾರರಿಗೆ (ರೇಷನ್‌ ಕಾರ್ಡ್‌ ಹೊಂದಿರುವವರಿಗೆ) ರೇಷನ್‌ ವಿತರಣೆ ಮಾಡಲಾಗುತ್ತದೆ. ಆದರೆ, ಇಲ್ಲಿಯವರೆಗೆ ಕೇವಲ ಅಂದಾಜು 13 ಲಕ್ಷ ಜನರಿಗೆ ಮಾತ್ರ ರೇಷನ್‌ ಸಿಕ್ಕಿದೆ. ತಿಂಗಳ ಕೊನೆ ಹಾಗೂ ಹಣಕಾಸಿನ ಬಿಕ್ಕಟ್ಟಿನ ನಡುವೆ ಜನ ಪರದಾಡುವಂತಾಗಿದೆ.

ಅಲ್ಲದೇ ರಾಜ್ಯದಲ್ಲಿ ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳಿನಲ್ಲಿ ಸಾಲು ಸಾಲು ಹಬ್ಬಗಳು ಇವೆ. ಕೆಲಸ ಬಿಟ್ಟು ಜನ ಇದೀಗ ರೇಷನ್‌ಗಾಗಿ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ದಿನಂಪ್ರತಿ ಕಾಯುವ ಪರಿಸ್ಥಿತಿ ಸೃಷ್ಟಿಯಾಗಿದೆ. ಆಹಾರ ಇಲಾಖೆಯ ಹೊಸ ತಂತ್ರಾಂಶದ ಬಗ್ಗೆ ಪಡಿತರ ಚೀಟಿದಾರರು ಆಕ್ರೋಶಗೊಂಡಿದ್ದು, ಆಹಾರ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ. ರೇಷನ್‌ ಅಂಗಡಿಗಳ ಮುಂದೆ ಬಯೋಮೆಟ್ರಿಕ್‌ ನೀಡಿ ರೇಷನ್‌ ಪಡೆಯುವುದಕ್ಕೆ ಜನ ನಿಲ್ಲುತ್ತಿದ್ದಾರೆ. ಆದರೆ, 10 ಜನಕ್ಕೂ ನಿತ್ಯ ರೇಷನ್‌ ಸಿಗ್ತಿಲ್ಲ. ದಿನಾ ಬಂದು ಹೋಗುವುದೇ ಕೆಲಸವಾಗಿದೆ ಎಂದು ರೇಷನ್‌ ಕಾರ್ಡ್‌ದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೇಷನ್‌ ಸಮಸ್ಯೆಗೆ ಕಾರಣವೇನು: ರೇಷನ್‌ ನೀಡುವುದಕ್ಕೆ ಮುಖ್ಯವಾಗಿ ಸಮಸ್ಯೆ ಆಗುತ್ತಿರುವುದು ಆಹಾರ ಇಲಾಖೆಯ ಹೊಸ ತಂತ್ರಾಂಶ ಅಳವಡಿಕೆ. ರೇಷನ್‌ನಲ್ಲಿ ಮೋಸ ತಪ್ಪಿಸುವುದು ಹಾಗೂ ಅರ್ಹರಿಗೆ ರೇಷನ್‌ ತಲುಪಿಸುವ ಉದ್ದೇಶದಿಂದ ಆಹಾರ ಇಲಾಖೆಯು ಹೊಸ ತಂತ್ರಾಂಶವನ್ನು ಅಳವಡಿಸಿಕೊಂಡಿದೆ. ಆದರೆ, ಅದು ಬಡವರಿಗೆ ಸಂಕಷ್ಟವನ್ನು ತಂದೊಡ್ಡಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರದ ತಂತ್ರಾಂಶದ ಮೂಲಕವೇ ರೇಷನ್‌ ನೀಡಲಾಗುತ್ತಿತ್ತು. ಇದರಿಂದ ಭಾರೀ ಸಮಸ್ಯೆ ಎದುರಾಗಿತ್ತು. ಸರ್ವರ್‌ ಕೈಕೊಡುತ್ತಿತ್ತು. ಆದರೆ, ಇದೀಗ ಹೊಸ ತಂತ್ರಾಂಶ ಅಳವಡಿಸಿಕೊಳ್ಳಲಾಗಿದೆ. ಈಗ ಹಳೇ ಸಮಸ್ಯೆ ಹೊಸ ರೂಪದಲ್ಲಿ ಎದುರಾಗಿದೆ ಅಷ್ಟೇ.

ಆಹಾರ ಇಲಾಖೆಯು ಕೆಎಸ್​ಡಿಸಿ ಸಹಯೋಗದಲ್ಲಿ ಹೊಸ ತಂತ್ರಾಂಶ ಪರಿಚಯಿಸಿದೆ. ಈ ತಂತ್ರಾಂಶದಲ್ಲಿಲ್ಲೂ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದೆ. ಇದರಿಂದ ರೇಷನ್‌ ಕಾರ್ಡ್‌ದಾರರು ಬೆರಳಚ್ಚು (ಬಯೋಮೆಟ್ರಿಕ್) ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ 15ರಿಂದ 20 ದಿನಗಳಿಂದ ಜನ ಪರದಾಡುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+